LPG Price: ಎಲ್‌ಪಿಜಿ ಬೆಲೆಯಲ್ಲಿ ಇಳಿಕೆ, ಈಗ ಎಷ್ಟಿದೆ ರೇಟ್?
ಎಲ್‌ಪಿಜಿ ಬೆಲೆ ಏರಿಕೆ ಸಂಬಂಧ, ಟೆನ್ಷನ್ ತೆಗೆದುಕೊಂಡಿದ್ದ ಗ್ರಾಹಕರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂಬ ಆಗ್ರಹ, ಗ್ರಾಹಕರಿಂದ ಕೇಳಿಬರುತ್ತಲೇ ಇರುತ್ತದೆ. ಇದೀಗ ಗ್ರಾಹಕರ ಆಸೆ ಈಡೇರಿದಂತೆ ಆಗಿದೆ, ಅದರಲ್ಲೂ ಮುಖ್ಯವಾಗಿ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಾಲ್ಕು ಮೆಟ್ರೋ ನಗರದಲ್ಲಿ 19 ಕೆ.ಜಿ.ಯ ಕಮರ್ಷಿಯಲ್ ಎಲ್‌ಪಿಜಿ ದರದಲ್ಲಿ ಇಳಿಕೆ ಆಗಿದೆ.
ಅಂದಹಾಗೆ ನವೆಂಬರ್ 16 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 57.5 ರೂಪಾಯಿಯ ತನಕ ಬೆಲೆ ಕಡಿತಗೊಳಿಸಲಾಗಿದೆ. ಹಾಗಾದರೆ ಈ ಪಟ್ಟಿಯಲ್ಲಿ ಇರುವ ನಗರಗಳು ಯಾವು? ಕರ್ನಾಟಕದ ಮೆಟ್ರೋ ನಗರ ಕೂಡ ಈ ಪಟ್ಟಿಯಲ್ಲಿ ಇದೆಯಾ? ಗೃಹ ಬಳಕೆ ಎಲ್‌ಪಿಜಿಯ ಬೆಲೆಯಲ್ಲಿ ಏನಾದರೂ ಏರಿಳಿತ ಉಂಟಾಗಿದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಎಲ್‌ಪಿಜಿ ಪರಿಷ್ಕೃತ ದರ ಇಲ್ಲಿದೆ
ಅಂದಹಾಗೆ ಇದೀಗ ಎಲ್‌ಪಿಜಿ ಬೆಲೆಯನ್ನ ಪರಿಷ್ಕರಣೆ ಮಾಡಿದ ನಂತರ, ದೇಶದ ಒಟ್ಟಾರೆ 4 ನಗರದಲ್ಲಿ ಎಲ್‌ಪಿಜಿ ದರ ಇಳಿಕೆಯಾಗಿದೆ. ಪರಿಷ್ಕೃತ ಬೆಲೆ ಪ್ರಕಾರ, 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನವದೆಹಲಿಯಲ್ಲಿ 1,775 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 1,885.5 ರೂಪಾಯಿ, ಮಹಾನಗರಿ ಮುಂಬೈನಲ್ಲಿ 1,728 ರೂ., ಚೆನ್ನೈನಲ್ಲಿ 1,942 ರೂಪಾಯಿಗೆ ಸಿಗಲಿದೆ. ಈ ಮೂಲಕ ಕಮರ್ಷಿಯಲ್ ಸಿಲಿಂಡರ್ ಬಳಕೆದಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಹೀಗಿದ್ದರೂ ಸ್ಥಿರವಾಗಿದೆ 'ಎಲ್‌ಪಿಜಿ'!
ಮತ್ತೊಂದು ಕಡೆ ವಾಣಿಜ್ಯ ಎಲ್‌ಪಿಜಿ ಬೆಲೆ ಇಳಿಕೆ ಕಂಡಿದ್ದರೂ ಸಹ ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಬೆಲೆ ಬದಲಾಗದೆ ಉಳಿದಿದೆ. ಕೆಲ ದಿನಗಳ ಹಿಂದಷ್ಟೇ ಒಎನ್‌ಸಿ ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿತ್ತು. ಆದರೆ ಇದೀಗ ಬೆಲೆಯಲ್ಲಿ ಕಡಿತವಾಗಿರುವುದು ಭಾರಿ ದೊಡ್ಡ ರಿಲೀಫ್ ನೀಡಿದೆ. ಹಾಗೇ ಈಗ ಕಮರ್ಷಿಯಲ್ ಸಿಲಿಂಡರ್ ರೇಟ್ ಕಡಿಮೆಯಾದ ಹಿನ್ನೆಲೆ ಹೋಟೆಲ್ & ರೆಸ್ಟೋರೆಂಟ್ ಮಾಲೀಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಹಾಗೇ ಈ ಬೆಳವಣಿಗೆಯಿಂದ ಗ್ರಾಹಕರ ಮೇಲೆಯೂ ಹೊರೆ ಕಡಿಮೆಯಾಗುವ ನಿರೀಕ್ಷೆ ಇದೆ.

ಗೃಹ ಬಳಕೆ LPG ರೇಟ್ ಹೇಗಿದೆ?
ಇನ್ನು ಮೇಲೆ ಹೇಳಿದ ಅಷ್ಟೂ ವಿವರ ಕಮರ್ಷಿಯಲ್ ಎಲ್‌ಪಿಜಿ ಬಗ್ಗೆ ಆಗಿದ್ರೆ ಇನ್ನೊಂದು ಕಡೆ ಗೃಹ ಬಳಕೆ ಎಲ್‌ಪಿಜಿ ರೇಟ್ ಹೇಗಿದೆ? ಬನ್ನಿ ತಿಳಿಯೋಣ. ಈಗಿನ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 903 ರೂಪಾಯಿಗೆ ಗೃಹ ಬಳಕೆ ಸಿಲಿಂಡರ್ ಸಿಗ್ತಿದ್ದು. ಕೋಲ್ಕತ್ತಾದಲ್ಲಿ 1000 ರೂಪಾಯಿ, ಮಹಾನಗರಿ ಮುಂಬೈನಲ್ಲಿ 902.50 ರೂ., ಚೆನ್ನೈನಲ್ಲಿ 918.50 ರೂಪಾಯಿ, ಬೆಂಗಳೂರಲ್ಲಿ 905.50 ರೂ., ಭುವನೇಶ್ವರದಲ್ಲಿ 929 ರೂಪಾಯಿ, ಚಂಡೀಗಢದಲ್ಲಿ 912.50 ರೂ., ಹೈದರಾಬಾದ್ ನಗರದಲ್ಲಿ 955 ರೂಪಾಯಿ ಇದೆ.












Click it and Unblock the Notifications