ಜೆಡಿಎಸ್ ಕಿಂಗ್‌ ಮೇಕರ್ ಆಗಲಿದೆ ಎನ್ನುವ ಸಮೀಕ್ಷೆಗಳ ನಡುವೆ ಜೆಡಿಎಸ್ ಕಿಂಗ್ ಎಂದ ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು, ಮೇ.11: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಬಿಡುಗಡೆಯಾದ ಎಕ್ಸಿಟ್ ಪೋಲ್‌ ಫಲಿತಾಂಶಗಳು ಅತಂತ್ರ ಸರ್ಕಾರದ ಭವಿಷ್ಯ ನುಡಿದಿವೆ. ಜೊತೆಗೆ ಜೆಡಿಎಸ್ ಈ ಬಾರಿ ಕಿಂಗ್ ಮೇಕರ್ ಆಗಲಿದೆ ಎನ್ನುವ ಮುನ್ಸೂಚನೆ ನೀಡಿವೆ. ಆದರೆ, ಮಾಜಿ ಮುಖ್ಯಮಂತ್ರಿ ಮತ್ತು ಜಾತ್ಯತೀತ ಜನತಾದಳದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 'ಕಿಂಗ್' ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಜೆಡಿಎಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಸೂಕ್ತ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇವೆ, ನಮ್ಮ ಪಕ್ಷ ಕಿಂಗ್ ಆಗಲಿದೆ ಎಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ. ಬುಧವಾರ ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆ ರಾಮನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

HD Kumaraswamy

ಬುಧವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಬಹುಮತ ಪಡೆಯಲಿದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ಹೇಳಿವೆ. ನಾಲ್ಕು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಪೂರ್ಣ ಬಹುಮತವನ್ನು ಪಡೆಯಲಿವೆ ಎಂದಿದ್ದು, ಕೆಲವು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಆದರೆ, ಅತಂತ್ರ ಫಲಿತಾಂಶ ಬರಲಿದೆ ಎಂದು ವಿಧಾನಸಭೆಯನ್ನು ಭವಿಷ್ಯ ನುಡಿದಿದ್ದಾರೆ. ಎರಡು ಎಕ್ಸಿಟ್ ಪೋಲ್‌ಗಳು ಕೂಡ ಬಿಜೆಪಿ ಸರ್ಕಾರ ರಚಿಸಲು ಬಹುಮತ ಪಡೆಯಲಿದೆ ಎಂದಿದೆ.

ರಾಜ್ಯದಲ್ಲಿ ಮತದಾನ ಮುಗಿದ ನಂತರ ಬಿಡುಗಡೆಯಾದ ಎಕ್ಸಿಟ್ ಪೋಲ್‌ಗಳು, 2018 ರ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳ ಕಳೆದ ಬಾರಿ ಗೆದ್ದ 37 ಸ್ಥಾನಗಳನ್ನು ಈ ಬಾರಿಯು ಮುಟ್ಟುವುದಿಲ್ಲ. ಆದರೆ ರಾಜ್ಯದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಕಿಂಗ್ ಮೇಕರ್ ಆಗಲಿದೆ ಎಂದು ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಬಹುದು.

HD Kumaraswamy

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಗಿ ಭದ್ರತೆಯ ನಡುವೆ ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಿತು. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿಗಳು ಸೇರಿ ರಾಜ್ಯದ ಹಲವು ಪಕ್ಷಗಳ 2,615 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ಎಟಿಎಂಗಳಲ್ಲಿ ಭದ್ರವಾಗಿ ಇಡಲಾಗಿದೆ. ಮೇ 13 ರ ಶನಿವಾರ ಮತ ಏಣಿಕೆ ನಡೆಯಲಿದೆ.

ಕಾಂಗ್ರೆಸ್ ಈಗಾಗಲೇ ಗೆಲುವಿನ ವಿಶ್ವಾಸದಲ್ಲಿದೆ. ಇದಕ್ಕೆ ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಚುನಾವಣೋತ್ತರ ಸಮೀಕ್ಷೆಗಳು ಸಾಥ್ ನೀಡಿವೆ. ಆದರೆ, ಬಿಜೆಪಿ ಎಕ್ಸಿಟ್ ಪೋಲ್‌ಗಳು ನಿಜವಾದ ಫಲಿತಾಂಶವಲ್ಲ ನಮಗೆ ಸಂಪೂರ್ಣ ಬಹುಮತ ಬರಲಿದೆ ಎಂದು ವಿಶ್ವಾಸದಲ್ಲಿದೆ. ಜೆಡಿಎಸ್ ಕೂಡ ತನ್ನ ಮಿಷನ್ 123 ಯಶಸ್ವಿಯಾಗಿದೆ ಜನ ಪಂಚರತ್ನ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+