ಅಮೆರಿಕ ಮತ್ತು ಇಸ್ರೇಲ್ ದಾಳಿ, ದೇಶ ಬಿಟ್ಟು ಓಡಿ ಹೋಗುತ್ತಿರುವ ಇರಾನ್ ಜನ | Operation Roaring Lion
ಅಮೆರಿಕ ಸೇನೆ ಮತ್ತು ಇಸ್ರೇಲ್ ಸೇನೆ ಭೀಕರವಾಗಿ ಇರಾನ್ ರಾಜಧಾನಿ ತೆಹ್ರಾನ್ ಮೇಲೆ ದಾಳಿಯನ್ನ ಮಾಡುತ್ತಿದ್ದು, ಈ ದಾಳಿಯಲ್ಲಿ ಈಗಾಗಲೇ ಹತ್ತಿರ ಹತ್ತಿರ ಸಾವಿರ ಇರಾನ್ ನಾಗರಿಕರು ಜೀವ ಬಿಟ್ಟ ಆರೋಪ ಕೇಳಿಬಂದಿದೆ. ಇರಾನ್ ಆಡಳಿತ ಮಾಡುತ್ತಿರುವ ತಪ್ಪಿನಿಂದಾಗಿ ಈಗ ಸಾಮಾನ್ಯ ಜನರ ಸಾವು ಸಂಭವಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಅಮೆರಿಕ ಮತ್ತು ಇಸ್ರೇಲ್ ದಾಳಿ ಹಿನ್ನೆಲೆ ದೇಶ ಬಿಟ್ಟು ಓಡಿ ಹೋಗುತ್ತಿರುವ ಇರಾನ್ ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇರಾನ್ ಗಡಿ ಭಾಗದಿಂದ ಹೀಗೆ ಸಾಕಷ್ಟು ಜನ ಪಲಾಯನ ಮಾಡುವ ಪ್ರಯತ್ನದಲ್ಲಿ ಇದ್ದಾರಂತೆ. ಕೆಲ ದಿನಗಳ ಹಿಂದೆ ಇರಾನ್ ದೇಶದಲ್ಲಿ ಆಂತರಿಕ ಹಿಂಸಾಚಾರ ಭುಗಿಲೆದ್ದ ಸಮಯದಲ್ಲಿ ಕೂಡ ಇದೇ ರೀತಿಯಾಗಿ ಜನರು ಪಲಾಯನ ಮಾಡಲು ಯತ್ನಿಸಿದ್ದರು.
ಇರಾನ್ ದೇಶ ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸುತ್ತಾ ಇದ್ದು, ಅಲ್ಲಿನ ಜನರು ಕೂಡ ಜೀವನ ನಡೆಸಲು ಇಷ್ಟುದಿನ ಪರದಾಡುತ್ತಿದ್ದಾರೆ. ಹೀಗಿದ್ದಾಗ ಅಮೆರಿಕ ಹಾಗೂ ಇಸ್ರೇಲ್ ಜೊತೆಗೆ ಯುದ್ಧವು ಬೇರೆ ಶುರುವಾಗಿ ಹೋಗಿದೆ, ಇದೇ ಕಾರಣಕ್ಕೆ ಇರಾನ್ ಜನರಿಗೆ ಭವಿಷ್ಯದ ಚಿಂತೆ ಶುರುವಾಗುವ ಜೊತೆಗೆ ಜೀವ ಭಯ ಕೂಡ ಕಾಡುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ದೊಡ್ಡದಾಗಿ ಅಮೆರಿಕ ಸೇನೆ ದಾಳಿ ಮಾಡುವ ಭಯ ಕಾಡುತ್ತಿದ್ದು, ಈ ಕಾರಣಕ್ಕೆ ಇರಾನ್ ಪ್ರಜೆಗಳು ಜೀವ ಉಳಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಬಹುತೇಕರು ತಮ್ಮ ದೇಶವನ್ನೇ ಬಿಟ್ಟು ಪಲಾಯನ ಮಾಡುವ ಪ್ರಯತ್ನದಲ್ಲಿ ಇದ್ದಾರಂತೆ.

ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆ ಏನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಸುದ್ದಿಗೋಷ್ಠಿಯ ಸಮಯದಲ್ಲಿ ಇನ್ನಷ್ಟು ದಾಳಿ ಮಾಡುವ ಬಗ್ಗೆ ಮಹತ್ವದ ಮಾಹಿತಿಯನ್ನು ಈಗ ಹಂಚಿಕೊಂಡಿದ್ದಾರೆ. ಇರಾನ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲೇ ಐಡಿಯಾ ಮಾಡಿ & ಆ ಮೂಲಕ ಸೇಡಿಗೆ ಸೇಡು ಅಂತಾ ಮುಂದೆ ನುಗ್ಗಿರುವ ಅಮೆರಿಕ ಹಾಗೂ ಇಸ್ರೇಲ್ ಮಿಲಿಟರಿ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರ ಈ ಮೊದಲೇ ಸಂಗ್ರಹ ಮಾಡಿಕೊಂಡು ಕಾಯುತ್ತಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಈ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದು, ನಮ್ಮ ಬಳಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಇರಾನ್ ಪ್ರಜೆಗಳಿಗೆ ಮತ್ತೊಮ್ಮೆ ಆತಂಕ ಕಾಡುತ್ತಿದ್ದು, ಬದುಕು ಕಟ್ಟಿಕೊಳ್ಳಲು ಅಕ್ಕಪಕ್ಕದ ದೇಶಗಳಿಗೆ ಹೋಗುತ್ತಿದ್ದಾರೆ.












Click it and Unblock the Notifications