ಗುಜರಾತ್ ರಾಜ್ಯಸಭೆ ಚುನಾವಣೆ : ಯಾರು, ಏನು ಹೇಳಿದರು?

Posted By: Gururaj
Subscribe to Oneindia Kannada

ಅಹಮದಾಬಾದ್, ಆ.08 : ಗುಜರಾತ್ ನಲ್ಲಿ ನಡೆಯುತ್ತಿರುವ ರಾಜ್ಯಸಭೆ ಚುನಾವಣೆ ದೇಶದ ಗಮನ ಸೆಳೆದಿದೆ. ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ಗುಜರಾತ್ ರಾಜ್ಯಸಭಾ ಚುನಾವಣೆ LIVE: ಮತದಾನ ಆರಂಭ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸ್ಪರ್ಧೆಯಿಂದಾಗಿ ಚುನಾವಣೆ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಶಾಸಕರು ಯಾರಿಗೆ ಮತ ಹಾಕುತ್ತಾರೆ? ಎಂಬುದರ ಮೇಲೆ ಸೋಲು ಗೆಲುವು ನಿಂತಿದೆ.

ಗುಜರಾತ್ ವಿಧಾನ ಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಮ್ಯಾಜಿಕ್ ನಂಬರ್ 45. ವಿಧಾನಸಭೆಯ ಒಟ್ಟು ಬಲಾಬಲ 182. ಆರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದ ಬಳಿಕ 176 ಸದಸ್ಯರಿದ್ದಾರೆ.

ಇಂದು ಗುಜರಾತ್ ರಾಜ್ಯಸಭಾ ಚುನಾವಣೆ: ಸ್ಮೃತಿ, ಶಾ ಗೆಲುವು ಬಹುತೇಕ ಖಚಿತ

ಬಿಜೆಪಿ 121 ಶಾಸಕರನ್ನು ಹೊಂದಿದೆ. ಆದ್ದರಿಂದ, ಅಭ್ಯರ್ಥಿಗಳಾದ ಅಮಿತ್ ಶಾ, ಸ್ಮೃತಿ ಇರಾನಿ ಗೆಲುವ ಸಾಧಿಸುವುದು ಖಚಿತವಾಗಿದೆ. ಬಿಜೆಪಿ ಬಳಿ ಇನ್ನೂ 31 ಮತಗಳು ಉಳಿದಿದ್ದು, ಅದಕ್ಕಾಗಿ ಪಕ್ಷ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ವಿರುದ್ಧ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದ್ದರಿಂದ, ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಬಗ್ಗೆ ಯಾರು, ಏನು ಹೇಳಿದರು ನೋಡೋಣ..

ಗುಜರಾತ್ ಸಿಎಂ ಹೇಳುವುದೇನು?

ಗುಜರಾತ್ ಸಿಎಂ ಹೇಳುವುದೇನು?

ರಾಜ್ಯಸಭೆ ಚುನಾವಾಣೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು, 'ಪಕ್ಷದ ವಿಪ್ ನಂತೆ ಮತದಾನ ಮಾಡಿದ್ದೇವೆ. ನಮ್ಮ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ನಂಬಿಕೆ ಇದೆ. ಎನ್‌ಸಿಪಿಯ ಇಬ್ಬರು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ' ಎಂದರು.

ನಾವು ಯಾವ ಪಕ್ಷದಲ್ಲಿದ್ದೇನೆ ನಿಮಗೆ ಗೊತ್ತು

ನಾವು ಯಾವ ಪಕ್ಷದಲ್ಲಿದ್ದೇನೆ ನಿಮಗೆ ಗೊತ್ತು

ಮತದಾನ ಮಾಡಿದ ಬಳಿಕ ಮಾತನಾಡಿದ ರಾಘವ್ ಜೀ ಪಟೇಲ್, 'ಗುಜರಾತ್ ರಾಜ್ಯದಲ್ಲಿರುವುದು ಎರಡು ರಾಜಕೀಯ ಪಕ್ಷಗಳು ಮಾತ್ರ, ಅದು ಕಾಂಗ್ರೆಸ್ ಮತ್ತು ಬಿಜೆಪಿ, ನಾನು ಕಾಂಗ್ರೆಸ್ ಜೊತೆ ಇಲ್ಲ ಎಂದರೆ ಎಲ್ಲಿದ್ದೇನೆ? ಎಂಬುದು ನಿಮಗೆ ತಿಳಿದಿದೆ' ಎಂದು ಹೇಳಿದರು.

ನಿನ್ನೆಯೇ ಎಲ್ಲವನ್ನು ಸ್ಪಷ್ಟಪಡಿಸಿದ್ದೇವೆ

'ಸಂಜೆಯ ವೇಳೆಗೆ ಎಲ್ಲಾ ನಿಮಗೆ ತಿಳಿಯಲಿದೆ' ಎಂದು ಎಸ್‌ಸಿಪಿ ಶಾಸಕ ಖಂಡಲ್ ಜಡೇಜಾ ಹೇಳಿದ್ದಾರೆ

ಬಲವಂತ್ ಸಿನ್ಹಾ ರಜಪೂತ್ ಗೆ ಮತ

ಬಲವಂತ್ ಸಿನ್ಹಾ ರಜಪೂತ್ ಗೆ ಮತ

'ಕಾಂಗ್ರೆಸ್ ಒಂದು ವರ್ಷದಿಂದ ನಮ್ಮ ಯಾವ ಮಾತನ್ನು ಕೇಳಿಲ್ಲ. ನಾವು ಬಲವಂತ್ ಸಿನ್ಹಾ ರಜಪೂತ್ ಗೆ ಮತ ಹಾಕಿದ್ದೇವೆ' ಎಂದು ಕಾಂಗ್ರೆಸ್ ಶಾಸಕ ಧರ್ಮೇಂದ್ರ ಜಡೇಜಾ ಹೇಳಿದ್ದಾರೆ.

ನನಗೆ ಮತ್ತು ಪಕ್ಷಕ್ಕೆ ಗೆಲುವಿನ ವಿಶ್ವಾಸವಿದೆ

'ನನಗೆ ಗೆಲುವಿನ ವಿಶ್ವಾಸವಿದೆ, ಹಾಗಾಗಿ ಪಕ್ಷಕ್ಕೂ ವಿಶ್ವಾಸವಿದೆ' ಎಂದು ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಹೇಳಿದರು.

'ಅಹಮದ್ ಪಟೇಲ್ ಗೆ ಮತ ಹಾಕಿಲ್ಲ'

'ಕಾಂಗ್ರೆಸ್ ಗೆಲ್ಲುವುದು ಸೋಲುವುದೋ ತಿಳಿದಿಲ್ಲ. ಅಹಮದ್ ಪಟೇಲ್ ಗೆ ನಾನು ಮತ ಹಾಕಿಲ್ಲ' ಎಂದು ಶಂಕರ್ ಸಿಂಗ್ ವಘೇಲಾ ಹೇಳಿದರು.

Gujarat Rajya Sabha Poll: Amith Shah v/s Ahmed Patel

ಪಕ್ಷದ ವಿಪ್ ಅನ್ವಯ ಮತದಾನ

'ನಾವು ಯುಪಿಎ ಅಂಗ ಪಕ್ಷ, ಪಕ್ಷದ ವಿಪ್ ಅನ್ವಯ ಮತದಾನ ಮಾಡಿದ್ದೇವೆ' ಎಂದು ಎನ್‌ಸಿಪಿ ಶಾಸಕ ಜಯಂತ್ ಪಟೇಲ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Rajya Sabha election from Gujarat generated much interest. Who said what about Rajya Sabha election.
Please Wait while comments are loading...