• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸ್ಪೀಕರ್ ಓಂ ಬಿರ್ಲಾ, ಬ್ರಾಹ್ಮಣ ಅನ್ನೋ ಕಾರಣಕ್ಕೆ ನಿಮಗೆ ಗೌರವ ನೀಡುತ್ತಿಲ್ಲ'

|

ನವದೆಹಲಿ, ಸೆಪ್ಟೆಂಬರ್ 11: "ಬ್ರಾಹ್ಮಣರು ಹುಟ್ಟಿನಿಂದಲೇ ಉನ್ನತ ಸ್ಥಾನ ಪಡೆಯುತ್ತಾರೆ" ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಜಾತಿ ಆಧಾರಿತ ಅಸಮಾನ ಭಾರತದ ಮನಸ್ಥಿತಿಯನ್ನು ಇದು ಸೂಚಿಸುತ್ತದೆ. ಬಿರ್ಲಾ ಜೀಯನ್ನು ನಿಮ್ಮನ್ನು ನಾವು ಗೌರವಿಸುವುದು ಬ್ರಾಹ್ಮಣ ಅಂತಲ್ಲ. ನೀವು ನಮ್ಮ ಲೋಕಸಭೆ ಸ್ಪೀಕರ್ ಎಂಬ ಕಾರಣಕ್ಕೆ ಗೌರವ ನೀಡುತ್ತೇವೆ.

ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು: ಸ್ಪೀಕರ್ ಓಂ ಬಿರ್ಲಾ

- ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಬುಧವಾರ ಹೀಗೆ ಟ್ವೀಟ್ ಮಾಡುವ ಮೂಲಕ ಓಂ ಬಿರ್ಲಾ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಅಖಿಲ ಬ್ರಾಹ್ಮಣ ಮಹಾಸಭಾದ ಸಭೆಯಲ್ಲಿ ಬಿರ್ಲಾ ಭಾಗವಹಿಸಿದ್ದರು. ಅಲ್ಲಿನ ಕೆಲ ಫೋಟೋಗಳನ್ನು ಮತ್ತು ಶೀರ್ಷಿಕೆಯನ್ನು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದರು.

ಸಮಾಜದಲ್ಲಿ ಬ್ರಾಹ್ಮಣರು ಯಾವಾಗಲೂ ಉನ್ನತ ಸ್ಥಾನದಲ್ಲಿ ಇದ್ದಾರೆ. ತ್ಯಾಗ ಹಾಗೂ ಪರಿಶ್ರಮದ ಕಾರಣಕ್ಕೆ ಅವರಿಗೆ ಈ ಸ್ಥಾನ ಸಿಕ್ಕಿದೆ. ಸಮಾಜಕ್ಕೆ ಬ್ರಾಹ್ಮಣರು ಮಾರ್ಗದರ್ಶನ ನೀಡಿದ್ದಾರೆ ಎಂದು ಓಂ ಬಿರ್ಲಾ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಸಾಮಾಜಿಕ ಜಾಲ ತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಬಹಳ ಮಂದಿ ಓಂ ಬಿರ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹ ಪಡಿಸಿದ್ದಾರೆ.

ಓಂ ಬಿರ್ಲಾ ಅವರು ರಾಜಸ್ಥಾನ ವಿಧಾನಸಭೆಯಿಂದ ಮೂರು ಬಾರಿ ಆಯ್ಕೆ ಆಗಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು.

English summary
Lok Sabha speaker Om Birla statement about Brahmins criticised by Congress leader Kapil Sibal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X