ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಹಸ್ತಾಂತರ: ಕೊನೆಯ ಆಯ್ಕೆ ಕಳೆದುಕೊಂಡ ನೀರವ್ ಮೋದಿ!

|
Google Oneindia Kannada News

ಲಂಡನ್, ಡಿಸೆಂಬರ್ 15: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ಹಾಗೂ ಭಾರತೀಯ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಯುಕೆಯಲ್ಲಿ ಕಾನೂನು ಹೋರಾಟದ ಹಾದಿ ಬಂದ್ ಆಗಿದೆ.

ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಹಸ್ತಾಂತರದ ವಿರುದ್ಧದ ನೀರವ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಆ ಮೂಲಕ ಪ್ರಸ್ತುತ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ನೀರವ್ ಮೋದಿಗೆ ಯುಕೆಯಲ್ಲಿ ಕಾನೂನು ಆಯ್ಕೆಗಳೆಲ್ಲ ಮುಚ್ಚಿದಂತೆ ಆಗಿದೆ.

ಸಂಶೋಧನಾ ಘಟಕ ಸ್ಥಾಪನೆಗೆ ಯುಕೆ ಹೂಡಿಕೆದಾರರಿಗೆ ಸಿಎಂ ಆಹ್ವಾನಸಂಶೋಧನಾ ಘಟಕ ಸ್ಥಾಪನೆಗೆ ಯುಕೆ ಹೂಡಿಕೆದಾರರಿಗೆ ಸಿಎಂ ಆಹ್ವಾನ

ಕಳೆದ ತಿಂಗಳು, ನೀರವ್ ಮೋದಿ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಭಾರತಕ್ಕೆ ತನ್ನನ್ನು ಹಸ್ತಾಂತರ ಮಾಡದಂತೆ ಕೋರಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ್ದರು. ಈ ಸಂಬಂಧ ಯುಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಎದುರಿಸುತ್ತಿರುವ 51 ವರ್ಷದ ವಜ್ರದ ವ್ಯಾಪಾರಿ ಮಾನಸಿಕ ಆರೋಗ್ಯದ ಆಧಾರದ ಮೇಲೆ ಹಸ್ತಾಂತರದ ವಿರುದ್ಧದ ಮೇಲ್ಮನವಿಯನ್ನು ಸಲ್ಲಿಸಿದ್ದರು.

Extradition to india: Businessman Nirav Modi loses last hope in UK Supreme court

13,000 ಕೋಟಿ ರೂಪಾಯಿ ಹಗರಣ:

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣ ಬೆಳಕಿಗೆ ಬಂದಾಗ ನೀರವ್ ಮೋದಿ ಭಾರತದಿಂದ ಪರಾರಿಯಾಗಿದ್ದರು. 13,000 ಕೋಟಿ ಪಿಎನ್‌ಬಿ ಹಗರಣದಲ್ಲಿ ನೀರವ್ ಮೋದಿ ಪ್ರಮುಖ ಆರೋಪಿ ಆಗಿದ್ದರು. ಈ ಪೈಕಿ 7,000 ಕೋಟಿ ಮೌಲ್ಯದ ಪಿಎನ್ ಬಿ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವುದು ಮತ್ತು ಸಾಕ್ಷಿಗಳನ್ನು ಬೆದರಿಸುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ನೀರವ್ ಮೋದಿಯನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಎರಡು ಸೆಟ್ ಕ್ರಿಮಿನಲ್ ಮೊಕದ್ದಮೆಗಳ ವಿಷಯವಾಗಿದೆ. ಜಾರಿ ನಿರ್ದೇಶನಾಲಯ (ED) ಆ ವಂಚನೆಯ ಆದಾಯದ ಲಾಂಡರಿಂಗ್ ಬಗ್ಗೆ ತನಿಖೆ ನಡೆಸುತ್ತಿರುವಾಗ ಸಿಬಿಐ ಪಿಎನ್ ಬಿ ಮೇಲೆ ದೊಡ್ಡ ಪ್ರಮಾಣದ ವಂಚನೆಯನ್ನು ತನಿಖೆ ನಡೆಸುತ್ತಿದೆ.

English summary
Extradition to india: Businessman Nirav Modi loses last hope in UK Supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X