ಇಂದು ಗುಜರಾತ್ ರಾಜ್ಯಸಭಾ ಚುನಾವಣೆ: ಸ್ಮೃತಿ, ಶಾ ಗೆಲುವು ಬಹುತೇಕ ಖಚಿತ

ಅಹ್ಮದಾಬಾದ್, ಆಗಸ್ಟ್ 8: ಗುಜರಾತಿನ ಬಹುನಿರೀಕ್ಷಿತ ರಾಜ್ಯಸಭಾ ಚುನಾವಣೆ ಇಂದು (ಆಗಸ್ಟ್ 8) ನಡೆಯಲಿದ್ದು, ಈ ಚುನಾವಣೆ ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಬಿಜೆಪಿಯ ಆಪರೇಶನ್ ಕಮಲಕ್ಕೆ ಹೆದರಿ ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ನ 44 ಶಾಸಕರಿಂದಾಗಿ ಈ ಚುನಾವಣೆ ಮತ್ತಷ್ಟು ಕಾವುಪಡೆದಿತ್ತು.

ಗೆಲ್ಲುವುದಕ್ಕೆ ಅಗತ್ಯವಿರುವ ಕನಿಷ್ಠ ಮತದ ಸಂಖ್ಯೆ 45. ಈ ಸಂಖ್ಯೆಯನ್ನು ಪಡೆಯುವುದು ಬಿಜೆಪಿಗೆ ಕಷ್ಟವಲ್ಲ. 120 ಶಾಸಕರನ್ನು ಹೊಂದಿರುವ ಬಿಜೆಪಿ ಸುಲಭವಾಗಿ ಗೆಲ್ಲಬಹುದು. ಆದರೆ ಕಾಂಗ್ರೆಸ್ ಕೇವಲ 51 ಶಾಸಕ ಬಲ ಹೊಂದಿರುವುದರಿಂದ ರಾಜ್ಯ ಸಭಾ ಚುನಾವಣೆ ಕಾಂಗ್ರೆಸ್ ಮಟ್ಟಿಗೆ ತಲೆಕೆಡಿಸಿಕೊಳ್ಳಬೇಕಾದ ವಿಚಾರವೇ.

Gujarat Rajya Sabha election on Aug 8th

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಗೆಲ್ಲುವುದು ಬಹುತೇಕ ಖಚಿತವಾಗಿದ್ದರೆ ಕಾಂಗ್ರೆಸ್ ನ ಅಹ್ಮದ್ ಪಟೇಲ್ ಸಹ ಗೆಲುವು ಸಾಧಿಸುತ್ತಾರೆ ಎಂಬುದು ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸದ ನುಡಿ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕಾರಣ ಫಲನೀಡಿದೆಯಾ ಎಂಬುದನ್ನು ಕಾದುನೋಡಬೇಕಷ್ಟೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+