Get Updates
Get notified of breaking news, exclusive insights, and must-see stories!

ನ್ಯೂಯಾರ್ಕ್‌ನಲ್ಲಿ 8ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಅನಿವಾಸಿ ಭಾರತೀಯ ಸಾಧಕಿಯರಿಗೆ FIA ಸನ್ಮಾನ

ನ್ಯೂಯಾರ್ಕ್: ಎಂಟು ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ವಲಸೆಗಾರರನ್ನು ಪ್ರತಿನಿಧಿಸುತ್ತಿರುವ ಭಾರತೀಯ ಸಂಘಗಳ ಒಕ್ಕೂಟವು (FIA) ಅತ್ಯಂತ ಹಳೆಯ ಮತ್ತು ಅತಿದೊಡ್ಡ ಲಾಭರಹಿತ ಸಂಘಟನೆಯಾಗಿದೆ. ಈ ಸಂಸ್ಥೆ ವತಿಯಿಂದ ಕಳೆದ ಮಾರ್ಚ್ 6 ರಂದು ನ್ಯೂಯಾರ್ಕ್ ನಗರದ ಇಂಡಿಯಾ ಹೌಸ್‌ನಲ್ಲಿ ತನ್ನ 8 ನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಿತು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ನಾಯಕಿಯರನ್ನು ಸನ್ಮಾನಿಸಿ ಗೌರವಿಸಿತು.

ಎಂಟು ವರ್ಷಗಳಿಂದ ವಿಶಿಷ್ಟ ಕಾರ್ಯಕ್ರಮವನ್ನು ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಅಡೆತಡೆಗಳನ್ನು ದಾಟಿ ಅಮೇರಿಕದಲ್ಲಿ ವ್ಯಾಪಾರ, ಮಾಧ್ಯಮ, ಹಣಕಾಸು ಮತ್ತು ಸಾಮಾಜಿಕ ಉದ್ಯಮಶೀಲತೆಯಂತಹ ವಿವಿಧ ರಂಗಗಳಲ್ಲಿ ಗಮನಾರ್ಹ ಮಾಡಿರುವ ಮಹಿಳಾ ಸಾಧಕರನ್ನು ಗುರುತಿಸುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ಸಾಧನೆ ಮೂಲಕವೇ ಸಮುದಾಯಗಳಿಗೆ ಸ್ಫೂರ್ತಿ ನೀಡಿದ ಭಾರತೀಯ ವಲಸೆಗಾರರಿಂದ ಅಸಾಧಾರಣ ಮಹಿಳಾ ನಾಯಕಿಯರನ್ನು ಸನ್ಮಾನಿಸಲಾಯಿತು. ಮಹಿಳಾ ಸಾಧಕಿಯರಿಗೆ ರಾಜ್ಯಪಾಲ ಕ್ಯಾಥಿ ಹೊಚುಲ್ ಅವರಿಂದ ಪ್ರಮಾಣಪತ್ರ, ಎಫ್‌ಐಎ ಕಡೆಯಿಂದ ಟ್ರೋಫಿಗಳನ್ನು ನೀಡಲಾಯಿತು.

FIA

ಮಹಿಳೆಯರ ಸಾಧನೆಯಿಂದ ಸಮಾಜದಲ್ಲಿ ಬದಲಾವಣೆ

ಇತ್ತೀಚೆಗೆ ಎಫ್‌ಐಎ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀಕಾಂತ್ ಅಕ್ಕಪಲ್ಲಿ ಅವರು ಮಹಿಳಾ ನಾಯಕಿಯರಿಗೆ ತಮ್ಮ ಒಕ್ಕೂಟದಿಂದ ಸಾಕಷ್ಟು ಬೆಂಬಲ, ಪ್ರೋತ್ಸಾಹ ನೀಡಲಾಗುತ್ತಿದೆ. ಮಹಿಳೆಯರ ಸಾಧನೆಗಳು ದೊಡ್ಡ ಬದಲಾವಣೆ ತರುತ್ತವೆ. ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುವ ಸಾಧಕಿಯರಿವರು ಎಂದು ಕೃತಜ್ಞತೆ ತಿಳಿಸಿದರು.

Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ

ಮಹಿಳಾ ಸಬಲೀಕರಣವು ದೇಶದ ಬೆಳವಣಿಯ ಅವಿಭಾಜ್ಯ ಅಂಗವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ 'ಬೇಟಿ ಬಚಾವೋ ಬೇಟಿ ಪಡಾವೋ, ಶುದ್ಧ ಅಡುಗೆ ಇಂಧನಕ್ಕಾಗಿ ಉಜ್ವಲ ಯೋಜನೆ, 100 ಮಿಲಿಯನ್ ಮನೆಗಳನ್ನು 9 ಮಿಲಿಯನ್ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳಿಗೆ ಸಂಪರ್ಕಿಸುವ ಆರ್ಥಿಕ ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದು ಭಾರತದ ಉಪಕ್ರಮಗಳು, ಯೋಜನೆಗಳನ್ನು ಉಲ್ಲೇಖಿಸಿದರು. ಜೊತೆಗೆ ತಮ್ಮ ಈವರೆಗಿನ ಬೆಳವಣಿಗೆಗೆ ಕಾರಣವಾದ ತಮ್ಮ ಪತ್ನಿ ಬೆಂಬಲ ಕುರಿತು ಪ್ರಶಂಸಿಸಿದರು.

ನಾರ್ತ್‌‌ಸ್ಟಾರ್ ಸ್ಟ್ರಾಟಜೀಸ್‌ನ ಸಿಒಒ ಆದ ಜೋಡಿ ಲಿನ್ ಹರ್ಕ್ಲೋಜ್, ಮಹಿಳೆಯರು ಪರಸ್ಪರ ಸಹಾಯವಾಗಬೇಕು. ಪರಸ್ಪರ ಬೆಳೆದು ಉನ್ನತ ಮಟ್ಟಕ್ಕೇರಬೇಕು ಎಂದು ಕರೆ ನೀಡಿದರು. ರಾಬರ್ಟ್ ವುಡ್ ಜಾನ್ಸನ್ ಬರ್ನಬಾಸ್ ಹೆಲ್ತ್‌ನ ಹಿರಿಯ ಉಪಾಧ್ಯಕ್ಷೆ ಡಾ. ಬಲ್ಪ್ರೀತ್ ಗ್ರೆವಾಲ್-ವಿರ್ಕ್ ಅವರು, ಸಮುದಾಯವನ್ನು ನಿರ್ಮಿಸುವಲ್ಲಿ ಎಫ್‌ಐಎ ಸದಾ ಆದ್ಯತೆ ನೀಡುತ್ತಿದೆ ಎಂದು ಹೊಗಳಿದರು. ತಮ್ಮ ಪೋಷಕರ ಶೌರ್ಯ, ವಲಸಿಗರ ಶಕ್ತಿ ಮತ್ತು ಅವರ ಪತಿಯರು ನೀಡುತ್ತಿರುವ ಬೆಂಬಲ ಆಘಾದವಾದದ್ದು ಎಂದರು.

FIA

ಅಮೇರಿಕನ್ ನಟಿ ಶ್ರೀಮತಿ ರೇಷ್ಮಾ ಶೆಟ್ಟಿ ಅವರು ತಮ್ಮ 10 ವರ್ಷದ ಮಗಳು ಹಾಗೂ ತಾಯ್ತನದ ಮಹತ್ವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಬಗ್ಗೆ ಮಾತನಾಡಿದರು. ನ್ಯೂಯಾರ್ಕ್ ಪೊಲೀಸ್ ಇಲಾಖೆಯ (NYPD) ಪ್ರಥಮ ಡೆಪ್ಯುಟಿ ಕಮಿಷನರ್ ಟಾನಿಯಾ ಕಿನ್ಸೆಲ್ಲಾ ಅವರು ತಮಗೆ ಬಂದ ಇಂದಿನ ಗೌರವವನ್ನು ತಮ್ಮ ತಾಯಿ ಮತ್ತು ಅಜ್ಜಿಯಂದಿರಿಗೆ ಅರ್ಪಿಸಿದರು. ಇದು ಸಾಂಪ್ರದಾಯಿಕ ಅಡೆತಡೆಗಳನ್ನು ಮೀರಿ ಸಾಧನೆ ಮಾಡಿದ ತಲೆಮಾರುಗಳ ಗೆಲುವಿನ ಸಂಕೇತ ಎಂದು ಅವರು ಬಣ್ಣಿಸಿದರು. ಇದರೊಂದಿಗೆ ನ್ಯೂಯಾರ್ಕ್‌ನ ಭಾರತೀಯ ಕಾನ್ಸುಲ್ ಜನರಲ್ ಬಿನಾಯಾ ಎಸ್. ಪ್ರಧಾನ್ ಅವರ ಪತ್ನಿ ಮೋನಾಲಿಸಾ ಶುಭದರ್ಶಿನಿ ಅವರು ತಮಗೆ ಸಿಕ್ಕ ಮನ್ನಣೆ ಮತ್ತು ಪ್ರೀತಿಗೆ ಹರ್ಷ ವ್ಯಕ್ತಪಡಿಸಿದರು.

ಮಹಿಳಾ ಸಬಲೀಕರಣಕ್ಕೆ ಎಫ್‌ಐಎ ಆದ್ಯತೆ

ಕಾರ್ಯಕ್ರಮದ ಅಂತ್ಯದಲ್ಲಿ ಎಫ್‌ಐಎ (FIA) ಪ್ರಧಾನ ಕಾರ್ಯದರ್ಶಿ ಸೃಷ್ಟಿ ಕೌಲ್ ನರುಲಾ ಅವರು, ಲಿಂಗ ಸಮಾನತೆಯನ್ನು ಉತ್ತೇಜಿಸುವ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮಹಿಳೆಯರನ್ನು ಸಬಲೀಕರಣಗೊಳಿಸುವ ಎಫ್‌ಐಎ ಸಂಸ್ಥೆಯ ಬದ್ಧತೆ ಹೊಂದಿದೆ. ಇಂದಿನ ಕಾರ್ಯಕ್ರಮ ವಾರ್ಷಿಕ ಆಚರಣೆಯೆ ಸಾಕ್ಷಿಯಾಗಿದೆ. 1970 ರಿಂದಲೂ ಎಫ್‌ಐಎ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸೇವೆಯ ಮೂಲಕ ಭಾರತ ಹಾಗೂ ಅಮೆರಿಕಾ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬಂದಿದೆ ಎಂದು ವಂದನಾರ್ಪಣಾ ಭಾಷಣ ಮಾಡಿದರು.

ಸಂಜೆ ರಿದ್ಧಿ ಪಾರಿಖ್ ಪಟೇಲ್ ಅವರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಹಿಂದಿನ ಪ್ರಶಸ್ತಿ ವಿಜೇತ ರಾಧಾ ಸುಬ್ರಮಣ್ಯಂ ಅವರನ್ನು ಕಾರ್ಯಕ್ರಮ ಆರಂಭದಲ್ಲೇ ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎಫ್‌ಐಆರ್‌ ಮುಖ್ಯಸ್ಥರಾದ ಅಂಕುರ್ ವೈದ್ಯ, ಮಂಡಳಿ, ಟ್ರಸ್ಟಿಗಳು ಮತ್ತು ಕಾರ್ಯಕಾರಿ ಸಮಿತಿಯ ಪರವಾಗಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+