ಎಕ್ಸಿಟ್ ಪೋಲ್ ಸಮೀಕ್ಷೆ ಬಳಿಕ ಖುಷಿಯಾಗಿರುವ ಕಾಂಗ್ರೆಸ್‌ಗೆ ಇದೆ ಒಳೇಟಿನ ಆತಂಕ
ಬೆಂಗಳೂರು, ಮೇ 11: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ರಾಜ್ಯದಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಎಕ್ಸಿಟ್ ಪೋಲ್‌ನ ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರುತ್ತವೆ ಎಂದು ಹೇಳಿವೆ. ಒಂದು ವೇಳೆ ಕಾಂಗ್ರೆಸ್ ನೂತನ ಸರ್ಕಾರ ರಚಿಸಲಿರುವಂತೆ ಕಾಣುತ್ತಿದೆ. ಆದರೆ ಪಕ್ಷಕ್ಕೆ ಈಗ ಅದು ಸುಲಭವಾಗಿ ಕಾಣುತ್ತಿಲ್ಲ.
ಕಾರಣ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿರುವ ಅನೇಕ ಶಾಸಕರು ಕಾಂಗ್ರೆಸ್‌ಗೆ ಕೊನೆ ವೇಳೆ ಕೈಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿಯೇ ಇತ್ತು. ಹೀಗಾಗಿ ಅನೇಕ ಬಿಜೆಪಿ ನಾಯಕರು ಈ ಬಾರಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿದ್ದಾರೆ. ಮತದಾನ ದಿನದಂದು ಅವರ ಬಾಡಿ ಲಾಗ್ವೇಜ್ ಇದನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು.

ಈಗ ಎಕ್ಸಿಟ್ ಪೋಲ್ ಸಮೀಕ್ಷೆಯ ಅಂದಾಜುಗಳು ಕಾಂಗ್ರೆಸ್‌ಗೆ ಬಹುಮತ ನೀಡುತ್ತಿದ್ದಂತೆ ಬುಧವಾರ ರಾತ್ರಿಯೇ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎಕ್ಸಿಟ್ ಪೋಲ್‌ಗಿಂತಲೂ ಹೆಚ್ಚು ಸ್ಥಾನಗಳು ನಮಗೆ ಬರುತ್ತವೆ ಎಂದು ಹೇಳುತ್ತಿದ್ದಾರೆ. ಬುಧವಾರ ರಾತ್ರಿ ಕೊನೆಯ ತಮ್ಮ ಹೇಳಿಕೆಯವರೆಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಮಗೆ ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ. ಬದಲಾಗಿ ನಮ್ಮದೇ ನಾಲ್ಕಾರು ಸಮೀಕ್ಷೆಗಳು ನಮ್ಮ ಪಕ್ಷಕ್ಕೆ 150 ಸ್ಥಾನಗಳು ನಮಗೆ ಬರುತ್ತವೆ ಎಂದು ಬಹುದೊಡ್ಡ ವಿಶ್ವಾಸದಿಂದ ಹೇಳಿದ್ದಾರೆ.
ರಾಜಕೀಯ ವಿಶ್ಲೇಷಶಕರು ಕಾಂಗ್ರೆಸ್‌ಗೆ ಅಧಿಕಾರ ಬರುತ್ತದೆ. ಆದರೆ ಒಳೇಟು ಬೀಳುವ ಸಾಧ್ಯತೆ ಎಂದು ಹೇಳಿದ್ದಾರೆ. ಇದು ಮೇಲ್ನೋಟಕ್ಕೆ ನಿಜವೇ ಎಂಬ ಗುಮಾನಿಯನ್ನು ತಂದಿಟ್ಟಿದೆ. ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಕೇಳಿಬರುತ್ತಿರುವ ಬಣ ವಿವಾದ ಇದು ಫೈನಲಿ ಅಧಿಕಾರ ಹಿಡಿಯುವ ವೇಳೆ ತೊಡಕಾಗಬಹುದೇ ಎಂದು ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತಿದೆ.
ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಎನ್ನಲಾಗುತ್ತಿದೆ. ಅಂಕಿ ಅಂಶಗಳು ಜನಾಭಿಪ್ರಾಯವೂ ನಮಗೆ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ರೇಸ್‌ನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಕಾಂಕ್ಷಿಯಾಗಿರುವುದರಿಂದ ಇದು ಕೊನೆಯಲ್ಲಿ ತೊಡಕಾಗುತ್ತದೆ ಎನ್ನಲಾಗಿದೆ.
ಇನ್ನು ಸರ್ಕಾರ ರಚನೆಯಾದರೆ ಅನೇಕರು ಪ್ರಮುಖ ಖಾತೆ, ಹುದ್ದೆಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಅನೇಕರು ಕೇಳಿದ್ದ ಸ್ಥಾನಮಾನ ನೀಡದಿದ್ದರೆ ಬಂಡಾಯ ಸಾರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದುವರೆದು ರೆಸಾರ್ಟ್ ರಾಜಕಾರಣವೂ ನಡೆದರೆ ಮತ್ತೆ ಪಕ್ಷಾಂತರದ ಭಯ ಕಾಂಗ್ರೆಸ್ ಕಾಡುವ ಆತಂಕ ಇದೆ.












Click it and Unblock the Notifications