ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ 30 ಸಾವಿರ ಅಂತರದ ಗೆಲುವು?
ಬೆಂಗಳೂರು: ಸಿದ್ದರಾಮಯ್ಯ ಸೋಲಿಗೆ ಜಿದ್ದಿಗೆಬಿದ್ದು ವರುಣಾದಲ್ಲಿ ಬಿಜೆಪಿ ಪ್ರಚಾರ ನಡೆಸಿತ್ತು. ವಿ.ಸೋಮಣ್ಣ ಮೂಲಕ BJP ಲಿಂಗಾಯತ ಅಸ್ತ್ರ ಪ್ರಯೋಗಿಸಿತ್ತು. ರಿಸಲ್ಟ್‌ಗೆ ಕಾಯುವ ಹೊತ್ತಲ್ಲೇ ಸಿದ್ದರಾಮಯ್ಯಗೆ 30 ಸಾವಿರ ಅಂತರದ ಗೆಲುವು ಸಿಗಲಿದೆ ಎಂಬ ಮಾತನ್ನ ಬೆಂಬಲಿಗರು ಹೇಳುತ್ತಿದ್ದಾರೆ. ಹಾಗಾದ್ರೆ ಈ ಊಹೆ ನಿಜವಾಗುತ್ತಾ? ತಿಳಿಯೋಣ ಬನ್ನಿ.
ಎಕ್ಸಿಟ್ ಪೋಲ್ ರಿಸಲ್ಟ್ ನೋಡಿದಾಗಲೂ ಕಾಂಗ್ರೆಸ್ ಈ ಬಾರಿ ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷ ಆಗುವುದು ಪಕ್ಕಾ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಪೂರ್ಣ ಬಹುಮತ ಪಡೆಯುವ ವಿಶ್ವಾಸದಲ್ಲಿ ಇದ್ದಾರೆ. ಹಾಗೇ ಇನ್ನೊಂದು ಕಡೆ ಹೈವೋಲ್ಟೇಜ್ ಕ್ಷೇತ್ರ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸಿದ್ದರಾಮಯ್ಯ ಈ ಬಾರಿ ಸೋಮಣ್ಣ ಎದುರು ಸೋಲ್ತಾರಾ? ಇಲ್ಲ ಗೆಲ್ತಾರಾ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಸ್ಥಳೀಯರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಸೋಮಣ್ಣ ಎದುರು ಸಿದ್ದರಾಮಯ್ಯಗೆ ಜಯ?
ಹೌದು, ಒಂದಾನೊಂದು ಕಾಲದಲ್ಲಿ ಒಂದೇ ಪಕ್ಷದಲ್ಲಿ ಇದ್ದ ಇಬ್ಬರು ನಾಯಕರು ಪರಸ್ಪರ ಎದುರಾಳಿಯಾಗಿ ನಿಂತಿದ್ದು ವರುಣಾ ಕ್ಷೇತ್ರದಲ್ಲಿ. ಒಂದ್ಕಡೆ ಹೈಕಮಾಂಡ್ ನಾಯಕರ ಒತ್ತಡಕ್ಕೆ ಮಣಿದು, ಸಚಿವ ಸೋಮಣ್ಣ 2 ಕಡೆ ಚುನಾವಣೆಗೆ ನಿಂತಿದ್ದಾರೆ. ಇನ್ನೊಂದ್ಕಡೆ ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆ ಅಂತಾ ಬೇರೆ ಹೇಳಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಸಿದ್ದರಾಮಯ್ಯ ಭರ್ಜರಿ ಅಂತರದಿಂದ ವಿ.ಸೋಮಣ್ಣ ವಿರುದ್ಧ ಗೆಲುವು ಸಾಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಸಿದ್ದರಾಮಯ್ಯ ಗೆದ್ದರೂ, ಸೋತರು ಬಿಜೆಪಿಗೆ ಲಾಭ!
ಮೊದಲೇ ಬಿಜೆಪಿ ಪ್ಲ್ಯಾನ್ ಮಾಡಿದಂತೆ ಕಾಂಗ್ರೆಸ್ ನಾಯಕರನ್ನ ಅವರದ್ದೇ ಕ್ಷೇತ್ರದಲ್ಲಿ ಕಟ್ಟಿ ಹಾಕುವ ತಂತ್ರವಿತ್ತು. ಸಿದ್ದರಾಮಯ್ಯ, ಡಿಕೆಶಿ ಕ್ಷೇತ್ರಗಳಲ್ಲಿ ಬಿಜೆಪಿ ಗೇಮ್ ಪ್ಲ್ಯಾನ್ ಮಾಡಿತ್ತು. ಕಾಂಗ್ರೆಸ್ ಘಟಾನುಘಟಿ ನಾಯಕರನ್ನೇ ಕಟ್ಟಿ ಹಾಕಿದ್ರೆ ರಾಜ್ಯದ ಬೇರೆಡೆ ಪ್ರಚಾರ ಮಾಡಲ್ಲ. ಇದೇ ಅಸ್ತ್ರ ಇಟ್ಕೊಂಡು ಸಿದ್ದರಾಮಯ್ಯ ವಿರುದ್ಧ ರಣತಂತ್ರ ರೂಪಿಸಲಾಗಿತ್ತು. ಹಾಗೇ ಸಿದ್ದರಾಮಯ್ಯ ವರುಣಾ ಬಿಟ್ಟು ಕದಲದೆ ಕೊನೇ ಕ್ಷಣದವರೆಗೆ ಪ್ರಚಾರ ನಡೆಸಿದ್ರು. ಹೀಗಾಗಿ ಸಿದ್ದರಾಮಯ್ಯ ಗೆದ್ದರೂ, ಸೋತರು BJPಗೆ ಲಾಭ ಸಿಕ್ಕಂತಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಸಿದ್ದರಾಮಯ್ಯ ಸೋಲಿಗೆ ದಿಲ್ಲಿಯಲ್ಲೇ ರಣತಂತ್ರ!
ಹೌದು, ಕಾಂಗ್ರೆಸ್ ಘಟಾನುಘಟಿಗಳಿಗೆ ಈ ಬಾರಿ ಮನೆಯ ದಾರಿ ಸೋರಿಸಲು ದಿಲ್ಲಿಯಲ್ಲೇ ಪ್ಲ್ಯಾನ್ ಮಾಡಿತ್ತು ಬಿಜೆಪಿ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ಅಂತಾ ಮೋದಿ-ಅಮಿತ್ ಶಾ ಸಚಿವ ಸೋಮಣ್ಣರನ್ನ ವರುಣಾದಿಂದಲೇ ಕಣಕ್ಕಿಳಿಸಿದ್ದರು. ಹಾಗೇ ಖರ್ಗೆ ಕಟ್ಟಿಹಾಕಲು ಅಂತನೇ ಕಲಬುರಗಿಗೆ ಮೋದಿ, ಅಮಿತ್ ಶಾ ಸೇರಿದಂತೆ ಜೆಪಿ ನಡ್ಡಾ ಲಗ್ಗೆ ಇಟ್ಟಿದ್ದರು. ಈಗ ಬಿಜೆಪಿ ನಾಯಕರ ಈ ತಂತ್ರ ವರ್ಕೌಟ್ ಆಗುತ್ತಾ? ಎಂಬ ಚರ್ಚೆ ಶುರುವಾಗಿದೆ ಇನ್ನೇನು 2 ದಿನ ಮಾತ್ರ ಬಾಕಿ ಇದ್ದು, ಫಲಿತಾಂಶದ ದಿನ ಎಲ್ಲಾ ಗೊತ್ತಾಗಲಿದೆ.

ಜಾತಿ ಲೆಕ್ಕಾಚಾರ ಹೇಳುವುದೇನು?
ವರುಣಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಹಠ ಬಿಜೆಪಿ ನಾಯಕರದ್ದು. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈಗ ಜಾತಿ ಲೆಕ್ಕಾಚಾರ ಕೂಡ ಶುರುವಾಗಿದೆ. ಹಾಗಾದರೆ ವರುಣಾ ಕ್ಷೇತ್ರದಲ್ಲಿನ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ 55 ಸಾವಿರ ಲಿಂಗಾಯತ ಮತದಾರರಿದ್ದು ಇವರದ್ಧೇ ನಿರ್ಣಾಯಕ ಪಾತ್ರ ಎನ್ನಬಹುದು. ಲಿಂಗಾಯತ ಮತದಾರರನ್ನ ಬಿಟ್ಟರೆ, ಕುರುಬ ಸಮುದಾಯದ ಮತದಾರರು 35 ಸಾವಿರದಷ್ಟು ಇದ್ದಾರೆ.
ಇನ್ನುಳಿದವರ ಪಾತ್ರ ಬಹುಮುಖ್ಯ!
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಚುನಾವಣಾ ಲೆಕ್ಕಾಚಾರ ಶುರುವಾಗುವುದೇ ಇಲ್ಲಿ. ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳನ್ನು ಹೊರತುಪಡಿಸಿ, ಪರಿಶಿಷ್ಟ ಜಾತಿ ಸಮುದಾಯದ 43 ಸಾವಿರ ಮತದಾರರು ಸೇರಿದಂತೆ ಪರಿಶಿಷ್ಟ ಪಂಗಡದ 23 ಸಾವಿರ ಮತಗಳು ಇಲ್ಲಿವೆ. ಇನ್ನುಳಿದಂತೆ ಒಕ್ಕಲಿಗರು 12 ಸಾವಿರ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದ 12 ಸಾವಿರ ಮತಗಳು ವರುಣಾ ಕ್ಷೇತ್ರದಲ್ಲಿ ಇರುವುದು ಗಮನಾರ್ಹ.











Click it and Unblock the Notifications