ಅನಕ್ಷರಸ್ಥರೇ ಹೆಚ್ಚಾಗಿ ಕಾಂಗ್ರೆಸ್ ಮತ ಹಾಕಿದ್ದಾರೆ: ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ಗೆ ಆಕ್ರೋಶ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅನಕ್ಷರಸ್ಥರು ಹೆಚ್ಚಾಗಿ ಮತಹಾಕಿದ್ದಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ. ಸೂಲಿಬೆಲೆ ಮಾಡಿರುವ ಟ್ವೀಟ್ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮೇ 10 ರಂದು ಮುಕ್ತಾಯವಾಗಿದೆ. ಮತದಾರ ತನ್ನ ಅಂತಿಮ ತೀರ್ಪು ನೀಡಿದ್ದು, ಮತಯಂತ್ರದಲ್ಲಿ ಭದ್ರವಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರಿಗೆ ತನ್ನ ಒಲವು ತೋರಿದ್ದಾನೆ ಎನ್ನುವುದು ಸ್ಪಷ್ಟವಾಗಲಿದೆ. ಮತದಾನ ಮುಗಿದ ನಂತರ ಹಲವು ಸುದ್ದಿ ವಾಹಿನಿಗಳು, ಸಂಸ್ಥೆಗಳು, ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ವಿವಿದ ಅಂಕಿ ಅಂಶಗಳನ್ನು ಮುಂದಿಟ್ಟಿವೆ.

Uneducateds Vote Congress In Big Numbers Chakravarthy Sulibele Tweet

ಇಂಡಿಯಾ ಟುಡೆ ಕೂಡ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಕಾಂಗ್ರೆಸ್ 122 ರಿಂದ 140 ಸ್ಥಾನಗಳಲ್ಲಿ ಪಡೆಯಲಿದ್ದು, ಬಿಜೆಪಿ 62-80 ಸೀಟುಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮತದಾರರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಸಮೀಕ್ಷೆಯಲ್ಲಿ ವಿವರ ನೀಡಿದ್ದು, ಶಾಲೆಯ ಮೆಟ್ಟಿಲನ್ನು ಹತ್ತದ ಒಟ್ಟು ಮತದಾರರಲ್ಲಿ ಶೇಕಡಾ 52 ರಷ್ಟು ಮಂದಿ ಕಾಂಗ್ರೆಸ್‌ಗೆ ಮತಹಾಕಿದ್ದಾರೆ ಎಂದು ಹೇಳಿದೆ. ಬಿಜೆಪಿಗೆ ಶೇ. 27 ರಷ್ಟು ಅನಕ್ಷರಸ್ಥರು ವೋಟ್ ಹಾಕಿದ್ದರೆ, ಜೆಡಿಎಸ್‌ಗೆ ಶೇ. 16 ರಷ್ಟು ಮಂದಿ ಮತಹಾಕಿದ್ದಾರೆ ಎಂದು ಹೇಳಿದೆ. ಉನ್ನತ ಶಿಕ್ಷಣ ಪಡೆದವರಲ್ಲಿ ಶೇ. 41 ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದು, ಶೇ.29ರಷ್ಟು ಮಂದಿ ಕಾಂಗ್ರೆಸ್‌ಗೆ ಮತಹಾಕಿದ್ದಾರೆ. ಜೆಡಿಎಸ್‌ಗೆ ಶೇ. 23 ಮಂದಿ ಮತಹಾಕಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಈ ಫೋಟೋವನ್ನು ಹಂಚಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ, ಅನಕ್ಷರಸ್ಥರು ಹೆಚ್ಚಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಎಕ್ಸಿಟ್ ಪೋಲ್‌ನಲ್ಲಿ ಹೇಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸೋಲುವ ಭಯ ಈಗಲೇ ಶುರುವಾಗಿದೆ ಎಂದು ಹಲವರು ಸೂಲಿಬೆಲೆ ಟ್ವೀಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆ ನೀಡಿರುವ ಬಳಕೆದಾರರೊಬ್ಬರು, ಹೌದು, ಅನಕ್ಷರಸ್ಥರಿಗೆ ಮತದಾನ ಮಾಡುವ ಜವಾಬ್ದಾರಿ ಇದೆ, ಆದರೆ ಬೆಂಗಳೂರಿನ ಅಕ್ಷರಸ್ಥರು ಮತದಾನದ ದಿನ ಏನು ಮಾಡುತ್ತಿದ್ದರು" ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಬಿಜೆಪಿಗೆ ಸೋಲಿನ ಭಯ ಕಾಡುತ್ತಿದ್ದು, ಅದಕ್ಕೆ ಈ ರೀತಿ ಟ್ವೀಟ್ ಮಾಡುತ್ತಿದ್ದಾರೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+