ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?
Recommended Video

ಇಸ್ಲಾಮಾಬಾದ್, ಫೆಬ್ರವರಿ 17:ಪುಲ್ವಾಮಾದ ಆತ್ಮಾಹುತಿ ದಾಳಿ ನಡೆಸಲು ಆದಿಲ್ ಹುಸೇನ್ ಅಹ್ಮದ್ ಗೆ ನಿರ್ದೇಶನ ಸಿಕ್ಕಿದ್ದು ಪಾಕಿಸ್ತಾನದ ಆಸ್ಪತ್ರೆಯಿಂದ. ಸಂಸತ್ ದಾಳಿ, ಪಠಾನ್ ಕೋಟ್ ದಾಳಿಯ ರೂವಾರಿ, ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಸದ್ಯ ಆಸ್ಪತ್ರೆಯಲ್ಲಿದ್ದಾನೆ.
ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ದಾಳಿ ನಡೆಸುವಂತೆ ಮಸೂದ್ ಅಜರ್ ಆದೇಶ ನೀಡಿದ ಸುದ್ದಿ ಸಿಕ್ಕಿದೆ. ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ವಿಷಯ ಪರಿಸ್ಥಿತಿಯಲ್ಲಿರುವ ಮಸೂದ್ ಕಳೆದ ನಾಲ್ಕು ತಿಂಗಳಿನಿಂದ ಆಸ್ಪತೆಯಲ್ಲಿದ್ದಾನೆ.
ಯುನೈಟೆಡ್ ಜಿಹಾದ್ ಕೌನ್ಸಿಲ್ ನ ಕಳೆದ 6 ಸಭೆಗಳಿಗೂ ಮಸೂದ್ ಹಾಜರಾಗಿಲ್ಲ. ಭಾರತ ವಿರುದ್ಧ ಭಯೋತ್ಪಾದನಾ ಕೃತ್ಯ ಎಸಗಲು ಪಾಕಿಸ್ತಾನ ಬೆಂಬಲಿತ ಈ ಜಿಹಾದಿ ಪಡೆಗಳಿಗೆ ಮಸೂದ್ ನಿರ್ದೇಶನ ಮುಖ್ಯವಾಗುತ್ತಿತ್ತು. ಪುಲ್ವಾಮಾ ದಾಳಿಗೂ 8 ದಿನಗಳ ಮುನ್ನ ಆಡಿಯೋ ಸಂದೇಶ ಕಳಿಸಿದ್ದ ಮಸೂದ್, ಜಿಹಾದಿಗಳನ್ನು ಹುರಿದುಂಬಿಸಿದ್ದ.

ಉಸ್ಮಾನ್ ಸಾವಿನ ಪ್ರತೀಕಾರ
ಉಸ್ಮಾನ್ ಸಾವಿನ ಪ್ರತೀಕಾರ: ಅಜರ್ ಸಂಬಂಧಿ ಉಸ್ಮಾನ್ ನನ್ನು ಭಾರತೀಯ ಸೇನೆ ಕೊಂದು ಹಾಕಿದ್ದು, ಜಿಹಾದಿಗಳಿಗೆ ಭಾರಿ ಆಘಾತ ನೀಡಿತ್ತು. ಉಸ್ಮಾನ್ ಸಾವಿನ ಪ್ರತೀಕಾರ ತೆಗೆದುಕೊಳ್ಳುವಂತೆ ಆಡಿಯೋ ಸಂದೇಶದಲ್ಲಿ ಅಝರ್ ಕರೆ ನೀಡಿದ್ದಾನೆ. ತ್ರಾಲ್ ನಲ್ಲ್ ಕಳೆದ ಅಕ್ಟೋಬರ್ ನಲ್ಲಿ ಉಸ್ಮಾನ್ ನನ್ನು ಭಾರತದ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದನ್ನು ಅಜರ್ ಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ, ಪುಲ್ವಾಮಾ ದಾಳಿಗೆ ಸಜ್ಜುಗೊಳಿಸಿದ

ಕಾಶ್ಮೀರಿ ಯುವಕರ ತಲೆಕೆಡಿಸಿದ ಜಿಹಾದಿಗಳು
ಅಜರ್ ಅಳಿಯ ಮೊಹಮ್ಮದ್ ಉಮೇರ್ ಹಾಗೂ ಅಬ್ದುಲ್ ರಶೀದ್ ಘಾಜಿ ಇಬ್ಬರು ಸೇರಿಕೊಂಡು ಕಣಿವೆ ರಾಜ್ಯದಲ್ಲಿ ಮಸೂದ್ ನೀಡಿದ ಆಡಿಯೋ ಸಂದೇಶವನ್ನು ಯುವಕರಿಗೆ ಹಂಚಿ ಅವರ ತಲೆಕೆಡಿಸುವ ಕಾರ್ಯದಲ್ಲಿ ತೊಡಗಿದರು. ಎಲ್ ಇ ಡಿ ಸ್ಫೋಟಕ ಬಳಕೆ, ಆತ್ಮಾಹುತಿ ದಾಳಿಗೆ ಕಾಶ್ಮೀರಿ ಯುವಕರನ್ನು ತರಬೇತಿಗೊಳಿಸತೊಡಗಿದರು.

ಆತ್ಮಾಹುತಿ ದಾಳಿಗೂ ಮುನ್ನ ಸರಣಿ ಸಭೆ
ಕಾಶ್ಮೀರದಲ್ಲಿರುವ ಭಾರತದ ಹಿರಿಯ ಅಧಿಕಾರಿಗಳ ಪ್ರಕಾರ, ಸದ್ಯ್ ಜೈಷ್ ಎ ಮೊಹಮ್ಮದ್ ನ ಉಸ್ತುವಾರಿಯನ್ನು ಉಮೆರ್, ಇಸ್ಮಾಯಿಲ್, ರಶೀದ್ ಘಾಜಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು 60 ಮಂದಿ ಸದಸ್ಯರು ಈ ಸಂಘಟನೆಯಲ್ಲಿದ್ದು ಈ ಪೈಕಿ 35 ಮಂದಿ ಸ್ಥಳೀಯರಿದ್ದಾರೆ.
ಅಜರ್ ಮಸೂರ್ ಅನುಪಸ್ಥಿತಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಸೈಯದ್ ಸಲಾಹುದ್ದೀನ್ ಸಲಹೆ ನೀಡುತ್ತಿದ್ದಾನೆ. ಜನವರಿ 19ರಂದು ಹೊಸ ನೆಲೆಯಲ್ಲಿ ಸಭೆ ನಡೆಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದಿನ ಟೌನ್ ಹಾಲ್ ನಲ್ಲಿ ಸಭೆ ನಡೆಸಿ, ಸುಧಾರಿತ ಸ್ಫೋಟಕಗಳ ಬಳಕೆ ಬಗ್ಗೆ ಚರ್ಚಿಸಿದ್ದಾರೆ.

ಹಿಜ್ಬುಲ್, ತೆಹ್ರಿಕ್, ಜೈಶ್, ಐಎಸ್ಐ ಅಧಿಕಾರಿಗಳು
ಸಭೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಸಯೀದ್ ಉಸ್ಮಾನ್ ಶಾ(ಹಿರಿಯ ಕಮ್ಯಾಂಡರ್), ಇಮ್ತಿಯಾಜ್ ಅಲಂ(ಡೆಪ್ಯುಟಿ ಛೀಪ್), ಝೇಲಂ ಕಣಿವೆಯ ತೆಹ್ರಿಕ್ ಉಲ್ ಮುಜಾಹಿದ್ದೀನ್ ನ ಮುಖ್ಯಸ್ಥ ಡಾ. ಅಬು ಖಾಲೀದ್, ಶೇಖ್ ಜಲೀಲುಲ್ ರೆಹ್ಮಾನ್, ಜೈಶ್ ಎ ಮೊಹಮ್ಮದ್ ನ ಮುಖ್ಯಸ್ಥ ಬಿಲಾಲ್ ಕಾಶ್ಮೀರಿ, ಐಎಸ್ಐನ ಬ್ರಿಗೇಡಿಯರ್ ಜುಬೈರ್ ಭಾಗವಹಿಸಿದ್ದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications