• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ ಸಚಿವ ಸಂಪುಟ ಪುನಾರಚನೆ: ಸಚಿನ್ ಪೈಲಟ್ ಸಂತಸ

|
Google Oneindia Kannada News

ಜೈಪುರ/ನವದೆಹಲಿ 21: ಇಂದು ರಾಜಸ್ಥಾನ ಸಚಿವ ಸಂಪುಟ ಪುನಾರಚನೆಯಾಗುತ್ತಿದ್ದು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಬೃಹತ್ ಕ್ಯಾಬಿನೆಟ್ ಪುನಾರಚನೆಯ ಕೆಲ ಗಂಟೆಗಳ ಮುನ್ನ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು, "2023 ರ ಚುನಾವಣೆಯಲ್ಲಿ ಗೆಲ್ಲಲು ನಾವು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಬೇಕು. ನನಗೆ ಸಂತೋಷವಾಗಿದೆ. ಈ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ವಿವಿಧ ವಿಷಯಗಳನ್ನು ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸಿದೆ. ಹೊಸ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಮಾನ ಪ್ರಾತಿನಿಧ್ಯದ ವಿಷಯವನ್ನು ನಾವು ಪದೇ ಪದೇ ಪ್ರಸ್ತಾಪಿಸಿದ್ದೇವೆ. ನನಗೆ ಸಂತೋಷವಾಗಿದೆ. ಹೈಕಮಾಂಡ್ ಮತ್ತು ರಾಜ್ಯ ಸರ್ಕಾರ ಇದನ್ನು ಗಮನಿಸಿದೆ" ಎಂದು ಸಚಿನ್ ಪೈಲಟ್ ಸುದ್ದಿಗಾರರಿಗೆ ತಿಳಿಸಿದರು.

ಹೊಸ ಕ್ಯಾಬಿನೆಟ್‌ನಲ್ಲಿ ತನ್ನ ಐವರು ನಿಷ್ಠಾವಂತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ ಪೈಲಟ್, "ಕಾಂಗ್ರೆಸ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ನಾಯಕತ್ವದಲ್ಲಿ ಕೆಲಸ ಮಾಡುತ್ತಿದೆ. ಈ ವಿಷಯ ನೀವು ಮಾತನಾಡುತ್ತಲೇ ಇರುತ್ತೀರಿ. ಈ ಗುಂಪು, ಆ ಗುಂಪು ಯಾವುದೇ ಗುಂಪು ಇಲ್ಲ. ಕೇವಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಪಕ್ಷ ಮಾತ್ರ ಇರುವುದು. ಅದೊಂದೇ ಬಣ ಇದೆ. ಬೇರೆ ಯಾವುದೇ ಬಣಗಳಿಲ್ಲ" ಎಂದರು.

"ಬದಲಾವಣೆ ನಿರಂತರವಾಗಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಚುನಾವಣೆಗೆ ಕೇವಲ 22 ತಿಂಗಳುಗಳು ಬಾಕಿಯಿದೆ. ನಾವು ಜನರನ್ನು ಹುರಿದುಂಬಿಸಬೇಕಾಗಿದೆ. ಹೊಸ ಜನರನ್ನು ಕರೆತರಬೇಕು. ಬಿಜೆಪಿಯ ನೀತಿಗಳನ್ನು ಜನರು ತಿರಸ್ಕರಿಸಿದ್ದಾರೆ. ಪ್ರಧಾನಿಯವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದನ್ನು ನಾವು ನೋಡಿದ್ದೇವೆ. ಇದು ದೊಡ್ಡ ರಾಜಕೀಯ ಒತ್ತಡವನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.

ಸೆಪ್ಟೆಂಬರ್‌ನಲ್ಲಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಚರಂಜಿತ್ ಚನ್ನಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿತ್ತು. ನಮ್ಮ ಸರ್ಕಾರದಲ್ಲಿ ಇತ್ತೀಚಿಗೆ ದಲಿತ ಪ್ರಾತಿನಿದ್ಯ ಇರಲಿಲ್ಲ. ಹೀಗಾಗಿ ನೂತನ ಸಚಿವ ಸಂಪುಟದಲ್ಲಿ ನಾಲ್ವರು ದಲಿತ ಸಚಿವರನ್ನು ಸೇರಿಸಿಕೊಳ್ಳಲಾಗಿದೆ. ಜೊತೆಗೆ ರಾಜಸ್ಥಾನದ ಆಡಳಿತದಲ್ಲಿ ಮಹಿಳೆಯರ ಪಾತ್ರವೂ ನಿರ್ಣಾಯಕವಾಗಿದೆ. ಉತ್ತರ ಪ್ರದೇಶದಲ್ಲಿ ಸ್ಪರ್ಧಿಸುವ ಪಕ್ಷದ 40 ಪ್ರತಿಶತ ಅಭ್ಯರ್ಥಿಗಳು ಮಹಿಳೆಯರಿರಲಿದ್ದಾರೆ ಎಂದು ಘೋಷಿಸಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಶ್ಲಾಘಿಸಿದರು.

"ಇಂದು ರಾಜ್ಯದಲ್ಲಿ ನನಗೆ ಯಾವ ಪಾತ್ರವನ್ನು ನೀಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ವರ್ಷ ನಡೆಯುವ ನಿರ್ಣಾಯಕ ಚುನಾವಣೆಗೆ ಮುಂಚಿತವಾಗಿ ಗುಜರಾತ್‌ನಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿಯನ್ನು ಪೈಲಟ್ ವಹಿಸಬೇಕೆಂದು ಬಯಸುತ್ತಾರೆ. ದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೆ, ಹಲವು ವಿಷಯಗಳ ಕುರಿತು ಚರ್ಚಿಸಿದ್ದೇವೆ. ಕಳೆದ 20 ವರ್ಷಗಳಲ್ಲಿ ಪಕ್ಷ ನನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಪಣಾ ಭಾವದಿಂದ ನಿರ್ವಹಿಸಿದ್ದೇನೆ, ಮುಂದಿನ ದಿನಗಳಲ್ಲಿ ಪಕ್ಷ ಎಲ್ಲಿಗೆ ಕಳುಹಿಸಿದರೂ ಕೆಲಸ ಮಾಡುತ್ತೇನೆ"ಎಂದು ಪೈಲಟ್ ಇಂದು ಹೇಳಿದರು.

ದಲಿತ ಸಮಾಜದ ನಾಲ್ವರು ಕ್ಯಾಬಿನೆಟ್ ಮಂತ್ರಿಗಳನ್ನು ಮಾಡಿರುವುದು ತುಂಬಾ ಒಳ್ಳೆಯದಾಗಿದೆ. ಆದಿವಾಸಿ ಜನಾಂಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆ. ಎಲ್ಲರ ಒಪ್ಪಿಗೆ ಪಡೆದು ನೂತನ ಸಚಿವ ಸಂಪುಟ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ದೆಹಲಿ ಮತ್ತು ರಾಜಸ್ಥಾನದ ನಾಯಕರು ಒಟ್ಟಾಗಿ ಸೇರಿ ಹೊಸ ಸಚಿವ ಸಂಪುಟವನ್ನು ಸಿದ್ಧಪಡಿಸಿದ್ದಾರೆ ಅಂತಾ ಪೈಲಟ್ ತಿಳಿಸಿದರು.

ಪೈಲಟ್ ಬಣ ಅಶೋಕ್ ಬಣದಿಂದ ಮಂತ್ರಿಯಾಗಿದ್ದಾರೆ ಅಂತಾ ಹೇಳಲಾಗುತ್ತಿದೆ. ಆದರೆ, ರಾಜಸ್ಥಾನದ ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ. 2018ರಲ್ಲಿ ನಾವು ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದ್ದೇವೆ. ಹಾಗಾಗಿಯೇ ಕಾಂಗ್ರೆಸ್‌ನಲ್ಲಿ ಒಂದೇ ಬಣ ಮತ್ತು ಅದು ಕಾಂಗ್ರೆಸ್ ಹೈಕಮಾಂಡ್‌ನ ಬಣ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಚಿಸುವುದು ನಮ್ಮ ಗುರಿ. ಕಾಂಗ್ರೆಸ್ ನಲ್ಲಿ ಯಾವಾಗಲೂ ಸಾಮೂಹಿಕ ನಾಯಕತ್ವದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಪೈಲಟ್ ಹೇಳಿದರು.

ಹೇಮರಾಮ್ ಚೌಧರಿ ಮತ್ತು ರಮೇಶ್ ಮೀನಾ ಸಂಪುಟಕ್ಕೆ ಮರಳಲಿದ್ದಾರೆ. ಮಹೇಂದ್ರಜೀತ್ ಸಿಂಗ್ ಮಾಳವೀಯ, ರಾಮಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದರಾಮ್ ಮೇಘ್ವಾಲ್ ಮತ್ತು ಶಕುಂತಲಾ ರಾವತ್ ಅವರು ಸಂಪುಟದ ನೂತನ ಸಚಿವರಾಗಲಿದ್ದಾರೆ. ಹಿಂದಿನ ಸಂಪುಟದಲ್ಲಿ ಕಿರಿಯ ಸಚಿವರಾಗಿದ್ದ ಮಮತಾ ಭೂಪೇಶ್ ಬೈರ್ವಾ, ಭಂಜನಲಾಲ್ ಜಾದವ್ ಮತ್ತು ಟಿಕಾರಾಮ್ ಜೂಲಿ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ಸಿಗಲಿದೆ. ಜಹೀದಾ ಖಾನ್, ರಾಜೇಂದ್ರ ಗುಧಾ, ಬ್ರಿಜೇಂದ್ರ ಸಿಂಗ್ ಓಲಾ ಮತ್ತು ಮುರಾರಿಲಾಲ್ ಮೀನಾ ಅವರು ನೂತನ ಕಿರಿಯ ಸಚಿವರಾಗಲಿದ್ದಾರೆ.

English summary
Rajasthan Cabinet is restructuring today. Former deputy chief minister Sachin Pilot said, "The BJP must fight to win the 2023 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X