ಭಾರತಕ್ಕೆ ನೀರವ್ ಮೋದಿ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಒಪ್ಪಿಗೆ
ಲಂಡನ್, ಏಪ್ರಿಲ್ 16: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 14,000 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡಲು ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿದೆ.
ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ನೀರವ್ ಮೋದಿ ವೆಸ್ಟ್ ಮಿಸಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಫೆಬ್ರವರಿಯಲ್ಲಿ ಹಾಜರಾಗಿದ್ದರು. ಲಂಡನ್ ವೆಸ್ಟ್ ಮಿಸಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನ ಜಡ್ಜ್ ಸ್ಯಾಮುವಲ್ ಗೊಜ್ ಈ ದೇಶ ನೀಡಿದ್ದು, ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿ ಅವರಿಗೆ ಎಲ್ಲ ರೀತಿಯ ಚಿಕಿತ್ಸೆ ಸಿಗಲಿದೆ ಎಂದಿದ್ದರು.
ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದಿದ್ದ ಅವರು, ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಕೆ ಮಾಡಲು ಅವರಿಗೆ ಹಕ್ಕಿದೆ ಎಂದಿದ್ದರು ಜತೆಗೆ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ವಾದವನ್ನ ತಳ್ಳಿ ಹಾಕಿದ್ದರು.

ಇದೀಗ ನೀರವ್ ಮೋದಿ ಹಸ್ತಾಂತರಕ್ಕೆ ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿದೆ. ಇತ್ತೀಚೆಗಷ್ಟೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 108 ಘಟಕಗಳಲ್ಲಿ ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಆಭರಣಗಳು ಸೇರಿದಂತೆ 1,350 ಕೋಟಿ ರೂ.ಗಳ ಮೌಲ್ಯದ ಮುತ್ತುಗಳನ್ನು ಹಾಂಕಾಂಗ್‌ನಿಂದ ವಶಪಡಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇಡಿ) ಭಾರತಕ್ಕೆ ಮರಳಿ ತಂದಿತ್ತು.
"ಈ ಸರಕುಗಳ ಮೌಲ್ಯವನ್ನು 1,350 ಕೋಟಿ ರೂ. (ಅಂದಾಜು) ಎಂದು ಘೋಷಿಸಲಾಗಿದೆ. ಈ ಬೆಲೆಬಾಳುವ ವಸ್ತುಗಳಲ್ಲಿ ನಯಗೊಳಿಸಿದ ವಜ್ರಗಳು, ಮುತ್ತುಗಳು, ಮುತ್ತು ಮತ್ತು ಬೆಳ್ಳಿ ಆಭರಣಗಳು ಸೇರಿದ್ದವು.
ಇದೀಗ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹಸ್ತಾಂತರ ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ.












Click it and Unblock the Notifications