ಅಪನಗದೀಕರಣಕ್ಕೆ ನೀರು ಕುಡಿಸಿದ ನೀರವ್ ಮೋದಿ!

ನವದೆಹಲಿ, ಫೆಬ್ರವರಿ 20: ಪಂಜಾಬ್ ನ್ಯಾಷನಲ್ ಬ್ಯಾಂಕಿ (ಪಿಎನ್ ಬಿ)ಗೆ 11,400 ಕೋಟಿ ರೂಪಾಯಿ ವಂಚನೆ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿಯ ಕಿರಾತಕ ಕೃತ್ಯಗಳು ಒಂದೊಂದಾಗೇ ಹೊರ ಬರುತ್ತಿವೆ.

ಅಪನಗದೀಕರಣದ ಸಮಯದಲ್ಲಿ ಸರಕಾರಿ ವ್ಯವಸ್ಥೆಗೆ ನೀರವ್ ಮೋದಿ ಮಣ್ಣೆರೆಚಿದ್ದರು ಎಂದು ತಿಳಿದು ಬಂದಿದೆ. 2016ರ ನವೆಂಬರ್ 8ರಂದು ಅಪನಗದೀಕರಣವಾಗುತ್ತಿದ್ದಂತೆ ತಮ್ಮ ಶ್ರೀಮಂತ ಗ್ರಾಹಕರ ಸಹಾಯಕ್ಕೆ ನೀರವ್ ಮೋದಿ ಧಾವಿಸಿದ್ದರು ಎಂದು ಗೊತ್ತಾಗಿದೆ.

ನವೆಂಬರ್ 8, 2016ರಂದು ಒಂದೇ ದಿನ 90 ಕೋಟಿ ರೂಪಾಯಿ ನಗದು ಹಣವನ್ನು ನೀರವ್ ಮೋದಿ ವಿನಿಮಯ ಮಾಡಿಕೊಂಡಿದ್ದರು. ಇವೆಲ್ಲಾ ಅವರ ಶ್ರೀಮಂತ ಗ್ರಾಹಕರಿಗೆ ಸೇರಿದ ಮೂಲ ರಹಿತ ಹಣವಾಗಿತ್ತು ಎಂದು ಗೊತ್ತಾಗಿದೆ.

How Nirav Modi mocked Demonetization move

ಅದೇ ದಿನ ನೀರವ್ ಮೋದಿ ಒಟ್ಟು 5200 ಮಾರಾಟದ ಬಿಲ್ ಗಳನ್ನು ಮಾಡಿದ್ದರು. ಈ ಸಂದರ್ಭ ಅದಕ್ಕೂ ಹಿಂದಿನ ದಿನಾಂಕಗಳನ್ನು ಈ ಬಿಲ್ ಗಳಲ್ಲಿ ಮುದ್ರಿಸಿದ್ದರು. ಸರ್ಕಾರಿ ವ್ಯವಸ್ಥೆಗೆ ಮಣ್ಣೆರೆಚಲು ಈ ರೀತಿ ಮಾಡಿದ್ದರು ಎಂದು ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+