• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದೊಡ್ಡ ಪಕ್ಷ, ಆದರೆ ಅಧಿಕಾರವಿಲ್ಲ!

|

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಪೂರ್ಣವಾಗಿ ಮುಗಿದಿದ್ದು ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ ಹೊರಗೆ ಬಿದ್ದಿದ್ದು, ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಎಲ್ಲರ ಕಣ್ಣಿದೆ.

ರಿಬಲ್ಲಿಕ್-ಸಿಎನ್‌ಎಕ್ಸ್‌ ನಡೆಸಿರುವ ಪಶ್ಚಿಮ ಬಂಗಾಳ ಚುನಾವಣೆ ಸಮೀಕ್ಷೆ ಪ್ರಕಾರ ಟಿಎಂಸಿಯ ಭದ್ರ ಕೋಟೆಯನ್ನು ಬಿಜೆಪಿ ಈ ಬಾರಿ ಸಡಿಲ ಮಾಡುತ್ತಿದೆ. ಹಾಗೆಂದು ಬಿಜೆಪಿ ಅಧಿಕಾರಕ್ಕೇರುವುದು ಅನುಮಾನವೇ ಎನ್ನುತ್ತಿದೆ ಸಮೀಕ್ಷೆ.

294 ಕ್ಷೇತ್ರಗಳಿಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದಿದ್ದು ರಿಮಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತೆಯಾದರೂ ಸ್ಪಷ್ಟ ಬಹುಮತ ಬಿಜೆಪಿಗೆ ಬರುತ್ತಿಲ್ಲ. ಎರಡು ಬಾರಿ ಸಿಎಂ ಆಗಿರುವ ಮಮತಾ ಬ್ಯಾನರ್ಜಿಗೆ ಸಹ ಸ್ಪಷ್ಟ ಬಹುಮತ ಇಲ್ಲ.

ಸಮೀಕ್ಷೆಯಂತೆ ಬಿಜೆಪಿಯು 138-148 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಟಿಎಂಸಿಯು 128-138 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ ಸರ್ಕಾರ ರಚಿಸಲು ಬೇಕಾಗಿರುವ ಬಹುಮತ 148 ಆಗಿದೆ. ಈ ಸ್ಪಷ್ಟ ಸಂಖ್ಯೆಯನ್ನು ಬಿಜೆಪಿ ಆಗಲಿ ಟಿಎಂಸಿ ಆಗಲಿ ಗಳಿಸುತ್ತಿಲ್ಲ.

ಆದರೆ ಪಶ್ಚಿಮ ಬಂಗಾಳದ ಇತರೆ ಎಡಪಕ್ಷಗಳು 11-21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು ಒಂದೊಮ್ಮೆ ಟಿಎಂಸಿ ಹಾಗೂ ಬಿಜೆಪಿ ಇಬ್ಬರಲ್ಲಿ ಯಾರಿಗೂ ಬಹುಮತ ಬಾರದಿದ್ದರೂ ಸಹ ಇತರೆ ಎಡಪಕ್ಷಗಳ ಸಹಾಯದೊಂದಿಗೆ ಮಮತಾ ಬ್ಯಾನರ್ಜಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 2 ರಂದು ಹೊರಬೀಳಲಿದ್ದು ಸ್ಪಷ್ಟ ಚಿತ್ರಣ ಅಂದೇ ಗೊತ್ತಾಗಲಿದೆ.

English summary
Check out West Bengal Assembly Elections Republic-CNX Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X