ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಮಾಂಸ ನಿಷೇಧ : ಮೋದಿ, ಮನೋಹರ್ ಹತ್ಯೆಗೆ ಸಂಚು!

By Mahesh
|
Google Oneindia Kannada News

ಪಣಜಿ, ಜ.19: ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಮುದ್ರೆ ಹೊಂದಿರುವ ಅನಾಮಿಕ ಪತ್ರವೊಂದು ಗೋವಾ ಪೊಲೀಸರ ಕೈಗೆ ಸಿಕ್ಕಿದೆ. ಅದರಲ್ಲಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹತ್ಯೆ ಸಂಚು, ಬೆದರಿಕೆ ಇದೆ ಎಂದು ತಿಳಿದು ಬಂದಿದೆ. ಈ ಪತ್ರ ಈಗ ಎಲ್ಲಾ ಪೊಲೀಸ್ ಠಾಣೆಗಳಿಗೆ ತಲುಪಿದ್ದು, ಉಗ್ರ ನಿಗ್ರಹ ದಳ ಎಟಿಎಸ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

ಗೋವಾದ ಎಲ್ಲಾ ಪೊಲೀಸ್ ಠಾಣೆಗಳಿಗೆ ಪತ್ರದ ಪ್ರತಿ ರವಾನಿಸಲಾಗಿದೆ. ಪ್ರಕರಣವನ್ನು ಭಯೋತ್ಪಾದನೆ ನಿಗ್ರಹ ದಳಕ್ಕೆ ವರ್ಗಾಯಿಸಿ, ತನಿಖೆ ಕೈಗೊಳ್ಲಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಗಣರಾಜ್ಯೋತ್ಸವದ ಮೇಲೆ ಐಎಸ್ ಐಎಸ್ ಉಗ್ರರ ಕಣ್ಣು?]

Alleged ISIS letter threatens to kill Narendra Modi, Manohar Parrikar

ಕಳೆದ ವಾರ ಗೋವಾ ಸರ್ಕಾರದ ಕಾರ್ಯದರ್ಶಿ ಕಚೇರಿಗೆ ಈ ಪೋಸ್ಟ್ ಕಾರ್ಡ್ ಪತ್ರ ಬಂದಿದೆ. ಪತ್ರದ ಸತ್ಯಾಸತ್ಯತೆ ಬಗ್ಗೆ ತನಿಖೆ ಮುಂದುವರೆದಿದೆ. ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಗೋಹತ್ಯೆ ನಿಷೇಧದ ಕ್ರಮವನ್ನು ಖಂಡಿಸಿ ಬರೆಯಲಾಗಿದೆ. ಪತ್ರದ ಕೊನೆಯಲ್ಲಿ ಐಎಸ್ ಐಎಸ್ ಮೊಹರು ಇದೆ.

ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಇರಾಕ್ (ಐಎಸ್‌ಐಎಸ್) ಉಗ್ರರು ಜನವರಿ 26ರ ಗಣರಾಜ್ಯೋತ್ಸವದ ದಿನ ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳ ಮೇಲೆ ದಾಳಿ ಮಾಡಬಹುದು ಎಂದು ಎಚ್ಚರಿಕೆ ರವಾನಿಸಲಾಗಿದೆ. ಅಗತ್ಯ ಭದ್ರತೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ

English summary
An anonymous letter purportedly signed by ISIS has threatened to kill Prime Minister Narendra Modi and Defence Minister Manohar Parrikar. Goa Police have circulated this letter to all the police stations in the state and handed over the case to the Anti Terrorist Squad (ATS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X