ಪತ್ರಕರ್ತೆಯರಿಗಾಗಿ ಇನ್ಫೋಸಿಸ್ ವತಿಯಿಂದ ಸ್ಪ್ರಿಂಗ್ ಬೋರ್ಡ್ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಸಿ.ಎಸ್.ಆರ್. ಕಾರ್ಯಕ್ರಮದ ಸಹಯೋಗದೊಂದಿಗೆ ಮಹಿಳಾ ಪತ್ರಕರ್ತೆಯರಿಗಾಗಿ ವಿಶೇಷವಾದ ತರಬೇತಿ ಶಿಬಿರವನ್ನು ಆಯೋಜಿಸಿದೆ. ಮಾರ್ಚ್ 25 ರಿಂದ 27 ರವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿಈ ವಸತಿಯುತ ತರಬೇತಿ ನಡೆಯಲ್ಲಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯ ಪ್ರಮುಖ ಅಂಶಗಳು ಹೀಗಿವೆ
ವಿಷಯಗಳು: ಡಿಜಿಟಲ್ ಮಾಧ್ಯಮ, ಕೃತಕ ಬುದ್ದಿಮತ್ತೆ ಬಳಕೆ, ಸಾಪ್ಟ್ ಸ್ಕಿಲ್ ಅಭಿವೃದ್ದಿ ಹಾಗೂ ನಾಯಕತ್ವ ತರಬೇತಿ.
ಸ್ಥಳ: ಇನ್ಫೋಸಿಸ್ ಕ್ಯಾಂಪಸ್, ಮೈಸೂರು.
ಸೌಲಭ್ಯ: ಇದು ಮೂರು ದಿನದ ವಸತಿಯುತ ತರಬೇತಿಯಾಗಿದ್ದು ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
ಅರ್ಹತೆ ಮಾನದಂಡಗಳು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ಕಾರ್ಯನಿರ್ಹಸುತ್ತಿರಬೇಕು. ಕನಿಷ್ಟ 5 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಆಯ್ಕೆ ವಿಷಯದಲ್ಲಿಅಕಾಡೆಮಿಯ ನಿರ್ಧಾರವೇ ಅಂತಿಮ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಗೂಗಲ್ ಫಾರ್ಮ್ https://forms.gle/tozr4GxUQibDHBvk9 ಮೂಲಕ ನೋಂದಾಯಿಸಿಕೊಳ್ಳಬಹುದು.
ಅಗತ್ಯವಿರುವ ದಾಖಲೆಗಳು:
ಇತ್ತೀಚಿನ ಭಾವಚಿತ್ರ ಮತ್ತು ವಯಸ್ಸಿನ ದಾಖಲೆ ಪ್ರಮಾಣ ಪತ್ರ.
ಸಂಸ್ಥೆಯ ಮುಖ್ಯಸ್ಥರ ದೃಡೀಕರಣ ಪತ್ರ ಅಥವಾ ಅಧಿಕೃತ ಗುರುತಿನ ಚೀಟಿ.
ಸಂಸ್ಥೆಯು ವಾರ್ತಾ ಇಲಾಖೆಯ ಪಟ್ಟಿಯಲ್ಲಿರುವ ದಾಖಲೆಗಳು.
5 ವರ್ಷ ಸೇವೆಯ ಅನುಭವದ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ದಿನಾಂಕ: ಅರ್ಜಿ ಸಲ್ಲಿಸಲು ಮಾರ್ಚ್ 10, 2026 ಕೊನೆಯ ದಿನಾಂಕವಾಗಿದೆ.












Click it and Unblock the Notifications