Liquor Price: ಮದ್ಯಪ್ರಿಯರೇ ಗಮನಿಸಿ: ರಾಜ್ಯದಲ್ಲಿ ಜಾರಿಯಾಯ್ತು ಹೊಸ ಅಬಕಾರಿ ನೀತಿ; ಇಲ್ಲಿದೆ ಹೊಸ ಎಂಆರ್‌ಪಿ ದರ ವಿವರ

ಬೆಂಗಳೂರು: ಕರ್ನಾಟಕ ಸರ್ಕಾರವು ಮದ್ಯದ ಮೇಲಿನ ತೆರಿಗೆ ವಿಧಿಸುವ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ನೂತನ 'ಆಲ್ಕೋಹಾಲ್ ಇನ್ ಬೆವರೇಜ್' (AIB-Alcohol-in-Beverage) ಆಧಾರಿತ ಅಬಕಾರಿ ಸುಂಕ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 2026-27ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದ ಈ ಮಹತ್ವದ ಸುಧಾರಣಾ ನೀತಿಯು ಈಗ ಜಾರಿಗೆ ಬಂದಿದೆ.

ಪರಿಷ್ಕೃತ ಎಂಆರ್‌ಪಿ (MRP) ದರ ಪಟ್ಟಿ ಬಿಡುಗಡೆ

ಹೊಸ ನಿಯಮದ ಪ್ರಕಾರ, ಇನ್ಮುಂದೆ ಮದ್ಯದ ಬ್ರ್ಯಾಂಡ್ ಅಥವಾ ಬೆಲೆಯ ಬದಲಾಗಿ, ಆಯಾ ಪಾನೀಯದಲ್ಲಿ ಇರುವ ಆಲ್ಕೋಹಾಲ್ ಪ್ರಮಾಣವನ್ನು ಲೆಕ್ಕ ಹಾಕಿ ತೆರಿಗೆಯನ್ನು ನಿಗದಿಪಡಿಸಲಾಗುತ್ತದೆ. ಹೊಸ ನೀತಿಯನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ಅಬಕಾರಿ ಇಲಾಖೆಯು ರಾಜ್ಯದಲ್ಲಿ ಹೆಚ್ಚು ಮಾರಾಟವಾಗುವ ಪ್ರಮುಖ ಲಿಕ್ಕರ್ ಹಾಗೂ ಬಿಯರ್ ಬ್ರ್ಯಾಂಡ್‌ಗಳ ಗಾತ್ರ ಮತ್ತು ದರಗಳಿಗೆ ಅನುಗುಣವಾಗಿ ನೂತನ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯ (MRP) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಕೆಲವು ಮದ್ಯದ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಏರಿಳಿತವಾಗುವ ಸಾಧ್ಯತೆಯಿದೆ.

Liquor Price

ಅಂತರರಾಷ್ಟ್ರೀಯ ಮಟ್ಟದ ತೆರಿಗೆ ವ್ಯವಸ್ಥೆ

ವಿಶ್ವದ ಹಲವು ಮುಂದುವರಿದ ದೇಶಗಳಲ್ಲಿ ಜಾರಿಯಲ್ಲಿರುವ ಅತ್ಯುತ್ತಮ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕವು ದೇಶದಲ್ಲೇ ಈ ಮಾದರಿಯ ನೀತಿ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಹೊಸ ಸುಧಾರಣೆಯಿಂದಾಗಿ ಮದ್ಯದ ದರ ನಿಗದಿಯಲ್ಲಿ ಹೆಚ್ಚಿನ ಪಾರದರ್ಶಕತೆ ಬರಲಿದ್ದು, ಸರ್ಕಾರದ ಅಬಕಾರಿ ಆದಾಯ ಸಂಗ್ರಹಣೆ ಕೂಡ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ ಎಷ್ಟು ತೆರಿಗೆ ಹಾಕಿದ್ದೀರಿ? ಕಾಂಗ್ರೆಸ್‌ಗೆ ಹೆಚ್.ಡಿ.ಕುಮಾರಸ್ವಾಮಿ ಸವಾಲು
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ ಎಷ್ಟು ತೆರಿಗೆ ಹಾಕಿದ್ದೀರಿ? ಕಾಂಗ್ರೆಸ್‌ಗೆ ಹೆಚ್.ಡಿ.ಕುಮಾರಸ್ವಾಮಿ ಸವಾಲು

ಪರಿಷ್ಕೃತ ಮದ್ಯದ ದರ ಪಟ್ಟಿ

ಬ್ರ್ಯಾಂಡ್ ಹೆಸರು; 90ML ; 180ML

ಲೆಗಸಿ ಸ್ಪೆಷಲ್ ರಮ್/ವಿಸ್ಕಿ: 45 ; 90

ಕಾರ್ನಿವಲ್ ರಮ್: 55 ; 95

ಬ್ಲ್ಯಾಕ್ ಬೆಲ್ಟ್ ಫೈನ್ ಓಲ್ಡ್ ವಿಸ್ಕಿ: 55 ; 95

ಡಿಕೆ ಡಬಲ್ ಕಿಕ್ ಫೈನ್ ವಿಸ್ಕಿ: 50 ; 95

ಬೆಂಗಳೂರು ವಿಸ್ಕಿ/ಬ್ರಾಂಡಿ/ರಮ್: 55 ; 95

ಗ್ರೀನ್ ಚಾಂಪಿಯನ್ ಸುಪೀರಿಯರ್ ವಿಸ್ಕಿ ಮತ್ತು ಬ್ರಾಂಡಿ: 55 ; 105

ರಾಯಲ್ ಗೋಲ್ಡ್ ಕಪ್ ಎಕ್ಸ್‌ಟ್ರಾ ಸ್ಮೂತ್ ವಿಸ್ಕಿ: 55 ; 105

ಅಮೃತ್ಸ್ ಸಿಲ್ವರ್‌ಕಪ್ ರೇರ್ ಇಂಡಿಯನ್ ಬ್ರಾಂಡಿ: 50 ; 95

ಮ್ಯಾಜಿಕ್ ಬ್ಲೆಂಡೆಡ್ ಫೈನ್ ವಿಸ್ಕಿ: 50 ; 95

ತ್ರೀ ಏಸಸ್ ವಿಸ್ಕಿ: 55 ; 95

ರಾಜಾ ವಿಸ್ಕಿ/ರಮ್: 55; 110

ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ: 55; 110

ಬಾಗ್ ಪೈಪರ್ ಡಿಲಕ್ಸ್ ವಿಸ್ಕಿ: 80 ; 155

ಮೆಕ್ ಡೊವೆಲ್ಸ್ ನಂ.1 ಸೆಲೆಬ್ರೇಷನ್ ಕ್ಲಾಸಿಕ್ ರಮ್: 85 ; 165

ಒರಿಜಿನಲ್ ಚಾಯ್ಸ್ ಸ್ಟಾರ್ ಸುಪ್ರೀಮ್ ವಿಸ್ಕಿ: 85 ; 165

ಆಫೀಸರ್ಸ್ ಚಾಯ್ಸ್ ಸ್ಪೆಷಲ್ ವಿಸ್ಕಿ: 90 ; 175

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+