Get Updates
Get notified of breaking news, exclusive insights, and must-see stories!

ಫೆ.14 ಭಾರತಕ್ಕೆ ಕರಾಳ ದಿನ, ಯೋಧರ ಬಲಿದಾನ ಸ್ಮರಣೀಯ

ಬೆಂಗಳೂರು, ಫೆಬ್ರವರಿ 14: ಕಣಿವೆ ರಾಜ್ಯದ ಪುಲ್ವಾಮಾ ಬಳಿ 2019ರ ಫೆಬ್ರವರಿ14ರಂದು ಉಗ್ರರ ದಾಳಿಯ ಕಹಿ ಸ್ಮರಣೆಗೆ ಇಂದು ಎರಡನೇ ವರ್ಷ. ಭಾರತೀಯರು ಇಂದು ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.

78 ಸೇವಾ ವಾಹನಗಳಲ್ಲಿ 2,547 ಸಿಆರ್ ಪಿಎಫ್ ಯೋಧರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳುತ್ತಿದ್ದರು. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಪುಲ್ವಾಮಾ ಬಳಿಯ ಅವಂತಿಪೊರ್ ಸಮೀಪದಲ್ಲಿ ಸೇನಾ ವಾಹನ ಸ್ಫೋಟಗೊಂಡಿತು. ಜೈಷ್-ಇ-ಮೊಹಮ್ಮದ್ ಸಂಘಟನೆಯ ವಾಹನದಲ್ಲಿದ್ದ ಆತ್ಮಾಹುತಿ ಬಾಂಬರ್ ಕೃತ್ಯ ಇದಾಗಿತ್ತು. 22 ವರ್ಷ ವಯಸ್ಸಿನ ಆದ್ಲ್ ಅಹ್ಮದ್ ದರ್ ಈ ಕೃತ್ಯ ಎಸಗಿದ್ದ. ಈ ದುರ್ಘಟನೆಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದರೆ, 39 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

Two years of Pulwama terror attack: Netizens remember sacrifice of CRPF soldiers

ಜೈಷ್-ಇ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬರ್ ತೆಗೆದುಕೊಂಡು ಬಂದಿದ್ದ ವಾಹನದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ತುಂಬಲಾಗಿತ್ತು. ಬರೋಬ್ಬರಿ 300 ಕೆಜಿ ಸ್ಫೋಟಕಗಳ ಜೊತೆಗೆ 80 ಕೆಜಿ ಆರ್ ಡಿಎಕ್ಸ್ ನ್ನು ವಾಹನದಲ್ಲಿ ತುಂಬಿಕೊಂಡು ಬಂದಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿತ್ತು.

ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿಎಫ್) ಯೋಧರನ್ನು ಭಾರತ ಸರ್ಕಾರ ಗೌರವಿಸಿ ನಮನ ಸಲ್ಲಿಸಿದೆ. ಎಎಸ್ಐ ಮೋಹನ್ ಲಾಲ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಪೊಲೀಸ್ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಬಾಲಾಕೋಟ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು.

ಫೆ.14ರ ಕರಾಳ ದಿನದ ಬಗ್ಗೆ ಟ್ವಿಟ್ಟರಲ್ಲಿ ಸಾಕಷ್ಟು ಮಂದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+