ಇರಾನ್ ವಿರುದ್ಧ ಹೋರಾಡಲು 50,000 ಅಮೆರಿಕ ಸೈನಿಕರು ಮಧ್ಯಪ್ರಾಚ್ಯ ಭಾಗದಲ್ಲಿ ಸನ್ನದ್ಧ | Operation Roaring Lion
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಕ್ಷಣಕ್ಷಣಕ್ಕೂ ಮಧ್ಯಪ್ರಾಚ್ಯ ಭಾಗವನ್ನು & ಸುತ್ತಮುತ್ತಲಿನ ದೇಶಗಳನ್ನು ಕತ್ತಲಿನಲ್ಲಿ ಮುಳುಗುವಂತೆ ಮಾಡುತ್ತಿದೆ. ಏಕೆಂದರೆ ಇಡೀ ಪ್ರಪಂಚಕ್ಕೆ ಅಗತ್ಯ ಇರುವಂತಹ ಪೆಟ್ರೋಲ್, ಡೀಸೆಲ್ ಹಾಗೂ ತೈಲ ಸರಬರಾಜು ಆಗುವುದು ಇದೇ ಮಧ್ಯಪ್ರಾಚ್ಯ ಭಾಗದಿಂದ. ಹೀಗಿದ್ದಾಗಲೇ ದಿಢೀರ್ ಮಧ್ಯಪ್ರಾಚ್ಯ ಭಾಗದಲ್ಲೇ ಭೀಕರ ಯುದ್ಧ ಶುರುವಾಗಿ ಬಡಿದಾಟ ಹೆಚ್ಚಾದರೆ ಪರಿಸ್ಥಿತಿ ಹೇಗೆ ಇರಬೇಡ ಹೇಳಿ? ಈಗಲೂ ಅಷ್ಟೇ, ಅಮೆರಿಕ ಮತ್ತು ಇರಾನ್‌ನ ನಡುವೆ ನಡೆಯುತ್ತಿರುವ ಬಡಿದಾಟ ಮಧ್ಯಪ್ರಾಚ್ಯ ಭಾಗದ ಆರ್ಥಿಕ ಪರಿಸ್ಥಿತಿಗೆ ಪೆಟ್ಟನ್ನು ಕೊಡುತ್ತಿದೆ. ಅಲ್ಲದೆ ಯಾವುದೇ ಪರಿಸ್ಥಿತಿ ಎದುರಿಸಲು ಹಾಗೂ ಇರಾನ್ ವಿರುದ್ಧ ಹೋರಾಡಲು 50,000 ಅಮೆರಿಕ ಸೈನಿಕರು ಮಧ್ಯಪ್ರಾಚ್ಯ ಭಾಗದಲ್ಲಿ ಸನ್ನದ್ಧವಾಗಿ ನಿಂತಿದ್ದಾರೆ.
ಅಮೆರಿಕ ಸೇನೆ 2026 ಲೆಕ್ಕಾಚಾರದ ಪ್ರಕಾರ ಸುಮಾರು 2.1 ಎಂದರೆ ಸುಮಾರು 21 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 13 ಲಕ್ಷ ಸೈನಿಕರು ಲಭ್ಯವಿದ್ದರೆ ಇನ್ನುಳಿದ 8,00,000 ಸೈನಿಕರು ಅಮೆರಿಕದ ಮೀಸಲು ಪಡೆಯಲ್ಲಿ ಇದ್ದಾರೆ. ಹೀಗಿದ್ದಾಗ ಅಮೆರಿಕ ಎಂಬ ದೈತ್ಯ ಸೇನೆಯನ್ನು ಎದುರಿಸಿ ಗೆಲ್ಲುವ ತಾಕತ್ತು ಜಗತ್ತಿನ ಬಹುತೇಕ ದೇಶಗಳಿಗೆ ಇಲ್ಲ. ಅದರಲ್ಲೂ ಇರಾನ್ ಈಗ ಅಮೆರಿಕ ಸೇನೆ ಕೊಟ್ಟಿರುವ ಪೆಟ್ಟಿಗೆ ನಡುಗುವಂತೆ ಆಗಿದ್ದು, ಇರಾನ್ ಸೋಲು ಖಚಿತ ಎಂದು ಅಮೆರಿಕ ಗುಡುಗಿದೆ. ಇದೇ ವೇಳೆ ದಿಢೀರ್ ಇನ್ನಷ್ಟು ಯುದ್ಧ ವಿಮಾನಗಳನ್ನು ಅಮೆರಿಕ ಕರೆಸಿಕೊಂಡು, ಇರಾನ್ ಮೇಲೆ ಮತ್ತೆ ಘೋರ ದಾಳಿ ಮಾಡಲು ಸಜ್ಜಾಗಿದೆ. ಇದಕ್ಕೆ ಸಾಥ್ ನೀಡಲು ಅಮೆರಿಕ ಸೇನೆಯ ಸುಮಾರು 50,000 ಸೈನಿಕರು ಈಗಾಗಲೇ ಮಧ್ಯಪ್ರಾಚ್ಯ ಭಾಗದಲ್ಲಿ ಜಮಾವಣೆ ಆಗಿದ್ದಾರೆ.

ಇರಾನ್ ರಾಜಧಾನಿ ತೆಹ್ರಾನ್‌ಗೆ ನಡುಕ
ಅಮೆರಿಕ ಇದೀಗ ವಾಯುದಾಳಿ ಹಾಗೂ ನೌಕಾದಾಳಿ ಮೂಲಕ ಇರಾನ್‌ಗೆ ಎದೆ ನಡುಗಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಭೂದಾಳಿ ಕೂಡ ಆರಂಭ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಇಡೀ ಇರಾನ್ ದೇಶವನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಎಲ್ಲಾ ರೀತಿಯ ತಂತ್ರ ಹೂಡಿದೆಯಾ? ಎಂಬ ಚರ್ಚೆ ಶುರುವಾಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಅಮೆರಿಕ ಸೈನಿಕರು ಇರಾನ್ ಬಳಿಗೆ ಬಂದು ಜಮಾವಣೆ ಆಗಲಿದ್ದು, ಮಧ್ಯಪ್ರಾಚ್ಯ ಭಾಗದ ವಿವಿಧೆಡೆ ಅವರನ್ನು ಕಳುಹಿಸುವ ಯೋಜನೆ ಇದೆ. ಈ ಮೂಲಕ ಇರಾನ್ ಸುತ್ತಲೂ ದೊಡ್ಡ ಕೋಟೆ ನಿರ್ಮಾಣ ಮಾಡುತ್ತಿದೆ ಅಮೆರಿಕ.












Click it and Unblock the Notifications