High Speed Rail: ಬೆಂಗಳೂರು-ಹೈದರಾಬಾದ್ ತಲುಪಲು 2 ಗಂಟೆ ಸಾಕು, 3 ಕಡೆ ಎಂಟ್ರಿ, ಮಹತ್ವದ ಅಪ್ಡೇಟ್
ಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್ 2026 (Budget 2026) ಮಂಡನೆ ವೇಳೆ ದಕ್ಷಿಣ ಭಾರತದ ಪ್ರಮುಖ ಹೈಸ್ಪೀಡ್ ರೈಲು ಕಾರಿಡಾರ್ (HSR) ಯೋಜನೆ ಅನುಷ್ಠಾನ ಘೋಷಿಸಿದೆ. ಅದಾಗಿ ಒಂದು ಸರಿಯಾಗಿ ಒಂದು ತಿಂಗಳ ಅಂತರದಲ್ಲಿ ಕರ್ನಾಟಕದ ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಆರಂಭಿಕ ಕೆಲಸಗಳು ಶುರುವಾಗಿದೆ. ಕೇಂದ್ರದ ರೈಲ್ವೆ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಎರಡು ರಾಜ್ಯಗಳ ಪ್ರಯಾಣಿಕರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ.
ಹೈದರಾಬಾದ್-ಬೆಂಗಳೂರು ಹೈ-ಸ್ಪೀಡ್ ರೈಲು (HSR) ಕಾರಿಡಾರ್ ಯೋಜನೆ ಬಗ್ಗೆ ಔಪಚಾರಿಕ ಚರ್ಚೆ ನಡೆಸಲು ಖುದ್ದು ಕೇಂದ್ರ ರೈಲ್ವೆಯ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಯೋಜನೆಗೆ ಆರಂಭಿಸುವ ಕುರಿತು, ಭೂಮಿ ಸ್ವಾಧೀನ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳನ್ನು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯೊಂದಿಗೆ ಸಭೆ ನಡೆಸಿದರು. ಇದು ದಕ್ಷಿಣ ಭಾರತದ ಮಹತ್ವಾಕಾಂಕ್ಷೆಯ ಸಾರಿಗೆ ಯೋಜನೆ ಆರಂಭಕ್ಕೆ ಉತ್ತೇಜನ ನೀಡಿದಂತಾಗಿದೆ.

ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಆದ ಬಳಿಕ ಸಾಕಷ್ಟು ಮುನ್ನೆಲೆಗೆ ಬಂತು. ಇದೀಗ ರೈಲ್ವೆ ಇಲಾಖೆಯ ಅದರ ಸಾಕಾರಕ್ಕೆ ತ್ವರಿತವಾಗಿ ಮುಂದಾಗಿದೆ. ನೆಲಮಟ್ಟದ ಸಮನ್ವಯತೆ, ಭೂಮಿ ಸ್ವಾಧೀನ, ಆರ್ಥಿಕ ಸಹಕಾರ, ಇಲಾಖೆಗಳ ಸಮನ್ವಯ ಸೇರಿದಂತೆ ಇನ್ನಿತರ ವಿಷಯಗಳನ್ನು ಚರ್ಚಿಸಲಾಗಿದೆ. ಈ ಯೋಜನೆ ಜಾರಿ ಬಳಿಕ ನೂರಾರು ಕಿಲೋ ಮೀಟರ್ ಇರುವ ಬೆಂಗಳೂರು-ಹೈದರಾಬಾದ್ ಸಂಪರ್ಕ ಕೇವಲ ಒಂದೆರಡು ಗಂಟೆಗಳಲ್ಲಿ ಸಾಧ್ಯವಾಗಲಿದೆ.
ಹೈದರಾಬಾದ್ ತಲುಪಲು ಕೇವಲ 2 ಗಂಟೆ ಸಾಕು!
ಬೆಂಗಳೂರಿನಿಂದ ಹೈದರಾಬಾದ್ ನಗರವು ಸುಮಾರು 606 ಕಿಲೋ ಮೀಟರ್ ಇದೆ. ಇದನ್ನು ನಾವು ಪ್ರಸ್ತುತದಲ್ಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತಲುಪಲು 8.5 ಗಂಟೆಗಳ ಸಮಯ ಬೇಕಾಗುತ್ತದೆ. ಈ ಮಹತ್ವಾಕಾಂಕ್ಷೆಯ ಹೈಸ್ಪೀಡ್ ರೈಲು ಯೋಜನೆಯು ಸಾಕಾರವಾದ ಬಳಿಕ ಕೇವಲ 2 ಗಂಟೆಗಳಲ್ಲಿ ಈ ಸಂಚಾರ ಮಾಡಬಹುದು. ಉದ್ದೇಶಿತ ಕಾರಿಡಾರ್‌ನಲ್ಲಿ ಪರಿಚಯಿಸಲಿರುವ ರೈಲು ಹೆಸರಿಗೆ ತಕ್ಕಂತೆ ಹೈಸ್ಪೀಡ್‌ನಲ್ಲಿ ಸೇವೆ ನೀಡಲಿದ್ದು, ಗಂಟೆಗೆ 350 ಕಿಮೀ ವೇಗದಲ್ಲಿ ಸಂಚಾರ ಮಾಡಲಿದೆ. ಅಷ್ಟು ವೇಗದ ಸಂಚಾರಕ್ಕೆ ಅಗತ್ಯವಾದ ರೈಲು, ಹಳಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದು ದೈನಂದಿನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಒದಗಿಸಲಿದೆ.
ಕರ್ನಾಟಕದಲ್ಲಿ 100 ಕಿಮೀ ಮಾರ್ಗ
ಬೆಂಗಳೂರಿನಿಂದ ಹೈದರಾಬಾದ್‌ವರೆಗಿನ ಈ ಯೋಜನೆ ಪೈಕಿ ಬಹುಪಾಲು ಹಳಿಗಳು ಭೌಗೋಳಿಕವಾಗಿ ಬೇರೆ ರಾಜ್ಯಗಳಲ್ಲಿ ಹೆಚ್ಚು ಹಾದು ಹೋಗಲಿವೆ. ಕರ್ನಾಟಕದಲ್ಲಿ ಸುಮಾರು 100 ಕಿಲೋ ಮೀಟರ್ ಮಾರ್ಗ ನಿರ್ಮಾಣವಾಗುತ್ತದೆ. ತುಮಕೂರು ಜಿಲ್ಲೆಯ ಮೂಲಕ ರಾಜ್ಯವನ್ನು ಪ್ರವೇಶಿಸುವಂಥೆ ವಿನ್ಯಾಸಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಮುಖ್ಯವಾಗಿ ಮೂರು ಕಾರ್ಯತಂತ್ರ ನಿಲ್ದಾಣಗಳು ರಾಜ್ಯದ ಈ ಮಾರ್ಗದಲ್ಲಿ ತಲೆಎತ್ತಲಿವೆ.
ಮೂರು ಪ್ರಮುಖ ನಿಲ್ದಾಣಗಳು ಸ್ಥಾಪನೆ, ಪ್ರವೇಶ ಎಲ್ಲೆಲ್ಲಿ
1. ಅಲಿಪುರ: ಚಿಕ್ಕಬಳ್ಳಾಪುರದ ಅಲಿಪುರದಲ್ಲಿ ಸ್ಥಳೀಯ ಹೈ-ಸ್ಪೀಡ್ ನೆಟ್‌ವರ್ಕ್‌ಗೆ ಪ್ರವೇಶಿಸಲು ಮೊದಲ ಪಾಯಿಂಟ್ ಅನ್ನು ಗುರುತಿಸಲಾಗಿದೆ.
2. ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಈ ನಿಲ್ದಾಣವು ಪ್ರಮುಖ ಸಂಪರ್ಕ ಕಲ್ಪಿಸಲು ಅಲ್ಲೊಂದು ನಿಲ್ದಾಣವಾಗಲಿದೆ.
3. ಕೋಡಿಹಳ್ಳಿ: ಕೋಡಿಹಳ್ಳಿಯು ಭವಿಷ್ಯದ ಮೆಗಾ-ಜಂಕ್ಷನ್ ಆಗಿ ಸ್ಥಾನ ಪಡೆಯಲಿದೆ. ಇಲ್ಲಿ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಮತ್ತು ನಮ್ಮ ಮೆಟ್ರೋ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.
ಯೋಜನೆಯ ಪ್ರಯೋಜನಗಳು
ಎರಡು ನಗರಗಳ ನಡುವೆ ಸಂಚಾರ ವೇಗದ ಮತ್ತು ಸುಗಮವಾಗುತ್ತದೆ. ಅತ್ಯಧಿಕ ಸಮಯ ಉಳಿಯುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕಾಯುವಿಕೆ ತಪ್ಪಲಿದೆ. ನಿಧಾನಗತಿಯ ರಾತ್ರಿ ರೈಲುಗಳ ಸಂಚಾರ ಕಡಿಮೆ ಆಗಿದೆ. ಸುಗಮ ಸಂಚಾರ ಸೇವೆ ಲಭ್ಯವಾಗುತ್ತದೆ. ಬೆಳಗ್ಗೆ ಹೈದರಾಬಾದ್ ತಲುಪಿ, ಸಭೆ ಬಳಿಕ ಮಧ್ಯಾಹ್ನ ಊಟಕ್ಕೆ ಬೆಂಗಳೂರಿಗೆ ಬರಬಹುದು. ಈ ಕಲ್ಪನೆ ಉಪಯುಕ್ತವಾಗಿದೆ. ಯೋಜನೆ ವಿಳಂಬವಾಗದಂತೆ ರೈಲ್ವೆ ಇಲಾಖೆ, ಸರ್ಕಾರ ನೋಡಿಕೊಳ್ಳಬೇಕಿದೆ ಎಂದು ರೈಲ್ವೆ ಪ್ರಯಾಣಿಕರು ಕೋರಿದ್ದಾರೆ.
ಎಷ್ಟು ಭೂಮಿ ಬೇಕಿದೆ?
ಈ ಮಹತ್ವದ ಯೋಜನೆ ಕಾರ್ಯಗತಗೊಳಿಸಲು ಸಾಕಷ್ಟು ಭೂಮಿ ಅಗತ್ಯವಿದೆ. ಕರ್ನಾಟಕದಲ್ಲಿ ಬರೋಬ್ಬರಿ 176 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಚೋಕನಹಳ್ಳಿ ಮತ್ತು ನಲ್ಲಾಳದಂತಹ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ನಿರ್ದಿಷ್ಟ ಅರಣ್ಯ ಪ್ರದೇಶಗಳು ಸೇರಿವೆ. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು, ದಕ್ಷಿಣ ಮಧ್ಯ ರೈಲ್ವೆ ರಾಜ್ಯ ಸರ್ಕಾರವನ್ನು ಮೀಸಲಾದ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಕೋರಲಾಗಿದೆ. ಕಾನೂನು ಮತ್ತಿತರ ಯಾವುದೇ ಅಡೆತಡೆ ಇಲ್ಲದೇ ಕಾರ್ಯ ಮುಂದುವರಿಸಬೇಕಿದೆ. ಇದಕ್ಕೆ ಅಗತ್ಯ ಎಲ್ಲ ಇಲಾಖೆಗಳ ಸಹಕಾರ ಅಗತ್ಯವೆಂದು ಸಭೆಯಲ್ಲಿ ರೈಲ್ವೆ ಸಚಿವರು ತಿಳಿಸಿದ್ದಾರೆ. ಸಭೆಯಲ್ಲಿ ರಾಜ್ಯ ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications