ರಾಜ್ಯಸಭೆಯ ಪೌರತ್ವ ಪರೀಕ್ಷೆಯಲ್ಲಿ ಬಿಜೆಪಿಯ ಸಂಖ್ಯಾಬಲವೇನು?
ನವದೆಹಲಿ, ಡಿಸೆಂಬರ್ 11: ದೇಶದಲ್ಲಿ ಸಂಚಲನ ಮೂಡಿಸಿರುವ ಪೌರತ್ವ ತಿದ್ದುಪಡಿ ವಿಧೇಯಕವು ಇಂದು ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ವಿಧೇಯಕವನ್ನು ಮಂಡಿಸಲಿದ್ದಾರೆ. ಈಗಾಗಲೇ ಲೋಕಸಭೆಯಲ್ಲಿ 311-80 ಅಂತರದಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ.
ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತವಿಲ್ಲದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳು ಹಾಗೂ ಇತರೆ ಪಕ್ಷಗಳ ಬೆಂಬಲ ಪಡೆಯುವುದು ಅನಿವಾಯವಾಗಿದೆ.

ಮೇಲ್ನೋಟಕ್ಕೆ ವಿಧೇಯಕ ಅಂಗೀಕಾರಕ್ಕೆ ಸೂಕ್ತ ಸಂಖ್ಯೆ ಪಡೆಯಲು ಸಫಲಾಗಿದೆ ಎಂದು ಕಾಣಿಸುತ್ತಿದ್ದರೂ ಕೊನೆಯ ಕ್ಷಣದ ಬದಲಾವಣೆಗಳು ವಿಧೇಯಕ ತಿದ್ದುಪಡಿಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸಧ್ಯಕ್ಕೆ 240 ಸದಸ್ಯರಿದ್ದಾರೆ. ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 121 ಸಂಖ್ಯಾಬಲದ ಅಗತ್ಯವಿದೆ.ಬಿಜೆಪಿಯು 83 ಸದಸ್ಯರನ್ನು ಹೊಂದಿದ್ದರೆ, ಒಟ್ಟಾರೆ ಎನ್‌ಡಿಎ ಸದಸ್ಯರ ಸಂಖ್ಯೆ 106 ಆಗಿದೆ.
ಹೀಗಾಗಿ ವಿಧೇಯಕ ಅಂಗೀಕಾರಕ್ಕೆ ಇನ್ನೂ ಕನಿಷ್ಟ 15 ಸದಸ್ಯರ ಬೆಂಬಲ ಕೇಂದ್ರ ಸರ್ಕಾರಕ್ಕೆ ಬೇಕಿದೆ.
ಪ್ರತಿಪಕ್ಷಗಳ ಮೈತ್ರಿ ಕೂಟ ಯುಪಿಎ ಬಳಿ 62 ಸದಸ್ಯರಿದ್ದರೆ, ವಿಧೇಯಕದ ವಿರುದ್ಧವಿರುವ ಪಕ್ಷಗಳ ಸಂಖ್ಯೆ 44 ಆಗಿದೆ. ಅಲ್ಲಿಗೆ ವಿಧೇಯಕದ ಪರವಾಗಿ ಹಾಗೂ ವಿರುದ್ಧವಾಗಿರುವವರ ಸಂಖ್ಯೆ ಸಮನಾಗಿ 106 ಆಗಿದೆ. ಈ ಹಂತದಲ್ಲಿ 28 ಸದಸ್ಯರ ಬೆಂಬಲ ಯಾರಿಗೆ ದೊರೆಯಲಿದೆ ಎಂಬುದು ವಿಧೇಯಕದ ಹಣೆಬರಹ ನಿರ್ಧರಿಸಲಿದೆ.
ಇದರಲ್ಲಿ ಎಐಡಿಎಂಕೆ(11), ಬಿಜೆಡಿ(7), ಶಿವಸೇನೆ(3), ವೈಎಸ್‌ಆರ್ ಕಾಂಗ್ರೆಸ್(2), ಟಿಡಿಪಿ(2), ಇತರರು(3) ವಿಧೇಯಕದ ಪರವಾಗಿರುವ ಮುನ್ಸೂಚನೆ ನೀಡುತ್ತಿದ್ದಾರೆ.
ಆದಾಗ್ಯೂ ಮಹಾರಾಷ್ಟ್ರ ಸರ್ಕಾರದ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್‌ನ ಆಕ್ಷೇಪದ ಬಳಿಕ ಶಿವಸೇನೆ ಯೂ ಟರ್ನ್ ತೆಗೆದುಕೊಂಡಿದ್ದು, ವಿಧೇಯಕದ ವಿರುದ್ಧ ಮತ ಚಲಾಯಿಸುವ ಇಂಗಿತ ವ್ಯಕ್ತಪಡಿಸಿದೆ. ವಿಧೇಯಕದ ವಿರುದ್ಧ ಮತ ಚಲಾಯಿಸುವಂತೆ ಜೆಡಿಯು ಮೇಲೂ ಒತ್ತಡ ಹೇರಲಾಗುತ್ತಿದೆ.
ಆದಾಗ್ಯೂ ಶಿವಸೇನೆ ಹಾಗೂ ಜೆಡಿಯು ಹೊರತುಪಡಿಸಿ 19 ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಸಫಲವಾದರೆ ವಿಧೇಯಕ ಸುಲಭವಾಗಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications