ರೈತರಿಂದ ಭಾರತ್ ಬಂದ್ ಕರೆ; 5 ಅಂಶಗಳನ್ನು ತಿಳಿಯಿರಿ

ನವದೆಹಲಿ, ಡಿಸೆಂಬರ್ 08 : ಕೃಷಿ ನೀತಿಗಳ ವಿರುದ್ಧ ರೈತರು ನಡೆಸುತ್ತಿರುವ ದೇಶಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡುವೆ.

ಮಂಗಳವಾರ ಭಾರತ್ ಬಂದ್‌ ನಡೆಯುತ್ತಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ತನಕ ರೈತರು ಪ್ರತಿಭಟನೆ ನಡೆಸಲಿದ್ದಾರೆ. ದೇಶದ ವಿವಿಧ ಮುಂಜಾನೆಯೇ ಪ್ರತಿಭಟನೆ, ರೈಲು ಮತ್ತು ರಸ್ತೆ ತಡೆಯನ್ನು ನಡೆಸಲಾಗಿದೆ.

ಭಾರತ್ ಬಂದ್ ಹಿನ್ನಲೆಯಲ್ಲಿ ದೆಹಲಿ-ಮೀರತ್ ಗಡಿಯನ್ನು ಬಂದ್ ಮಾಡಲಾಗಿದೆ. ದೆಹಲಿ ಮತ್ತು ಹರ್ಯಾಣ ರಾಜ್ಯಗಳ ಗಡಿ ಪ್ರದೇಶದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ರೈತರು ಹೇಳಿದ್ದಾರೆ. ತುರ್ತು ವಾಹನ, ಅಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದು ರೈತರು ಹೇಳಿದ್ದಾರೆ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಪ್ಪು ಪಟ್ಟಿ ಧರಿಸಿ ಕೆಲಸ

ಕಪ್ಪು ಪಟ್ಟಿ ಧರಿಸಿ ಕೆಲಸ

ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಬ್ಯಾಂಕ್ ಯೂನಿಯನ್‌ಗಳು ನೈತಿಕ ಬೆಂಬಲವನ್ನು ನೀಡಿವೆ. ಉದ್ಯೋಗಿಗಳು ಬಂದ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಪ್ಪುಪಟ್ಟಿಯನ್ನು ಧರಿಸಿ ಅವರು ಕೆಲಸ ಮಾಡಲಿದ್ದಾರೆ.

ಪ್ರತ್ಯೇಕ ಸಂಚಾರಿ ಮಾರ್ಗಸೂಚಿ

ಪ್ರತ್ಯೇಕ ಸಂಚಾರಿ ಮಾರ್ಗಸೂಚಿ

ದೆಹಲಿ ಮತ್ತು ಹರ್ಯಾಣ ಪೊಲೀಸರು ವಾಹನ ಸವಾರರಿಗೆ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ದೆಹಲಿಗೆ ಬರುವವರು, ಹೊರ ಹೋಗುವವರು ಇದನ್ನು ಪಾಲನೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ 1, 19, 24, 44 ಮತ್ತು 48ರಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಪಂಜಾಬ್‌ ಸಂಪೂರ್ಣ ಬಂದ್

ಪಂಜಾಬ್‌ ಸಂಪೂರ್ಣ ಬಂದ್

ಕಾಂಗ್ರೆಸ್ ಆಡಳಿತ ಇರುವ ಪಂಜಾಬ್‌ನಲ್ಲಿ ಸಂಪೂರ್ಣ ಬಂದ್ ಆಗಿದೆ. ರಾಜ್ಯದ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಿದ್ದಾರೆ. ಚಂಡೀಗಢ್‌ನಲ್ಲಿ ಮಾರುಕಟ್ಟೆಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ನೀಡಲಾಗಿದೆ.

ಮುಂಬೈ ನಗರಕ್ಕೂ ಬಂದ್ ಬಿಸಿ

ಮುಂಬೈ ನಗರಕ್ಕೂ ಬಂದ್ ಬಿಸಿ

ದೆಹಲಿಯಂತೆ ಮುಂಬೈ ನಗರಕ್ಕೂ ಬಂದ್ ಬಿಸಿ ತಟ್ಟಿದೆ. ಹಣ್ಣು, ತರಕಾರಿಗಳ ಪೂರೈಕೆ ಸ್ಥಗಿತವಾಗಿದೆ. ವಾಸಿ ಮಂಡಿ ಸಂಪೂರ್ಣ ಬಂದ್ ಆಗಿದೆ. ಕ್ಯಾಬ್, ಆಟೋಗಳು ಸಂಚಾರ ನಡೆಸುತ್ತಿದ್ದು, ಲಾರಿಗಳು ರಸ್ತೆಗೆ ಇಳಿದಿಲ್ಲ. ಮುಂಬೈ ಪೊಲೀಸರು ಗಸ್ತನ್ನು ಹೆಚ್ಚಿಸಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ.

ಆರೋಪ ಪ್ರತ್ಯಾರೋಪ

ಬಂದ್‌ಗೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಬಂದ್‌ ಬೆಂಬಲಿಸುವ ಪಕ್ಷಗಳ ವಿರುದ್ಧ ಕೇಂದ್ರ ಸಚಿವರು ಆರೋಪಗಳನ್ನು ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+