ಚಿತ್ರಗಳಲ್ಲಿ : ಕ್ರಿಸ್‌ಮಸ್ ಹಬ್ಬದ ಸಂಭ್ರಮ, ಸಡಗರ

Posted By:
Subscribe to Oneindia Kannada

ಯೇಸುಕ್ರಿಸ್ತನ ಜನ್ಮದಿನದ ಹಬ್ಬವಾದ ಕ್ರಿಸ್‌ಮಸ್ ಸಂಭ್ರಮ, ಸಡಗರ. ಭಾರತ ಸೇರಿದಂತೆ ಕ್ರಿಸ್‌ಮಸ್ ಸಂಭ್ರಮ ಜೋರಾಗಿದೆ.

ಕ್ರಿಸ್‌ಮಸ್ ಪ್ರಾರ್ಥನೆ, ಸಂತಾ ಕ್ಲಾಸ್ ವೇಷ ತೊಟ್ಟವರು ಉಡುಗೊರೆ, ಚಾಕೋಲೇಟ್‌ಗಳನ್ನು ಹಂಚುವ, ಕ್ರೈಸ್ತ ಬಾಂಧವರೆಲ್ಲರೂ ಪ್ರಾರ್ಥನೆ ಸಲ್ಲಿಸುವ ಚಿತ್ರಗಳು ಇಲ್ಲಿವೆ

ವಿಶೇಷ: ಕರ್ನಾಟಕದ ಗ್ರಾಮಗಳಲ್ಲಿ ಕ್ರಿಸ್ಮಸ್ ಆಚರಣೆ ಹೇಗೆ?

ಪ್ರೀತಿಯ ಕಾರಂಜಿಯಾಗಿ, ಸೋದರತೆಯ ಸಾಗರವಾಗಿ ಹಾಗೂ ಅನುಕಂಪದ ಪರ್ವತವಾಗಿದ್ದ ಏಸುಕ್ರಿಸ್ತ ಕ್ಷಮಾಗುಣದಲ್ಲಿ ಆಗಸದಷ್ಟೇ ಎತ್ತರ ಹಾಗೂ ವಿಶಾಲವಾಗಿದ್ದರು.

ಕ್ರಿಸ್ಮಸ್ ಹಬ್ಬದ ಕುರಿತ ಸೋಜಿಗ ಸ್ವಾರಸ್ಯಗಳು

ಏಸುವಿನ ಬದುಕು ಮನುಕುಲಕ್ಕೆ ಬೆಳಕು ಹಾಗೂ ಮಾರ್ಗದರ್ಶಿ ಎಂದು ಎಲ್ಲರೂ ಯೇಸು ಕ್ರಿಸ್ತನನ್ನು ಸ್ತುತಿಸಿದ್ದಾರೆ.ಡಿಸೆಂಬರ್ 25ರಂದು ಜನರು ಮನೆಮನೆಗೆ ತೆರಳಿ ಶುಭಾಶಯ ಕೋರುತ್ತಾ, ತಯಾರಿಸಿದ ಸಿಹಿತಿಂಡಿಗಳನ್ನು ಹಂಚಿಕೊಂಡು ಹಬ್ಬದ ಆನಂದವನ್ನು ಇಮ್ಮಡಿಗೊಳಿಸುತ್ತಾರೆ. ಮಂಗಳೂರು, ಗೋವಾ, ಮಡಿಕೇರಿ ಮೂಲದವರು ಜೊತೆಯಲ್ಲಿ ದ್ರಾಕ್ಷಾರಸ ತಯಾರಿಸಿ ಹಂಚುತ್ತಾರೆ.

ಪನಾಮಾ ನಗರದಲ್ಲಿ ಸಂಭ್ರಮಾಚರಣೆ

ಪನಾಮಾ ನಗರದಲ್ಲಿ ಸಂಭ್ರಮಾಚರಣೆ

ಪನಾಮಾ ಸಿಟಿ: ಎಸ್ಟೆಫಾನಿ ಗಾರ್ಸಿಯಾ ಬಣ್ಣ ಬಣ್ಣದ ಕನ್ನಡಕ ಧರಿಸಿ ಮ್ಯೂಸಿಕ್ ಬ್ಯಾಂಡ್ ಜತೆಗೆ ಕ್ರಿಸ್ಮಸ್ ಪರೇಡ್ ನಲ್ಲಿ ಸಾಗಿದ್ದು ಹೀಗೆ

ಮಥುರಾದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಮಥುರಾದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಮಥುರಾ: ಸಂತಾಕ್ಲಾಸ್ ನಂತೆ ಧರಿಸಿದ ಮಕ್ಕಳು ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಕ್ರಿಸ್ಮಸ್ ಸಂಭ್ರಮಾಚರಣೆ

ಕ್ರಿಸ್ಮಸ್ ಸಂಭ್ರಮಾಚರಣೆ

ಸೈಂಟ್ ಲೂಯಿಸ್ : ಸೈಂಟ್ ಚಾರ್ಲ್ಸ್ ಬಳಿ ಜೋಯಿಲ್ ಅರೇನಾ ಹಾಗೂ ಎಲಿಸೆ ಜತೆ ಕ್ರಿಸ್ಮಸ್ ಸಂಭ್ರಮಾಚರಣೆ.

ವಿಶೇಷ ಚೇತನ ಮಕ್ಕಳ ಜತೆ ಕ್ರಿಸ್ಮಸ್

ವಿಶೇಷ ಚೇತನ ಮಕ್ಕಳ ಜತೆ ಕ್ರಿಸ್ಮಸ್

ಮುಂಬೈ : ವಿಶೇಷ ಚೇತನ ಮಕ್ಕಳ ಜತೆ ಕ್ರಿಸ್ಮಸ್ ಆಚರಣೆ ಸಂಭ್ರಮ.

ವ್ಯಾಟಿಕನ್ ಸಿಟಿಯಲ್ಲಿ ಕ್ರಿಸ್ಮಸ್

ವ್ಯಾಟಿಕನ್ ಸಿಟಿಯಲ್ಲಿ ಕ್ರಿಸ್ಮಸ್

ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರು ಬಾಲ ಯೇಸುವಿನ ಪ್ರತಿಮೆಗೆ ಮುತ್ತಿಡುತ್ತಿದ್ದಾರೆ. ಸೈಂಟ್ ಪೀಟರ್ಸ್ ಬಾಸಿಲಿಕಾದಲ್ಲಿನ ದೃಶ್ಯ. AP/PTI

ಜಿನೀವಾದಲ್ಲಿ ಕ್ರಿಸ್ಮಸ್

ಜಿನೀವಾದಲ್ಲಿ ಕ್ರಿಸ್ಮಸ್

ಜೀನಿವಾ : ಕೌಪ್ ಡಿ ನೊಯಿಲ್ 79ನೇ ವಾರ್ಷಿಕ ಈಜು ಮೋಜು ಲೇಕ್ ಜಿನೀವಾದಲ್ಲಿನ ದೃಶ್ಯ.

ಲಾಹೋರ್ ನಲ್ಲಿ ಬಿಗಿ ಭದ್ರತೆ

ಲಾಹೋರ್ ನಲ್ಲಿ ಬಿಗಿ ಭದ್ರತೆ

ಲಾಹೋರ್ ನಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯವು ಬಿಗಿ ಭದ್ರತೆ ನಡುವೆ ಸೇಕ್ರೆಡ್ ಹಾರ್ಟ್ ಕೆಥ್ರಡೆಲ್ ನಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ.

ಕೋಲ್ಕತಾದಲ್ಲಿ ಕ್ರಿಸ್ಮಸ್ ಸಂಭ್ರಮ

ಕೋಲ್ಕತಾದಲ್ಲಿ ಕ್ರಿಸ್ಮಸ್ ಸಂಭ್ರಮ

ಕೋಲ್ಕತಾದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ತೊಡಗಿರುವ ಮಕ್ಕಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Christmas is being celebrated worldwide with much pomp, gaiety and devotion with markets and churches glittering and households preparing special dishes for the day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ