Gold Price Today: ಬಂಗಾರ ಖರೀದಿಸುವವರಿಗೆ ರಿಲೀಫ್: ಇಳಿಕೆಯ ಹಾದಿ ಹಿಡಿದ ಚಿನ್ನ, ಇಂದಿನ ಲೇಟೆಸ್ಟ್ ರೇಟ್ ಹೀಗಿದೆ

ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಾ ಗ್ರಾಹಕರಿಗೆ ಆಘಾತ ನೀಡುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು (ಜೂನ್ 30) ಮತ್ತೆ ಕೊಂಚ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಚಿನ್ನದ ದರ ಸಲ್ಪ ತಗ್ಗಿದ್ದು, ಒಡವೆ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಬೆಂಗಳೂರಿನ ವಿವಿಧ ಆಭರಣ ಮಾರುಕಟ್ಟೆಗಳಲ್ಲಿ ಇಂದಿನ ಅಧಿಕೃತ ಚಿನ್ನದ ದರಗಳ ವಿವರ ಹೀಗಿದೆ.

ಸಾರ್ವಜನಿಕರು ಒಡವೆ ತಯಾರಿಸಲು ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತಿ ಗ್ರಾಂಗೆ ₹12,845 ರಷ್ಟಿದೆ. ಇದರೊಂದಿಗೆ 10 ಗ್ರಾಂ (1 ತೊಲ) ಆಭರಣ ಚಿನ್ನದ ಬೆಲೆ ₹1,28,450ಕ್ಕೆ ತಲುಪಿದೆ. ಶುದ್ಧತೆಯಿರುವ 24 ಕ್ಯಾರೆಟ್ ಚಿನ್ನದ ದರ ಇಂದು ಪ್ರತಿ ಗ್ರಾಂಗೆ ₹14,013 ರಂತೆ ಮಾರಾಟವಾಗುತ್ತಿದೆ. ಹೂಡಿಕೆ ಉದ್ದೇಶದ 10 ಗ್ರಾಂ ಅಪರಂಜಿ ಚಿನ್ನದ ಒಟ್ಟು ಬೆಲೆ ಇಂದು ₹1,40,130 ಆಗಿದೆ. ಕಡಿಮೆ ಬಜೆಟ್‌ನ ಹಾಗೂ ವಜ್ರದ ಆಭರಣಗಳಿಗೆ ಬಳಸಲಾಗುವ 18 ಕ್ಯಾರೆಟ್ ಚಿನ್ನದ ದರ ಇಂದು ಪ್ರತಿ ಗ್ರಾಂಗೆ ₹10,510ರಷ್ಟಿದ್ದು, 10 ಗ್ರಾಂಗೆ ₹1,05,100 ಆಗಿದೆ.

Gold Price Today

ಕೇವಲ 2 ದಿನಗಳಲ್ಲಿ ₹3,800 ಕುಸಿದ ದರ

ಚಿನ್ನದ ದರಗಳನ್ನು ಗಮನಿಸಿದರೆ, ಜೂನ್ 28ರಂದು ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,31,950 ರಷ್ಟಿತ್ತು. ಆದರೆ ಜೂನ್ 29 ಮತ್ತು ಜೂನ್ 30ರ ಸತತ ಎರಡು ದಿನಗಳ ಭಾರಿ ಕುಸಿತದಿಂದಾಗಿ, ಇಂದು ಅದೇ 10 ಗ್ರಾಂ ಆಭರಣ ಚಿನ್ನದ ಬೆಲೆ ₹1,28,450ಕ್ಕೆ ತಲುಪಿದೆ. ಅಂದರೆ ಕೇವಲ 48 ಗಂಟೆಗಳ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿ 10 ಗ್ರಾಂಗೆ ಬರೋಬ್ಬರಿ ₹3,500 ರಷ್ಟು ಭಾರಿ ಉಳಿತಾಯವಾಗುತ್ತಿದೆ. ಇನ್ನು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಕಳೆದ ಎರಡು ದಿನಗಳಲ್ಲಿ 10 ಗ್ರಾಂಗೆ ₹3,820ರಷ್ಟು ಕಡಿಮೆಯಾಗಿದೆ.

Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ದಿಢೀರ್ ಕುಸಿದ ಚಿನ್ನದ ಬೆಲೆ, ಎಷ್ಟಿದೆ ಇಂದಿನ ದರ?
Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ದಿಢೀರ್ ಕುಸಿದ ಚಿನ್ನದ ಬೆಲೆ, ಎಷ್ಟಿದೆ ಇಂದಿನ ದರ?

ಬೆಂಗಳೂರಿನ ಇಂದಿನ ಪ್ಲಾಟಿನಂ ದರ

1 ಗ್ರಾಂ ಪ್ಲಾಟಿನಂ ಬೆಲೆ: ₹4,757

10 ಗ್ರಾಂ ಬೆಲೆ: ₹47,570

ಬೆಂಗಳೂರಿನ ಇಂದಿನ ಬೆಳ್ಳಿ ದರ

1 ಗ್ರಾಂ ಬೆಳ್ಳಿಯ ಬೆಲೆ: ₹235

10 ಗ್ರಾಂ ಬೆಳ್ಳಿಯ ಬೆಲೆ: ₹2,350

100 ಗ್ರಾಂ ಬೆಳ್ಳಿಯ ಬೆಲೆ: ₹23,500

1 ಕಿಲೋಗ್ರಾಂ (1 KG) ಬೆಳ್ಳಿಯ ಬೆಲೆ: ₹2,35,000

ಇಲ್ಲಿ ನೀಡಲಾಗಿರುವ ದರಗಳು ಮಾರುಕಟ್ಟೆಯ ಮೂಲ ಚಿನ್ನದ ಬೆಲೆಯಾಗಿವೆ (MCX ಹಾಗೂ ಬುಲಿಯನ್ ಮಾರುಕಟ್ಟೆ ಆಧಾರಿತ). ಗ್ರಾಹಕರು ಆಭರಣ ಮಳಿಗೆಗಳಿಗೆ ತೆರಳಿ ಸಿದ್ದ ಒಡವೆಗಳನ್ನು ಖರೀದಿಸುವಾಗ ಈ ಬೆಲೆಯ ಜೊತೆಗೆ ಶೇ. 3ರಷ್ಟು ಜಿಎಸ್‌ಟಿ (GST) ಮತ್ತು ಆಯಾ ಅಂಗಡಿಗಳ ಮೇಕಿಂಗ್ ಚಾರ್ಜಸ್ ಹೆಚ್ಚುವರಿಯಾಗಿ ಸೇರಲಿವೆ. ಹೀಗಾಗಿ ನಗರದ ವಿವಿಧ ಪ್ರಮುಖ ಜ್ಯುವೆಲ್ಲರಿ ಶೋರೂಮ್‌ಗಳಲ್ಲಿ ಅಂತಿಮ ದರದಲ್ಲಿ ಕೊಂಚ ವ್ಯತ್ಯಾಸವಿರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+