Gautam Adani: ಗೌತಮ್ ಅದಾನಿ ಅವರಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ವಿಶೇಷ ಪೋಸ್ಟ್
Gautam Adani: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಲಿಂಕ್ಡ್‌ಇನ್‌ನಲ್ಲಿ ಒಂದು ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಜೀವನ ಮತ್ತು ಮೌಲ್ಯಗಳನ್ನು ರೂಪಿಸಿದ ಮಹಿಳೆಯರನ್ನು ಸ್ಮರಿಸಿಕೊಂಡು, ಅವರನ್ನು "ನನ್ನ ಆತ್ಮಸಾಕ್ಷಿಯ ಶಿಲ್ಪಿಗಳು" ಎಂದು ಕರೆದಿದ್ದಾರೆ. ಮಾರ್ಚ್ 8ರಂದು ಅಹಮದಾಬಾದ್‌ನಿಂದ ಹಂಚಿಕೊಂಡ ವೈಯಕ್ತಿಕ ಸಂದೇಶದಲ್ಲಿ, ತಮ್ಮ ಕುಟುಂಬದ ಮಹಿಳೆಯರು ತಮ್ಮ ಜೀವನದ ದೃಷ್ಟಿಕೋನ, ಜವಾಬ್ದಾರಿ ಮತ್ತು ರಾಷ್ಟ್ರ ನಿರ್ಮಾಣದ ವಿಷಯದಲ್ಲಿ ಎಷ್ಟೊಂದು ಶ್ರಮವಹಿಸಿದ್ದಾರೆ ಎಂಬುದನ್ನು ಅವರು ವಿವರಿಸಿದ್ದಾರೆ.
ಅದಾನಿ ಅವರು, ತಮ್ಮ ಬಾಲ್ಯದಲ್ಲಿ ಪಡೆದ ಮೊದಲ ಜೀವನ ಪಾಠಗಳಲ್ಲಿ ಕೆಲವು ತಮ್ಮ ತಾಯಿಯಿಂದಲೇ ಬಂದವು. ಭಾರತದ ಮಹಾಕಾವ್ಯಗಳು ಹಾಗೂ ಅವುಗಳಲ್ಲಿ ಅಡಗಿರುವ ಮೌಲ್ಯಗಳನ್ನು ಪರಿಚಯಿಸಿದವರು ತಮ್ಮ ತಾಯಿ ಎಂದು ಅವರು ಹೇಳಿದರು. ಅವರ ಪ್ರಕಾರ, ಆ ಕಥೆಗಳು ಪಾಠಪುಸ್ತಕಗಳಿಗಿಂತಲೂ ಆಳವಾದ ಸಂದೇಶಗಳನ್ನು ಹೊಂದಿದ್ದು, ಧೈರ್ಯ, ತ್ಯಾಗ, ಕರ್ತವ್ಯ ಮತ್ತು ನಂಬಿಕೆ ಎಂಬ ಶಾಶ್ವತ ಮೌಲ್ಯಗಳನ್ನು ತಮ್ಮೊಳಗೆ ತುಂಬಲು ಸಹಾಯ ಮಾಡಿದವು.

ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ, 16ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಅವಕಾಶಗಳನ್ನು ಹುಡುಕಲು ಮನೆಬಿಟ್ಟು ಹೊರಟಿದ್ದ ಬಗ್ಗೆ ಅದಾನಿ ಮಾತನಾಡಿದ್ದಾರೆ. ಹಿಂದಿರುಗಿ ನೋಡಿದಾಗ, ನನ್ನ ತಾಯಿ, ನಾನು ಕೇವಲ ದೃಢನಿಶ್ಚಯದೊಂದಿಗೆ ಅನಿಶ್ಚಿತ ಭವಿಷ್ಯದತ್ತ ಹೆಜ್ಜೆ ಹಾಕಲು ಅನುಮತಿ ನೀಡಿದಾಗ ಅವರು ಎಷ್ಟು ಧೈರ್ಯ ಬೇಕಾಗಿತ್ತೋ ಎಂದು ಎಂದು ನಾನು ಈಗಲೂ ಯೋಚಿಸುತ್ತೇನೆ ಎಂದು ಹೇಳಿದರು.
ಗೌತಮ್ ಅದಾನಿ ಅವರು ತಮ್ಮ ಪತ್ನಿ ಪ್ರೀತಿ ಅದಾನಿಗೆ ಕೂಡ ಗೌರವ ನಮನ ಸಲ್ಲಿಸಿದ್ದು, ಅವರನ್ನು "ನನ್ನ ಅಂತರಾತ್ಮದ ಕಾವಲುಗಾರ್ತಿ" ಎಂದು ವರ್ಣಿಸಿದ್ದಾರೆ. ಪ್ರೀತಿ ಅದಾನಿ ಅವರು ವೃತ್ತಿಯಲ್ಲಿ ದಂತ ವೈದ್ಯರಾಗಿದ್ದರೂ, ತಮ್ಮ ಹೆಚ್ಚಿನ ಶ್ರಮವನ್ನು 'ಅದಾನಿ ಫೌಂಡೇಶನ್' ನಿರ್ಮಾಣ ಮತ್ತು ಅಭಿವೃದ್ಧಿಗೆ ಸಂಪೂರ್ಣವಾಗಿ ಮೀಸಲಿಟ್ಟರು ಎಂದು ಹೇಳಿದ್ದಾರೆ. ಇಂದು ಅದಾನಿ ಫೌಂಡೇಶನ್ ಶಿಕ್ಷಣ, ಆರೋಗ್ಯ ಸೇವೆ, ಶಾಶ್ವತ ಜೀವನೋಪಾಯ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದೆ. ಈ ಫೌಂಡೇಶನ್‌ನ ಯೋಜನೆಗಳು ಪ್ರಸ್ತುತ ಭಾರತದಾದ್ಯಂತ 22 ರಾಜ್ಯಗಳಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ನೆರವಾಗುತ್ತಿವೆ.
ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಸೊಸೆಯಂದಿರಾದ ಪರಿಥಿ ಅದಾನಿ ಮತ್ತು ದಿವಾ ಶಾ ಅವರ ವ್ಯಕ್ತಿತ್ವವನ್ನೂ ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ. ಪರಿಥಿ ಅವರನ್ನು ಅವರು ಚಿಂತನೆಯುಳ್ಳ ಉತ್ತಮ ವಕೀಲೆ ಎಂದು ವರ್ಣಿಸಿದ್ದು, ಯಾವುದೇ ವಿಷಯವನ್ನು ಸಮರ್ಥವಾಗಿ ಚರ್ಚಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಇನ್ನೂ ದಿವಾ ಶಾ ಅವರನ್ನು ಅತ್ಯಂತ ಕಲ್ಪನಾಶಕ್ತಿಯುಳ್ಳ ವಿನ್ಯಾಸಗಾರ್ತಿ. ಅವರ ಕೆಲಸದಲ್ಲಿ ವಿಶೇಷವಾಗಿ ಅಂಗವಿಕಲರಿಗೆ ಬೆಂಬಲ ನೀಡುವ ಮಾನವೀಯತೆ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೌತಮ್ ಅದಾನಿ ಅವರು ತಮ್ಮ ಮೂವರು ಮೊಮ್ಮಕ್ಕಳ ಬಗ್ಗೆ ಮಾತನಾಡುತ್ತಾ, ಅವರ ಸಂತೋಷದ ಬಗ್ಗೆ ವಿವರಿಸಿದ್ದಾರೆ. "ಬೋರ್ಡ್‌ರೂಮ್‌ನ ಗಂಭೀರ ಚರ್ಚೆಗಳ ನಡುವೆಯೂ, ತಮ್ಮ ಮೊಮ್ಮಕ್ಕಳ ಉಪಸ್ಥಿತಿಯು ಆ ಎಲ್ಲ ಒತ್ತಡವನ್ನು ಮರೆಸುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಿದ್ದಾರೆ. ಜೀವನಪೂರ್ತಿ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು ಮತ್ತು ವ್ಯವಹಾರಗಳನ್ನು ನಿರ್ಮಿಸಲು ಸಮಯ ಕಳೆಯಬಹುದು. ಆದರೆ, ಕುಟುಂಬದೊಂದಿಗೆ ಕಳೆಯುವ ಸುಂದರ ಕ್ಷಣಗಳು ಜೀವನಕ್ಕೆ ನಿಜವಾದ ಅರ್ಥ ಮತ್ತು ಉದ್ದೇಶವನ್ನು ನೀಡುತ್ತವೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂತಿಮವಾಗಿ, ಗೌತಮ್ ಅದಾನಿ ಅವರು ತಮ್ಮ ಜೀವನ ಮತ್ತು ದೃಷ್ಟಿಕೋನವನ್ನು ರೂಪಿಸಿದ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುತ್ತಾ, "ಜೀವನದ ಅತ್ಯಂತ ಬಲವಾದ ಅಡಿಪಾಯಗಳು ಕಾಂಕ್ರೀಟ್ ಅಥವಾ ಉಕ್ಕಿನಿಂದ ನಿರ್ಮಾಣವಾಗುವುದಿಲ್ಲ. ಬದಲಾಗಿ, ನಾವು ಯಾರೆಂದು ರೂಪಿಸುವ ವ್ಯಕ್ತಿಗಳಿಂದ ನಿರ್ಮಾಣವಾಗುತ್ತವೆ," ಎಂದು ಹೇಳಿದರು. https://www.linkedin.com/pulse/women-architects-my-conscience-gautam-adani-uxjlf












Click it and Unblock the Notifications