ಮಳೆ ನೀರಿನಲ್ಲಿ ಸಂಪೂರ್ಣ ಒದ್ದೆಯಾದರೂ ಶೂ, ಚಪ್ಪಲಿ ಹಾಳಾಗದಂತೆ ತಡೆಯುವ ಸಿಂಪಲ್‌ ಟಿಪ್ಸ್‌ ಇದು

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಬಹಳ ಕಷ್ಟದ ಕೆಲಸ. ಕೆಲವೊಮ್ಮೆ ಬಿಡದೆ ಸುರಿಯುವ ಮಳೆಗೆ ಬಟ್ಟೆಗಳು ಎರಡು ಮೂರು ದಿನಗಳಾದರೂ ಒಣಗುವುದೇ ಇಲ್ಲ. ಹಾಗೆಯೇ ಮಳೆಗಾಲದಲ್ಲಿ ಎದುರಾಗುವ ಇನ್ನೊಂದು ಸಮಸ್ಯೆ ಎಂದರೆ ಶೂಗಳನ್ನು ಕಾಪಾಡಿಕೊಳ್ಳುವುದು. ಮಳೆಯಿಂದಾಗಿ ರಸ್ತೆ ತುಂಬಾ ಕೆಸರು ನೀರು ತುಂಬಿಕೊಳ್ಳುವುದು ಸಾಮಾನ್ಯ. ನಡೆದಾಡುವ ದಾರಿಯಲ್ಲಿ ಎಲ್ಲಿ ನೋಡಿದರೂ ನೀರು ನಿಂತಿರುತ್ತದೆ. ಇದು ನಾವು ಹಾಕುವ ಶೂ, ಬೂಟ್ಸ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಶೂವಿನ ಲುಕ್‌ನಿಂದ ಹಿಡಿದು ಅವುಗಳ ಬಾಳಿಕೆಯವರೆಗೆ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ.

ಹಾಗಂತ ಮಳೆಗಾಲದಲ್ಲಿ ನಿಮ್ಮ ಶೂ, ಪಾದರಕ್ಷೆಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳುವುದು ತೀರಾ ಕಷ್ಟ ಅಲ್ಲವಂತೆ. ಭಾರತೀಯ ಪಾದರಕ್ಷೆಗಳ ಕೈಗಾರಿಕೆಗಳ ಒಕ್ಕೂಟದ (CIFI) ಉಪಾಧ್ಯಕ್ಷ ರಾಜಿಂದರ್ ಜಿಂದಾಲ್ ಪ್ರಕಾರ, ಕೆಲವು ಸರಳ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಪಾದರಕ್ಷೆಗಳು ಹೆಚ್ಚು ಕಾಲದವರೆಗೆ ಬಾಳಿಕೆ ಬರುವಂತೆ ಮಾಡಬಹುದು.

Simple And Easy Tips

ಆತುರಕ್ಕೆ ಬಿದ್ದು ಶೂ ಒಣಗಿಸಬೇಡಿ:

ಶೂ ಮತ್ತು ಬೂಟ್ಸಿನ ವಿಚಾರದಲ್ಲಿ ಜನರು ಮಾಡುವ ದೊಡ್ಡ ತಪ್ಪು ಎಂದರೆ ಒದ್ದೆಯಾದ ಬೂಟುಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಹೀಟರ್ ಬಳಿ ಇಟ್ಟು ಒಣಗಿಸಲು ಪ್ರಯತ್ನಿಸುವುದು. ಇದು ತ್ವರಿತ ಪರಿಹಾರದಂತೆ ಕಾಣಿಸಬಹುದು. ಆದರೆ, ಅತಿಯಾದ ಶಾಖವು ಶೂವನ್ನು ಹಾನಿಗೊಳಿಸುತ್ತದೆ ಮತ್ತು ಶೂಗಳ ಆಕಾರವನ್ನು ಕೆಡಿಸುತ್ತದೆ.

ಶೂಗಳನ್ನು ನೈಸರ್ಗಿಕವಾಗಿ ಒಣಗಲು ಬಿಡುವುದು ಅವುಗಳ ಆಕಾರ ಮತ್ತು ಬಾಳಿಕೆ ಎರಡನ್ನೂ ಕಾಪಾಡಿಕೊಳ್ಳಲು ಸರಳವಾದ ಆದರೆ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಅವುಗಳನ್ನು ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಇಟ್ಟು ಒಣಗಿಸುವುದರಿಂದ ದೀರ್ಘಕಾಲೀನ ಹಾನಿಯನ್ನು ತಡೆಗಟ್ಟುವುದರ ಜೊತೆಗೆ ಅವುಗಳ ರಚನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಒಂದೇ ಪಾದರಕ್ಷೆ ಹಾಕಬೇಡಿ:

ಮಳೆಗಾಲದಲ್ಲಿ ನೀವು ಪ್ರತಿದಿನ ಒಂದೇ ಜೋಡಿ ಶೂ ಅಥವಾ ಚಪ್ಪಲಿ ಧರಿಸಿದರೆ, ಅವು ಸಂಪೂರ್ಣವಾಗಿ ಒಣಗಲು ಸಾಧ್ಯವಾಗುವುದಿಲ್ಲ. "ಪಾದರಕ್ಷೆಗಳನ್ನು ದಿನನಿತ್ಯದ ಬಳಕೆಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.ಆದರೆ, ಸರಿಯಾದ ಕಾಳಜಿಯಿಲ್ಲದೆ ತೇವಾಂಶಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕ್ರಮೇಣ ಅದರ ಬಾಳಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ಎರಡು ಅಥವಾ ಹೆಚ್ಚಿನ ಜೋಡಿಗಳನ್ನು ಇಟ್ಟುಕೊಳ್ಳುವುದರಿಂದ ಒದ್ದೆಯಾದ ಚಪ್ಪಲಿ ಒಣಗುವುದಕ್ಕೆ ಅವಕಾಶ ಸಿಗುತ್ತದೆ. ಆ ಚಪ್ಪಲಿ, ಶೂವಿನ ತೇವಾಂಶ ಸರಿಯಾಗಿ ಆವಿಯಾಗಲು ಅನುವು ಮಾಡಿಕೊಡುತ್ತದೆ. ಹೀಗಾದಾಗ ಒದ್ದೆ ಶೂವಿಂದ ಬರುವ ಕೆಟ್ಟ ವಾಸನೆ ಕೂಡಾ ಕಡಿಮೆಯಾಗುವುದು.

ಮಣ್ಣು ಗಟ್ಟಿಯಾಗುವ ಮುನ್ನ ಸ್ವಚ್ಛಗೊಳಿಸಿ:

ಮಳೆಯಿಂದ ಒದ್ದೆಯಾಗಿರುವ ಮಣ್ಣಿನ ಮೇಲೆ ನಡೆಯುವುದರಿಂದ ಶೂ, ಚಪ್ಪಲಿಯ ಕೆಳಗೆ ಮಣ್ಣು ಅಂಟಿಕೊಳ್ಳುತ್ತದೆ. ಇದರಿಂದಾಗಿ ಶೂವನ್ನು ಮನೆಯ ಹೊರಗೆ ಹಾಗೆಯೇ ಬಿಡಬೇಕಾಗುತ್ತದೆ. ನಂತರ, ಆ ಮಣ್ಣು ಹಾಗೆಯೇ ಗಟ್ಟಿಯಾಗಿ ಬಿಡುತ್ತದೆ. ಆದರೆ ಒಣಗಿದ ಕೆಸರನ್ನು ತೆಗೆದುಹಾಕುವುದು ಬಹಳ ಕಷ್ಟ. ಅಲ್ಲದೆ ಅದು ಕಲೆಯನ್ನು ಕೂಡಾ ಉಳಿಸುವುದು.

ನಿಯಮಿತವಾಗಿ ನಿರ್ವಹಣೆ ಮಾಡುವ ಮೂಲ ಮಳೆಗಾಲದ ಉದ್ದಕ್ಕೂ ಪಾದರಕ್ಷೆಗಳ ನೋಟ ಮತ್ತು ಕ್ರಿಯಾತ್ಮಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಅದನ್ನು ಗಲೀಜಾದ ತಕ್ಷಣ ಸ್ವಚ್ಛಗೊಳಿಸಬೇಕು.

ಇನ್ನು ನಿಮ್ಮ ಬೂಟುಗಳನ್ನು ಸ್ವಚ್ಛಗೊಳಿಸುವುದು ಎಷ್ಟು ಮುಖ್ಯವೋ ಎಲ್ಲಿ ಅದನ್ನು ಎಲ್ಲಿ ಇಡುತ್ತೀರಿ ಎಂಬುದು ಕೂಡಾ ಅಷ್ಟೇ ಮುಖ್ಯ.

ಒದ್ದೆಯಾದ ಪಾದರಕ್ಷೆಗಳನ್ನು ಮುಚ್ಚಿದ ಕ್ಯಾಬಿನ್‌ಗಳು, ಅಥವಾ ಪೆಟ್ಟಿಗೆಗಳಲ್ಲಿ ಸಂಗ್ರಹಿಸಬಾರದು. ಇದರ ಬದಲು, ಅವುಗಳನ್ನು ಒಣಗಿದ, ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಇರಿಸಬೇಕು. ಇದು ಶಿಲೀಂದ್ರ ಬೆಳೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ವಾಸನೆ ಬಾರದಂತೆಯೂ ತಡೆಯುತ್ತದೆ.

ಗ್ರಾಹಕರು ಗುಣಮಟ್ಟದ ಪಾದರಕ್ಷೆಗಳ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿರುವುದರಿಂದ, ಖರೀದಿಯಷ್ಟೇ ನಿರ್ವಹಣೆಯೂ ಮುಖ್ಯವಾಗಿರುತ್ತದೆ. ಕೆಲವು ಸರಳ ಆರೈಕೆ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಮಳೆಗಾಲದ ಉದ್ದಕ್ಕೂ ಅವರ ಪಾದರಕ್ಷೆಗಳ ನೋಟ ಮತ್ತು ಕಾರ್ಯಕ್ಷಮತೆ ಎರಡನ್ನೂ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+