Karnataka Dams Water Level: KRS ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಜುಲೈ 13ರ ಅಂಕಿಅಂಶಗಳು

Karnataka Reservoirs Water Level: ರಾಜ್ಯದಲ್ಲಿ ಮುಂಗಾರು ಎಂಟ್ರಿ ಕೊಟ್ಟಿದ್ದರೂ ಸಹ ಆರಂಭದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಬರೀ ಮೋಡಕವಿದ ವಾತಾವರಣವೇ ಇರುತ್ತಿತ್ತು. ಬಳಿಕ ಕೆಲವು ಭಾಗಗಳಲ್ಲಿ ಧಾರಾಕಾರಣ ಮಳೆ ಮುಂದುವರೆದ ಪರಿಣಾಮ ಜಲಾಶಯಗಳ ಒಳಹರಿವಿನ ಪ್ರಮಾಣ ಏರಿಕೆ ಆಗಿತ್ತು. ಆದರೆ ಇದೀಗ ಮತ್ತೆ ವರುಣನ ಆರ್ಭಟ ಸಂಪೂರ್ಣ ತಗ್ಗಿದೆ. ಹಾಗಾದ್ರೆ ಇಂದು (ಜುಲೈ 13) ಕೆಆರ್‌ಎಸ್‌, ಕಬಿನಿ, ಭದ್ರಾ ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣಾರ್ಭಟ ನಿಂತಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಕೆಲವೆಡೆ ಉತ್ತಮ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಇತ್ತು. ಆದರೆ ಈಗ ಮತ್ತೆ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಡ್ಯಾಂಗಳಲ್ಲಿ ಇದ್ದ ನೀರು ಕೂಡ ಖಾಲಿಯಾಗಲಾರಂಭಿಸಿದೆ. ಇದರಿಂದ ಅನ್ನದಾತರ ಮುಖದಲ್ಲಿ ಮತ್ತೆ ಮಂದಹಾಸ ಮಾಯವಾಗಿದೆ.

Karnataka Major Reservoirs Water Level on July 13 2026 Explore the Complete Statistics details

1. ಕೆಆರ್‌ಎಸ್ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 92.15 ಅಡಿ
* ಒಳಹರಿವು - 7,515 ಕ್ಯೂಸೆಕ್
* ಹೊರಹರಿವು - 619 ಕ್ಯೂಸೆಕ್

2. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 70.06 ಅಡಿ
* ಇಂದಿನ ನೀರಿನ ಮಟ್ಟ - 81.98 ಅಡಿ
* ಒಳಹರಿವು - 3,166 ಕ್ಯೂಸೆಕ್‌
* ಹೊರಹರಿವು - 500 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ - 1599.450 ಅಡಿ
* ಒಳಹರಿವು - 38,977 ಕ್ಯೂಸೆಕ್‌
* ಹೊರಹರಿವು - 464 ಕ್ಯೂಸೆಕ್‌

4. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1762.90 ಅಡಿ
* ಒಳಹರಿವು - 4,999 ಕ್ಯೂಸೆಕ್‌
* ಹೊರಹರಿವು - 00 ಕ್ಯೂಸೆಕ್‌

5. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 147.4 ಅಡಿ
* ಒಳಹರಿವು - 1,713 ಕ್ಯೂಸೆಕ್‌
* ಹೊರಹರಿವು - 220 ಕ್ಯೂಸೆಕ್‌

6. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 129 ಅಡಿ
* ಇಂದಿನ ನೀರಿನ ಮಟ್ಟ - 113.66 ಅಡಿ
* ಒಳಹರಿವು - 2,751 ಕ್ಯೂಸೆಕ್‌
* ಹೊರಹರಿವು - 180 ಕ್ಯೂಸೆಕ್‌

7. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 117 ಅಡಿ
* ಇಂದಿನ ನೀರಿನ ಮಟ್ಟ - 97.07 ಅಡಿ
* ಒಳಹರಿವು - 11,470 ಕ್ಯೂಸೆಕ್‌
* ಹೊರಹರಿವು - 300 ಕ್ಯೂಸೆಕ್‌

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದೆ. ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಕೆಲವೆಡೆ ಅಲ್ಲಲ್ಲಿ ವರುಣಾರ್ಭಟ ಮುಂದುವರೆದಿದೆ. ಇದೀಗ ಮಳೆ ಕಡಿಮೆಯಾದ ಪರಿಣಾಮ ಕೆಲವು ಡ್ಯಾಂಗಳಲ್ಲಿ ನೀರು ಸಂಪೂರ್ಣ ಖಾಲಿಯಾಗುವ ಹಂತದಲ್ಲಿದೆ. ಮುಂಗಾರು ಅವಧಿಯಲ್ಲೇ ಮತ್ತೆ ಮಳೆ ಕೈಕೊಟ್ಟಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಹೀಗೆ ಈ ರೀತಿ ಆದ್ರೆ ಮುಂದಿನ ದಿನಗಳಲ್ಲಿ ಇನ್ನೇನು ಕಾದಿದೆಯೋ ಎನ್ನುವ ಆತಂಕ ಕೃಷಿಕರು, ಜನರಲ್ಲಿ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+