ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾಧಿಕಾರಿಯಿಂದ ಕಪಾಳಕ್ಕೆ ಬಿಗಿಸಿಕೊಂಡಿದ್ದ ಮೌಲಾನಾ ಮಸೂದ್ ಅಜರ್

|
Google Oneindia Kannada News

ನವದೆಹಲಿ, ಫೆಬ್ರವರಿ 18: ಜೈಶೆ-ಇ-ಮೊಹಮ್ಮದ್ ಸಂಘಟನೆಯು ತಾವೇ ಪುಲ್ವಾಮಾ ದಾಳಿ ಮಾಡಿದ್ದು ಎಂದು ಹೇಳಿಕೊಂಡಾಗ ಭಾರತೀಯರನೇಕರು ಕೈ-ಕೈ ಹಿಸುಕಿಕೊಂಡರು. ಅದಕ್ಕೆ ಕಾರಣ ಜೈಶೆ-ಎ-ಮೊಹಮ್ಮದ್ ಸಂಘಟನೆ ಮುಖಂಡ ಮೌಲಾನಾ ಮಸೂದ್ ಅಜರ್‌.

ಹೌದು, ಈ ಭಯೋತ್ಪಾದಕ ಮಸೂದ್ ಅಜರ್‌ನನ್ನು 1994ರಲ್ಲೇ ಭಾರತ ಸೆರೆ ಹಿಡಿದಿತ್ತು. ಆತನ ವಿಚಾರಣೆ ನಡೆಸಿ ಪಾಕಿಸ್ತಾನದ ವಿರುದ್ಧ ಮಹತ್ವದ ಮಾಹಿತಿಗಳನ್ನು ಹೊರಹಾಕುತ್ತಿತ್ತು. ಆದರೆ ಅಷ್ಟರಲ್ಲೇ ಆ ವಿಮಾನ ಅಪಹರಣ ನಡೆದು ಮಸೂದ್‌ನನ್ನು ವಾಪಸ್ ಬಿಡಬೇಕಾಯಿತು.

ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ

ಆದರೆ 1994 ರಲ್ಲಿ ಆತನ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಆ ಸನ್ನಿವೇಶಗಳನ್ನೂ, ಮಸೂರ್ ಅಜರ್‌ನ ವ್ಯಕ್ತಿತ್ವದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವನಿಗೆ ಪೊಲೀಸ್ ಅಧಿಕಾರಿಗಳು ಮಾಡಿದ್ದ ಕಪಾಳಮೋಕ್ಷದ ಬಗ್ಗೆಯೂ ನೆನಪಿಸಿಕೊಂಡಿದ್ದಾರೆ.

Indian army officer slapped Masood Azhar while he is in custody

ಆತ ಗಟ್ಟಿ ವ್ಯಕ್ತಿದವನಾಗಿರಲಿಲ್ಲ, ಬಹಳ ಸುಲಭವಾಗಿ ಆತನಿಂದ ವಿಷಯಗಳನ್ನು ವಿಚಾರಣೆ ಕೊಠಡಿಯಲ್ಲಿ ಹೊರತೆಗೆಸಬಹುದಾಗಿತ್ತು, ಆತ ಬಹಳಾ ಭಯಸ್ಥನಾಗಿದ್ದ ಎಂದು ಮಸೂದ್ ಅಜರ್‌ನನ್ನು ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್ ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್

ಸೇನಾಧಿಕಾರಿ ಒಬ್ಬರು ಕೊಟ್ಟ ಒಂದೇ ಹೊಡೆತಕ್ಕೆ ಆತ ತನ್ನ ಬಳಿ ಇದ್ದ ಎಲ್ಲಾ ವಿಷಯಗಳನ್ನು ಹೇಳಲು ಪ್ರಾರಂಭಿಸಿದ್ದ, ಭಯೋತ್ಪಾದನೆ ಸಂಘಟನೆಯ ಸೂಕ್ಷ್ಮ ವಿಷಯಗಳನ್ನೆಲ್ಲಾ ಅವನು ಒಂದೊಂದಾಗಿ ಹೇಳಲು ಪ್ರಾರಂಭಿಸಿದ್ದ ಎಂದು ವಿಶೇಷ ತನಿಖಾ ತಂಡದಲ್ಲಿದ್ದ ಆ ಮಾಜಿ ಪೊಲೀಸ್ ಉನ್ನತಾಧಿಕಾರಿ ಹೇಳಿದ್ದಾರೆ.

ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?

ಪೋರ್ಚುಗಲ್ ಪಾಸ್‌ಪೋರ್ಟ್‌ ಬಳಸಿ ಭಾರತಕ್ಕೆ ಬಂದಿದ್ದ ಮೌಲಾನಾ ಮಸೂದ್ ಅಜರ್‌ನನ್ನು 1994 ರಲ್ಲಿ ಕಾಶ್ಮೀರದ ಅನಂತ್‌ನಾಗ್‌ ನಲ್ಲಿ ಪೊಲೀಸರು ಬಂಧಿಸಿದ್ದರು. ನಂತರ 1999 ರಲ್ಲಿ ಭಾರತದ ವಿಮಾನವೊಂದನ್ನು ಅಪಹರಣ ಮಾಡಿ ಕಂದಹಾರ್‌ಗೆ ತೆಗೆದುಕೊಂಡು ಹೋಗಿ ಮಸೂದ್‌ ಅಜರ್‌ನನ್ನು ಬಿಡುಗಡೆಗೊಳಿಸುವಂತೆ ಹೆದರಿಸಲಾಯಿತು. ಅಂತೆಯೇ ಅಜರ್‌ನನ್ನು ಬಿಟ್ಟು ಪ್ರಯಾಣಿಕರನ್ನು ವಾಪಸ್ ಕರೆತಂತು ಆಗಿನ ಬಿಜೆಪಿ ಸರ್ಕಾರ.

ಭಾರತದಿಂದ ಬಿಡುಗಡೆ ಆದ ಬಳಿಕ ಜೈಶೆ-ಎ-ಮೊಹಮ್ಮದ್ ಸಂಘಟನೆ ಕಟ್ಟಿದ ಮಸೂದ್ ಅಜರ್‌ ಹಲವು ವಿಧ್ವಂಸಕ ಕೃತ್ಯಗಳನ್ನು ಭಾರತದಲ್ಲಿ ಮಾಡಿದ.

ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ

ವಿಚಾರಣೆ ಸಮಯ ಆತ, ಭಯೋತ್ಪಾದನಾ ಸಂಘಟನೆಗಳಿಗೆ ನೇಮಕಾತಿ ಮಾಡಿಕೊಳ್ಳುವ ವಿಧಾನ, ಪಾಕಿಸ್ತಾನದ ಐಎಸ್‌ಐ ಕಾರ್ಯ ನಿರ್ವಹಿಸುವ ರೀತಿ, ಇನ್ನೂ ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದ ಎಂದು ವಿಚಾರಣೆಯಲ್ಲಿ ಭಾಗವಹಿಸಿದ್ದ ಐಪಿಎಸ್‌ ಅಧಿಕಾರಿ ಮೋಹನನೈ ಹೇಳಿದ್ದಾರೆ.

ನಾನು ಆತನನ್ನು ಹಲವು ಬಾರಿ ಕೋಟ್ ಬಲ್ವಾ ಜೈಲಿನಲ್ಲಿ ಭೇಟಿ ಮಾಡಿದ್ದೇನೆ. ಹಲವು ಗಂಟೆಗಳ ಕಾಲ ಆತನನ್ನು ವಿಚಾರಣೆ ನಡೆಸಿದ್ದೇನೆ, ನಾವು ಆತನ ಮೇಲೆ ಯಾವುದೇ ದಬ್ಬಾಳಿಕೆ ಮಾಡಬೇಕಾದ ಅವಶ್ಯಕತೆಯೇ ಬರಲಿಲ್ಲ, ಆತ ಸುಲಭವಾಗಿ ನಮಗೆ ಮಾಹಿತಿಗಳನ್ನು ನೀಡುತ್ತಿದ್ದ ಎಂದು ಅವರು ಹೇಳಿದ್ದಾರೆ.

ನೀವು ನನ್ನನ್ನು ಕಡಿಮೆಯಾಗಿ ಎಣಿಸಿದ್ದೀರಿ, ನಾನು ವಾಪಸ್ ಪಾಕಿಸ್ತಾನಕ್ಕೆ ಸೇರುವಂತೆ ಐಎಸ್‌ಐ ನೋಡಿಕೊಳ್ಳುತ್ತದೆ ಎಂದು ಅಜರ್ ಹೇಳುತ್ತಿದ್ದನೆಂದು ಆ ಅಧಿಕಾರಿ ನೆನದಿದ್ದಾರೆ. ಯಾವುದೇ ಪ್ರಶ್ನೆಗೆ ಅಜರ್ ಸುದೀರ್ಘವಾದ ಉತ್ತರಗಳನ್ನೇ ನೀಡುತ್ತಿದ್ದನಂತೆ.

English summary
Indian army officer once slapped terrorist Jem leader Moulana Masood Azar. Officer who interrogate him recalls his custody days. officer said 'Azar was hard, he get scared by just one slap of army jawan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X