• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟ್ ಕಾಯಿನ್ ಅಕ್ರಮದ ಬಗ್ಗೆ ಹ್ಯಾಕರ್ ಶ್ರೀಕೃಷ್ಣ ಮೊದಲ ಭಾರಿ ಕೊಟ್ಟ ಸ್ಟೇಟ್‌ಮೆಂಟ್!

|
Google Oneindia Kannada News

ಬೆಂಗಳೂರು, ನ. 10: ಬಿಟ್ ಕಾಯಿನ್ ಬಗ್ಗೆ ನನಗೇನೂ ಗೊತ್ತಿಲ್ಲ. ಪೊಲೀಸರು ಹೇಳುತ್ತಿರುವುದು ಶುದ್ಧ ಸುಳ್ಳು. ಕೋಟಿ- ಕೋಟಿ ಹಣ ಸೀಜ್ ಆಗಿರುವ ಬಗ್ಗೆಯೂ ನನಗೇನೂ ಗೊತ್ತಿಲ್ಲ ! ರಾಯಲ್ ಆರ್ಕೀಡ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಹ್ಯಾಕರ್ ಶ್ರೀಕೃಷ್ಣ ಕೊಟ್ಟ ಪ್ರತಿಕ್ರಿಯೆ ಇದು.

ಕಳೆದ ಶನಿವಾರ ಜೀವನಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಯಲ್ ಆರ್ಕೀಡ್ ಹೋಟೆಲ್‌ನಲ್ಲಿ ತಂಗಿದ್ದ ಹ್ಯಾಕರ್ ಶ್ರೀಕಿಯನ್ನು ಭೇಟಿ ಮಾಡಲು ತೆರಳಿದ್ದ ಆತನ ಆಪ್ತ ವಿಷ್ಣುಭಟ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ. ಈ ಪ್ರಕರಣದಲ್ಲಿ ವಿಷ್ಣುಭಟ್‌ನನ್ನು ಬಂಧಿಸಿದ್ದರು. ಹೋಟೆಲ್ ನಲ್ಲಿಯೇ ತಂಗಿದ್ದ ಹ್ಯಾಕರ್ ಶ್ರೀಕಿಯನ್ನು ಜೀವನ ಭೀಮಾನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣನನ್ನು ಒಂದು ದಿನ ಮಟ್ಟಿಗೆ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಮುಖ ಆರೋಪಿ ವಿಷ್ಣುಭಟ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಯಲ್ ಆರ್ಕೀಡ್ ಹೋಟೆಲ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಶ್ರೀಕೃಷ್ಣ ಇದೇ ಮೊದಲ ಬಾರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಏಕಾಂಗಿಯಾಗಿ ಬಂದ ಹ್ಯಾಕರ್ ಶ್ರೀಕೃಷ್ಣನಿಗಾಗಿ ಮಾಧ್ಯಮ ಪ್ರತಿನಿಧಿಗಳು ಕಾದು ಕುಳಿತಿದ್ದರು. ಬಿಡುಗಡೆಯಾದ ಕೂಡಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾನೆ. ಪತ್ರಕರ್ತರ ನಾನಾ ಪ್ರಶ್ನೆಗಳಿಗೆ ಉತ್ತರ ನೀಡದ ಹ್ಯಾಕರ್ ಶ್ರೀಕೃಷ್ಣ ಅಂತಿಮವಾಗಿ ಪ್ರತಿಕ್ರಿಯೆ ನೀಡಿದ.


ಪ್ರಕರಣವೇ ಬೋಗಸ್

"ಬಿಟ್ ಕಾಯಿನ್ ಪ್ರಕರಣವೇ ಬೋಗಸ್. ಪೊಲೀಸರು ಹೇಳುತ್ತಿರುವುದು ಸಂಪೂರ್ಣ ಸುಳ್ಳು. ಕೋಟಿ ಕೋಟಿ ಹಣ ಜಪ್ತಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ" ಎಂದು ಉತ್ತರ ನೀಡಿದ್ದಾನೆ. ಏನೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ ಎಂಬ ಉತ್ತರ ಬಿಟ್ಟು ಆತ ಯಾವುದೇ ಸ್ಪಷ್ಟನೆ ನೀಡಲು ನಿರಾಕರಿಸಿದ್ದಾನೆ. ಆ ಬಳಿಕ ಆಟೋ ಹಿಡಿದು ಹೆಬ್ಬಾಳಕ್ಕೆ ಏಕಾಂಗಿಯಾಗಿ ತೆರಳಿದ್ದಾನೆ. ಜಾಮೀನು ಬಗ್ಗೆ ಕೂಡ ತನಗೆ ಏನೂ ಗೊತ್ತಿಲ್ಲ ಎಂದಷ್ಟೇ ಉತ್ತರ ನೀಡಿದ್ದಾನೆ.

ಒಂದೆಡೆ ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕಾರಣದಲ್ಲಿ ದೊಟ್ಟ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಬಿಟ್ ಕಾಯಿನ್ ಹರಗರಣದಲ್ಲಿ ಆಡಳಿತಾರೂಢ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ. ಈ ಪ್ರಕರಣ ಕುರಿತು ತನಿಖೆ ನಡೆಸಿದರೆ ಬಿಜೆಪಿ ನಾಯಕರು ಜೈಲಿಗೆ ಹೋಗುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರವಾಗಿ ಮೊದಲು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಪ್ರಸ್ತಾಪಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದರು.

Bitcoin scam in Karnataka: Hacker Srikrishna first statement about bitcoin scam

ಇದರ ಮುಂದುವರೆದ ಭಾಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬಿಟ್ ಕಾಯಿನ್ ಅಕ್ರಮದಲ್ಲಿ ಕಾಂಗ್ರೆಸ್ ಮುಖಂಡನ ಪುತ್ರ ಇದ್ದಾನೆ ಎಂದು ಹೇಳುತ್ತಿದ್ದಾರೆ. ಸರ್ಕಾರಕ್ಕೆ ತಾಕತ್ತಿದ್ದರೆ ಅದನ್ನು ಸಾಭೀತು ಮಾಡಲಿ. ಬಿಟ್‌ಕಾಯಿನ್ ಅಕ್ರಮ ನಿಜವಾಗಿ ತನಿಖೆ ನಡೆಸಿದರೆ ಅವರಿಗೆ ಮುಳುವಾಗಲಿದೆ. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೇರ ಸವಾಲು ಹಾಕಿದ್ದಾರೆ.

ಇದಕ್ಕೆ ತಿರುಗೇಟು ಕೊಟ್ಟಿರುವ ಬಿಜೆಪಿ ನಾಯಕರು, ಬಿಟ್ ಕಾಯಿನ್ ಅಕ್ರಮದ ಆರೋಪಿ ಜತೆ ಯಾವ ನಾಯಕರ ಪುತ್ರರು ಶಾಮೀಲಾಗಿದ್ದಾರೆ ಎಂಬುದು ಗೊತ್ತಿದೆ. ಪ್ರಕರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಕೋರಿ ಪತ್ರ ಬರೆಯಲಾಗಿದೆ. ಪ್ರಕರಣ ಹೊರ ಬಂದ ನಂತರ ಯಾರು ಶಾಮೀಲಾಗಿದ್ದಾರೆ ಎಂಬುದು ಹೊರಗೆ ಬರಲಿದೆ ಎಂದು ಕಾಂಗ್ರೆಸ್ ನಾಯಕರತ್ತ ಬೊಟ್ಟು ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಬಿಟ್ ಕಾಯಿನ್ ಅಕ್ರಮದ ಆರೋಪ ಪ್ರತ್ಯಾರೋಪ ಮುಂದುವರೆದಿದೆ. ಈ ಸಂದರ್ಭದಲ್ಲಿ ಪ್ರಕರಣದ ಕೇಂದ್ರ ಬಿಂದು ಆಗಿರುವ ಹ್ಯಾಕರ್ ಶ್ರಿಕೃಷ್ಣ ತನಗೆ ಏನೂ ಗೊತ್ತಿಲ್ಲ. ಬಿಟ್ ಕಾಯಿನ್ ಅಕ್ರಮವೇ ಸುಳ್ಳು ಎಂದು ಸಾಬೀತು ಮಾಡಲು ಹೊರಟಿದ್ದಾನೆ.

ತನಿಖೆಗೆ ತಜ್ಞರೆ ಬೇಕು:

   ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ರಿಲೀಸ್ | Oneindia Kannada

   ಹ್ಯಾಕರ್ ಶ್ರೀಕೃಷ್ಣನ ವಿರುದ್ಧ ಡ್ರಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿ ಹ್ಯಾಕರ್ ಶ್ರೀಕೃಷ್ಣನ ಹ್ಯಾಕಿಂಗ್ ಲೀಲೆಗಳ ಬಗ್ಗೆ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದಾರೆ. ಹ್ಯಾಕರ್ ಶ್ರೀಕೃಷ್ಣನ ಹ್ಯಾಕಿಂಗ್ ಅಕ್ರಮಗಳು ದೇಶದ ಗಡಿಗಳು ದಾಟಿವೆ. ಅಕ್ರಮದ ಬಗ್ಗೆ ಸಾಕ್ಷಾಧಾರಗಳು ಸಂಗ್ರಹ ಮಾಡುವುದು ದೊಡ್ಡ ಕೆಲಸ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ನಡೆದಿರುವ ಕಾರಣ ಇದನ್ನು ಕೇಂದ್ರದ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕು. ತನಿಖಾಧಿಕಾರಿಗಳಿಗೆ ಹ್ಯಾಕಿಂಗ್, ಬಿಟ್ ಕಾಯಿನ್ ಬಗ್ಗೆ ಸಮಗ್ರ ಜ್ಞಾನ ಹೊಂದಿದವರು ಆಗಿದ್ದರೆ ಮಾತ್ರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಾಧ್ಯ. ಹ್ಯಾಕಿಂಗ್ ಮಾಡುವುದೇ ಯಾವುದೇ ದಾಖಲೆಗಳು ಇಲ್ಲದೇ, ಸುಳಿವು, ಸಾಕ್ಷಾಧಾರ ಬಿಡದೇ ಎಸಗಿರುವ ಅಕ್ರಮ. ಈ ಪ್ರಕರಣವನ್ನು ತನಿಖೆ ನಡೆಸಲು ತಾಂತ್ರಿಕ ಪರಿಣಿತಿಬೇಕು. ಮಿಗಿಲಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವ ಅಗತ್ಯವಿದೆ. ಹೊರ ದೇಶಗಳಿಗೆ ಹೋಗಿ ತನಿಖೆ ನಡೆಸುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯವಲ್ಲ, ಅದಕ್ಕೂ ಮೀರಿದ ಸಂಸ್ಥೆಗಳೇ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರ ಬರಲಿಕ್ಕೆ ಸಾಧ್ಯ ಎಂದು ಸೈಬರ್ ತಜ್ಞರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

   English summary
   Bitcoin scam in karnataka: Hacker Srikrisha alyas sreeki first reaction about the ccb investigation and bitcoin scam know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X