New Trouble: ಬೆಂಗಳೂರಲ್ಲಿ ನಾರ್ಥಿಗಳ ಹೊಸ ಹಾವಳಿ: ಬೀದಿಬದಿ ವ್ಯಾಪಾರಿಗಳ ಒತ್ತುವರಿ ಬೆನ್ನಲ್ಲೇ ತಲೆನೋವು!

New Trouble: ಬೆಂಗಳೂರಿನಲ್ಲಿ ನಾರ್ಥಿಗಳಿಂದ ಹೊಸದೊಂದು ಕಿರಿಕ್ ಶುರುವಾಗಿದೆ. ಬೆಂಗಳೂರಿನಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಹಾಗೂ ಪಾದಚಾರಿಗಳು ಸುರಕ್ಷಿತವಾಗಿ ನಡೆದುಕೊಂಡು ಹೋಗುವುದಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪಾದಚಾರಿ ಮಾರ್ಗದ ಒತ್ತುವರಿ ತೆರವು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸರ್ಕಾರವು ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವಿಗೆಂದೇ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ.

ಅಲ್ಲದೆ ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದವರು ಇದೀಗ ಸಂಕಷ್ಟದಲ್ಲಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಈ ರೀತಿ ಇರುವಾಗ ಬೆಂಗಳೂರಿನ ರಸ್ತೆಗಳಲ್ಲಿ ನಾರ್ಥಿಗಳ ನ್ಯೂಸೆನ್ಸ್‌ (ಉತ್ತರ ಭಾರತೀಯರ ಅನಾಗರಿಕತೆ) ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಾರಂಭವಾಗಿದ್ದ ಈ ಹಾವಳಿ ಇದೀಗ ಬೆಂಗಳೂರಿನ ರಸ್ತೆಗಳಿಗೂ ವಿಸ್ತರಿಸಿದ್ದು, ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.

New Trouble

ಬೆಂಗಳೂರಿನ ರಸ್ತೆಗಳಲ್ಲಿ ಕೆಲವು ನಾರ್ಥಿಗಳು ಹಿಂದಿ ಹಾಡುಗಳನ್ನು ಹಾಡುತ್ತಿರುವುದು, ಗುಂಪು ಸೇರಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವುದು ವೈರಲ್ ಆಗಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿದ್ದಾರೆ. ನಾಳೆಯಿಂದ ಜನರು ಓಡಾಡೊ ಪಾದಚಾರಿ ಮಾರ್ಗಗಳಲ್ಲಿ ಕನ್ನಡಿಗರು ಗುಂಪು ಕಟ್ಟಿಕೊಂಡು ಈ ರೀತಿ ಹಾಡ್ಕೊಂಡ್ ಕೂರೋಕೆ ಬಿಡ್ತೀರಾ ಬೆಂಗಳೂರು ಪೊಲೀಸರು ಎಂದು ಪ್ರಶ್ನೆ ಮಾಡಿದ್ದಾರೆ. ಏನಿದು ಈ ಭೀಮಾರುಗಳಿಗೆ ಹೇಳೋರು ಕೇಳೋರು ಇಲ್ಲವೇ, ಮೊನ್ನೆ ಇದೆ ರೀತಿ ಮೆಟ್ರೋದ ಒಳಗೆ ಈಗ ರಸ್ತೆ ರಸ್ತೆಗಳಲ್ಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ.

ವೈರಲ್ ವಿಡಿಯೋಗೆ ಕನ್ನಡಿಗರು ಹೇಳಿದ್ದೇನು

ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ನಮ್ಮ ಭೀಮಾರು ಮಿತ್ರರಿಗೆ ಅದೇ ಪಾದಚಾರಿ ಮಾರ್ಗಗಳನ್ನ ಕಲಾಕ್ಷೇತ್ರದ ಹಾಗೆ ಪರಿವರ್ತಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಕನ್ನಡಿಗರು ವ್ಯಂಗ್ಯವಾಡಿದ್ದಾರೆ. ರೋಹಿತ್ ಸಿಂಹ ಎನ್ನುವವರು ಈ ರೀತಿ ವರ್ತನೆಗಳಿಂದ ಹೊರದೇಶಗಳಲ್ಲೂ ನಮ್ಮ ಮಾನ ಮರ್ಯಾದೆ ಕಳೀತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಹೊಯ್ಸಳಗೆ ಫೋನ್ ಮಾಡಿ ತಿಳಿಸಬೇಕು. ಅದು ಅವರ ಜವಾಬ್ದಾರಿ ಎಂದೂ ಕೆಲವರು ಹೇಳಿದ್ದಾರೆ. ಒಟ್ಟಾರೆ ಈ ವಿಷಯವು ತೀವ್ರ ಟೀಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸರ್ಕಾರವು ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪಾದಚಾರಿಗಳ ಒತ್ತುವರಿ ತೆರವು ಮಾಡಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವನ್ನು ಮಾಡಲಾಗಿದೆ. ಆದರೆ ಇದೀಗ ನಾರ್ಥಿಗಳ ಹಾವಳಿಯು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ಪೊಲೀಸರ ಮಧ್ಯಪ್ರವೇಶ

ಇನ್ನು ಬೆಂಗಳೂರಿನ ರಸ್ತೆಗಳಲ್ಲಿ ಗುಂಪು ಸೇರಿ ಹಾಡು ಹೇಳುತ್ತಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಪೊಲೀಸರಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಲಾಗಿದ್ದು, ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+