Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ
ಇರಾನ್-ಯುಎಸ್-ಇಸ್ರೇಲ್ ಸಂಘರ್ಷದ ಮಧ್ಯೆ ಅಮೆರಿಕವು ಇತ್ತೀಚೆಗೆ ಹೆಚ್ಚಿಸಿದ್ದ ಸುಂಕವನ್ನು ಕಡಿಮೆಗೊಳಿಸುವ ಮೂಲಕ ಭಾರತದ ಮೇಲಿನ ಸುಂಕ ಒತ್ತಡ ಸಡಿಲಿಸಿದೆ. ಇದರಿಂದ ಭಾರತವು ಯಾವುದೇ ಅಡತಡೆ ಇಲ್ಲದೇ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಅವಕಾಶ ದೊರೆತಿದೆ. ಯುದ್ಧ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ಮಾಸ್ಕೋದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ವಾಷಿಂಗ್ಟನ್‌ನಿಂದ "ಅನುಮತಿ" ಬೇಕು ಎಂದು ದೂರಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಭಾರತ ತನ್ನ ಇಂಧನ ರಾಜತಾಂತ್ರಿಕತೆ ನಿಪುಣತೆಯೊಂದಿಗೆ ರಷ್ಯಾದೊಂದಿಗೆ ತೈಲ ಖರೀದಿಗೆ ಅವಕಾಶ ಪಡೆದಿದೆ.
ಈ ವರ್ಷ (2026) ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಿರುವ ರಾಷ್ಟ್ರಗಳ ಪೈಕಿ ರಷ್ಯಾ ದೊಡ್ಡ ಪೂರೈಕೆದಾರ ದೇಶವಾಗಲಿದೆ. ಭಾರತೀಯ ಸಂಸ್ಕರಣಾಗಾರರು ದಿನಕ್ಕೆ ಸರಿಸುಮಾರು 1.0 ರಿಂದ 1.7 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಾರೆ. ದೇಶದ ಒಟ್ಟು ತೈಲ ಆಮದಿನ ಪೈಕಿ ಸುಮಾರು ಶೇಕಡಾ 25-30ರಷ್ಟು ಅಂದರೆ 28-48 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಮಾರ್ಚ್ ತಿಂಗಳಲ್ಲಿ ಆಮದು ಮಾಡಿಕೊಂಡಿದ್ದಾರೆ. ಭಾರತಕ್ಕೆ ನಿತ್ಯ ಅಂದಾಜು 10 ಲಕ್ಷ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲ ಬರುತ್ತದೆ. ಹೀಗಾಗಿ ಭಾರತದಲ್ಲಿಇಂಧನ ಆಯ್ಕೆಗೆ ವಿದೇಶಗಳ ನಿರ್ದೇಶನಕ್ಕೆ ಕಾಯಬೇಕೆಂಬ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲದಂತಾಗಿದೆ.

ರಷ್ಯಾದಿಂದ ಭಾರತ ತೈಲ ಖರೀದಿಸಬೇಕಾದರೆ ಯುಎಸ್ ಅನುಮತಿ ಬೇಕಾಗಿದ್ದೇ ಆದಲ್ಲಿ ಈ ಮಟ್ಟಿನ ಆಮದು ಹೇಗೆ ಸಾಧ್ಯವಾಗುತ್ತಿತ್ತು ಎಂಬುದನ್ನು ಗಮನಿಸಬೇಕು. ಭಾರತದ ನೀತಿ, ನಿರ್ಧಾರಗಳಿಂದ 1.4 ಶತಕೋಟಿ ಜನರಿಗೆ ಇಂಧನ ಭದ್ರತೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಭಾರತದ ಇಂಧನ ನೀತಿ ಸ್ವತಂತ್ರವಾಗಿದೆ ಎಂಬುದನ್ನು ಮನಗಾಣಬೇಕಿದೆ.
ಭಾರತ ತೈಲ ಖರೀದಿಗೆ ಅನುಮತಿ ಬೇಕಿಲ್ಲ
ಭಾರತವು 85ಕ್ಕೂ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇಷ್ಟು ಪ್ರಮಾಣದಲ್ಲಿ ಖರೀದಿಸುವಾಗ ಬೆಲೆ, ಪೂರೈಕೆ ಸ್ಥಿರತೆ, ಭೌಗೋಳಿಕ ರಾಜಕೀಯ ಅಪಾಯ ಮತ್ತು ದೇಶೀಯ ಹಣದುಬ್ಬರ ಸಮತೋಲನಗೊಳಿಸಬೇಕು. ಇಲ್ಲವಾದರೆ ರಿಯಾಯಿತಿ ದರದಲ್ಲಿ ಖರೀದಿಸಿದ ಪ್ರತಿ ಬ್ಯಾರೆಲ್ ಸಾರಿಗೆ ವೆಚ್ಚ, ಉತ್ಪಾದನೆ, ವಿದ್ಯುತ್ ಮತ್ತು ದೇಸದ ಗೃಹ ಬಜೆಟ್‌ಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗದಂತೆ ತಡೆಯುವುದು ಅಗತ್ಯವಿದೆ.

ರಷ್ಯಾದ ಕಚ್ಚಾ ತೈಲವು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ಲಭ್ಯ ಇದೆ. 2022ರಲ್ಲಿ ಆರಂಭವಾದ ಉಕ್ರೇನ್- ರಷ್ಯಾ ಯುದ್ಧದ ಬಳಿಕ ಭಾರತ ತನ್ನ ತೈಲ ಆಮದಿನಲ್ಲಿ ಒಂದಷ್ಟು ಬದಲಾವಣೆ ತಂದಿತು. ಅದರಂತೆ ಆಮದು ಮಾಡಿಕೊಳ್ಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ದೇಶಿಯ ತೈಲ ಸಂಸ್ಕರಣಾಗಾರರು ಪ್ರಾಯೋಗಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಕಾರಣದಿಂದ ಕೇಂದ್ರ ಸರ್ಕಾರವು ಜಾಗತಿಕ ಬೆಲೆ ಏರಿಳಿತ, ಯುದ್ಧದ ಸನ್ನಿವೇಶದಲ್ಲೂ ಗ್ರಾಹಕರಿಗೆ ತೊಂದರೆ ಆಗದಂತೆ ನಿಭಾಯಿಸಲಾಗುತ್ತದೆ.
ಭಾರತವು ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ವ್ಯವಹಾರಿಕ ಸಂಬಂದ ಹೊಂದಿದೆ. ರಷ್ಯಾ, ಗಲ್ಫ್ ರಾಷ್ಟ್ರಗಳು ಮತ್ತು ಇತರ ತೈಲ ಪೂರೈಕೆದಾರಂತೆ ಅಮೆರಿಕ ಜೊತೆಗೂ ಮಾತುಕತೆ ನಡೆಸುತ್ತಿದೆ. ಈ ಮಾತುಕತೆಯಲ್ಲಿ ಆರ್ಥಿಕತೆ, ರಾಜತಾಂತ್ರಿಕೆ ಇನ್ನಿತರ ಸಹಜ ವ್ಯಾಪಾರ ಮಾತುಕತೆಗಳು, ಸುಂಕ ಹೇರಿಕೆ ಮತ್ತು ಇಳಿಕೆ, ರಾಜಕೀಯ ಅಂಶಗಳು ಇರುತ್ತವೆ. ಇಂತಹ ಚರ್ಚೆಗೆ ಯಾವುದೇ ಅನುಮತಿ ಬೇಕಾಗಿಲ್ಲ.

ಭಾರತವು ತನ್ನ ನಿಲುವಿಗೆ ಬದ್ಧ
ರಾಷ್ಟ್ರೀಯ ಹಿತಾಸಕ್ತಿಯಿಂದ ಇಂಧನ ಖರೀದಿಗಳನ್ನು ಮಾರುಕಟ್ಟೆ ಪರಿಸ್ಥಿತಿಗಳನ್ನು ನಿರ್ಧರಿಸಲಾಗುತ್ತದೆ. ವಾಷಿಂಗ್ಟನ್ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ದಂಡನಾತ್ಮಕ ಸುಂಕಗಳನ್ನು ಘೋಷಿಸಿದ ನಂತರವೂ, ಭಾರತ ತೈಲ ಆಮದು ನಿಲ್ಲಿಸಿಲ್ಲ. ನಿರಂತರ ತೈಲ ಪೂರೈಕೆಯಲ್ಲಿ, ಖರೀದಿಯಲ್ಲಿ ತೊಂದರೆ ಅಗದಂತೆ ಭಾರತ ಎಚ್ಚರ ವಹಿಸಿದೆ. ಇಂದಿನ ಭೌಗೋಳಿಕ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಆದರೆ ತೈಲ ಆಮದಿನಲ್ಲಿ ಬದಲಾವಣೆ ಆಗಿಲ್ಲ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಉದ್ವಿಗ್ನತೆ ಮತ್ತು ಕತಾರ್ ಸಂಘರ್ಷದಂತಹ ಬೆಳವಣಿಗೆಗಳಿಂದ ಅನಿಲ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದು ಜಾಗತಿಕ ಇಂಧನ ಮಾರುಕಟ್ಟೆ, ಪೂರೈಕೆ ಮೇಲೆ ಒತ್ತಡ ಉಂಟು ಮಾಡಿತ್ತು. ಹೀಗಿದ್ದರೂ ಭಾರತ ತನ್ನ ತೈಲ ಖರೀದಿಯಲ್ಲಿ ಬದಲಾವಣೆ ಮಾಡಲಿಲ್ಲ.
ಇದೆಲ್ಲ ಗಮನಿಸಿದರೆ ಭಾರತವು ತೈಲ ಖರೀದಿಗೆ, ಆಮದು ಅವಧಿಗೆ ಯಾರಿಂದಲೂ ನಿರ್ದೇಶಿಸಲ್ಪಟ್ಟಿಲ್ಲ. ಭಾರತದ ತೈಲ ನೀತಿಯ ಮೇಲೆ ಬೇರೆ ದೇಶಗಳ ಪ್ರಭಾವವಿಲ್ಲ. ಭಾರತವೇ ಸಂಪೂರ್ಣ ಸಾರ್ವಭೌಮವಾಗಿದೆ.
ಭಾರತಕ್ಕೆ ತೈಲ ಖರೀದಿಸಲು ವಿದೇಶಗಳ ಅನುಮತಿ ಬೇಕೆನ್ನುವವರು ಈ ಮೂಲಭೂತ ಸತ್ಯ ಕಡೆಗಣಿಸದೇ ಒಪ್ಪಬೇಕಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications