LPG cylinder price: ಸಿಹಿ ಸುದ್ದಿ: ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಇಳಿಕೆ
ದೆಹಲಿ ಏಪ್ರಿಲ್ 1: ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಮೆಟ್ರೋ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶಾದ್ಯಂತ 19ಕಿಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತವನ್ನು ಘೋಷಿಸಿವೆ. ಪ್ರಸ್ತುತ 19ಕಿಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 30-50ರೂ. ಇಳಿಕೆಯಾಗಿದ್ದು ಏಪ್ರಿಲ್ 1 ರಿಂದ ಅಂದರೆ ಇಂದಿನಿಂದಲೇ ಜಾರಿಗೆ ಬರಲಿವೆ.
5ಕೆಜಿ ಎಫ್‌ಟಿಎಲ್(ಫ್ರೀ ಎಲ್‌ಪಿಜಿ)ಸಿಲಿಂಡರ್ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಮುಂಬೈನಲ್ಲಿ 31.50 ರೂ. ಚೆನ್ನೈನಲ್ಲಿ 30.50 ರೂ. ಮತ್ತು ಕೋಲ್ಕತ್ತಾದಲ್ಲಿ 32 ರೂ. ಕಡಿಮೆಯಾಗಿದೆ.

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವಿವಿಧ ಸ್ಥಳಗಳಲ್ಲಿ ಬಳಸಲಾಗುವ ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ಇಂದಿನಿಂದ 1,764.50 ರೂ. ಇದೆ. ಮಾರ್ಚ್ 1 ಕ್ಕೆ ಇದರ ಬೆಲೆ 1,795 ರೂ. ಇತ್ತು. ಇನ್ನು ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,911 ರೂಪಾಯಿಯಿಂದ 1,879 ರೂ.ಗೆ ಕುಸಿದಿದೆ. ಚೆನ್ನೈನಲ್ಲಿ ಪ್ರಸ್ತುತ ಬೆಲೆ 1,960.50 ರಿಂದ 1930 ರೂ. ಆಗಿದೆ. ಇನ್ನೂ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದರ ಇಳಿಕೆಯಾದ ಬಳಿಕ 1830 ರೂ. ಆಗಿದೆ. ಮುಂಬೈನಲ್ಲಿ 1,749 ರೂ.ಯಿಂದ 1,717.50 ರೂ.ಗೆ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಸರಾಸರಿ ಬೆಲೆಯನ್ನು ಆಧರಿಸಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ದಿನ ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿದ್ದರು. ಆದರೆ ಈ ಬಾರಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮಾರ್ಚ್ ಮೊದಲ ದಿನ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದವು. ನಂತರ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 25.50 ರೂ. ಏರಿಕೆಯಾಗಿತ್ತು. ಆದರೆ ಬೆಲೆಯಲ್ಲಿನ ಕಡಿತದಿಂದಾಗಿ ಇಂದು ಜನರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆದರೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗದ ಕಾರಣ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ಮೋದಿ ಕಡಿಮೆ ಮಾಡಲು ನಿರ್ಧರಿಸಿರುವುದು ಗೊತ್ತೇ ಇದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಇದು ದೇಶದ ಅರ್ಧದಷ್ಟು ಜನಸಂಖ್ಯೆಗೆ ಮೋದಿ ಸರ್ಕಾರದಿಂದ ಉಡುಗೊರೆಯಾಗಿದ್ದರೂ, ವಿರೋಧ ಪಕ್ಷಗಳು ಇದನ್ನು ಚುನಾವಣೆಗೆ ಗಿಮಿಕ್ ಎಂದಿವೆ.












Click it and Unblock the Notifications