ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ

|
Google Oneindia Kannada News

ಬೆಂಗಳೂರು, ಜನವರಿ 01 : ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆಯಾಗಿದ್ದು, ಸಿಲಿಂಡರ್ ಬೆಲೆ ಮಾತ್ರ 50 ರೂ. ಏರಿಕೆಯಾಗಿದೆ.

ಡಿಸೆಂಬರ್‌ನಲ್ಲಿ ಸಬ್ಸಿಡಿ ರಹಿತ 14.2 ಕೆ.ಜಿ.ಸಿಲಿಂಡರ್ ಬೆಲೆ 60 ರೂ. ಏರಿಕೆಯಾಗಿತ್ತು. ಡಿಸೆಂಬರ್ 31ರಿಂದ ಜಾರಿಗೆ ಬರುವಂತೆ ಪುನಃ 50 ರೂ. ಏರಿಕೆಯಾಗಿದೆ. ಇದರ ಜೊತೆಗೆ ಇಂದಿನಿಂದ 10 ಲಕ್ಷ ರೂ.ಗಿಂತಲೂ ಹೆಚ್ಚಿನ ಆದಾಯ ಹೊಂದಿದವರ ಎಲ್‍ಪಿಜಿ ಸಬ್ಸಿಡಿ ಕಡಿತಗೊಳ್ಳಲಿದೆ.

lpg

ಸದ್ಯ ಬೆಂಗಳೂರಿನಲ್ಲಿ 14 ಕೆ.ಜಿ.ಸಿಲಿಂಡರ್ ಬೆಲೆ 622 ರೂ. ಇದ್ದು ಇಂದಿನಿಂದ 50 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ 608 ರೂ. ಇದ್ದದ್ದು, 657 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ 671 ರೂ. ಮತ್ತು ಚೆನ್ನೈನಲ್ಲಿ 671 ರೂ. ಆಗಿದೆ. [10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಸಬ್ಸಿಡಿ ಕಡಿತ : ವಾರ್ಷಿಕ 10 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆದಾರರಿಗೆ ಸಬ್ಸಿಡಿ ಸಿಲಿಂಡರ್​ಗಳನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ಹೊಸ ವ್ಯವಸ್ಥೆ ಜನವರಿ 1 ರಿಂದ ಜಾರಿಗೆ ಬಂದಿದೆ. ಹೊಸ ಯೋಜನೆಯಂತೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ವಾರ್ಷಿಕ 10 ಲಕ್ಷ ರೂ. ಅಧಿಕ ಆದಾಯ ಹೊಂದಿರುವ ವ್ಯಕ್ತಿಗಳು ಸಬ್ಸಿಡಿ ಪಡೆಯುವಂತಿಲ್ಲ.[ಸ್ಥಿತಿವಂತರಿಗೆ ಎಲ್ ಪಿಜಿ ಸಬ್ಸಿಡಿ ಸ್ಥಗಿತ: ವೆಂಕಯ್ಯ ನಾಯ್ಡು]

English summary
Indian Oil Corporation has hiked prices of non-subsidized LPG cylinders. The hike came into effect from midnight of December 31, 2015. Prices of non-subsidized LPG cylinders (14.2 kg) will go up by Rs 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X