ಸಮಾಜವಾದಿ ನಾಯಕ ಸಂಜಯ್ ಸೇಠ್ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ
ಲಕ್ನೋ, ಆಗಸ್ಟ್ 5: ಸಮಾಜವಾದಿ ಪಕ್ಷದ ನಾಯಕ ಸಂಜಯ್ ಸೇಠ್ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸಂಜಯ್ ಸೇಠ್ ಅವರು ಕಳೆದ ಒಂದು ತಿಂಗಳಲ್ಲಿ ಸಮಾಜವಾದಿ ಪಕ್ಷಕ್ಕೆ ಮತ್ತು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೂರನೇ ವ್ಯಕ್ತಿಯಾಗಿದ್ದಾರೆ. ಈ ಮುಂಚೆ ನೀರಜ್ ಶೇಖರ್ ಮತ್ತು ಸುರೇಂದ್ರ ನಗರ್ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.
ಈಗ ಸಮಾಜವಾದಿ ಪಕ್ಷದ ರಾಷ್ಟ್ರೀಯ ಖಜಾಂಚಿ ಹಾಗೂ ಯಾದವ್ ಕುಟುಂಬದ ಆಪ್ತ ಸಂಜಯ್ ಸೇಠ್ ಸಹ ರಾಜೀನಾಮೆ ನೀಡಿದ್ದಾರೆ. ಸಂಜಯ್ ಸೇಠ್ ರಾಜೀನಾಮೆಯೊಂದಿಗೆ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಬಲ 10ಕ್ಕೆ ಕುಸಿದಿದೆ.

ಇಂದು ರಾಜ್ಯಸಭೆಯಲ್ಲಿ ಅಮಿತ್ ಶಾ ಮಹತ್ವದ ಮಸೂದೆ ಮಂಡನೆ ಮಾಡಿರುವ ಬೆನ್ನಲ್ಲೇ ಅಜಯ್ ಸೇಠ್ ರಾಜೀನಾಮೆ ನೀಡಿದ್ದಾರೆ. ಅಮಿತ್ ಶಾ ಅವರು 370, 35(ಎ) ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿದ್ದರು. ಇದಕ್ಕೆ ರಾಷ್ಟ್ರಪತಿ ಅಂಕಿತ ಕೂಡ ದೊರೆತಿತ್ತು. ಇದಕ್ಕೆ ಬಿಜೆಪಿ ಮೈತ್ರಿ ಪಕ್ಷ ಜೆಡಿಯು ಮಾತ್ರ ವಿರೋಧಿಸಿ ಕಲಾಪದಿಂದ ಹೊರನಡೆಯಿತು.












Click it and Unblock the Notifications