• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ಮಲ್ಯ, ನೀರವ್ ಮೋದಿ, ಚೋಕ್ಸಿ 8441.5 ಕೋಟಿ ಆಸ್ತಿ ಬ್ಯಾಂಕ್​ಗಳಿಗೆ ವರ್ಗಾವಣೆ

|
Google Oneindia Kannada News

ನವದೆಹಲಿ, ಜೂನ್ 23: ಭಾರತೀಯ ಬ್ಯಾಂಕ್​ಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗೆ ಜಾರಿ ನಿರ್ದೇಶನಾಲಯವು ವರ್ಗಾಯಿಸಿದೆ.

ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಲ್ಲಿ ಸಾಲ ಪಡೆದು ವಂಚಿಸಲಾಗಿದೆ. ಮೂವರು ಉದ್ಯಮಿ ಮಾಡಿರುವ ವಂಚನೆಯಿಂದಾಗಿ ಬ್ಯಾಂಕ್​ಗಳಿಗೆ 22,586 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿದೇಶದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣಕ್ಕೆ ಸಿಕ್ಕಿತು ಸಾಕ್ಷ್ಯ!?ವಿದೇಶದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣಕ್ಕೆ ಸಿಕ್ಕಿತು ಸಾಕ್ಷ್ಯ!?

ಮುಂಬೈನ ಪಿಎಂಎಲ್ಎ ಅಡಿ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಜಾರಿ ನಿರ್ದೇಶನಾಲಯವು ಅದಕ್ಕೆ ಲಗತ್ತಿಸಲಾದ ಷೇರುಗಳನ್ನು (6,600 ಕೋಟಿ ರೂ.) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟಕ್ಕೆ ವರ್ಗಾಯಿಸಿದೆ.

ಸಾಲ ಮರುಪಾವತಿಗೆ 5824 ಕೋಟಿ ರೂ. ಷೇರು ಮಾರಾಟ

ಸಾಲ ಮರುಪಾವತಿಗೆ 5824 ಕೋಟಿ ರೂ. ಷೇರು ಮಾರಾಟ

ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5824.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಜೂನ್ 25ರೊಳಗೆ ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಪಡೆಯುವ ಬಗ್ಗೆ ನಿರೀಕ್ಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮೂಲಕ 1357 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಿಕೊಂಡಿವೆ.

ಇಡಿ ಜಪ್ತಿ ಮಾಡಿರುವ ಒಟ್ಟು ಆಸ್ತಿ-ಷೇರುಗಳ ಮೌಲ್ಯ?

ಇಡಿ ಜಪ್ತಿ ಮಾಡಿರುವ ಒಟ್ಟು ಆಸ್ತಿ-ಷೇರುಗಳ ಮೌಲ್ಯ?

ಜೂನ್ 23ರವರಗಿನ ಅಂಕಿ-ಅಂಶಗಳ ಪ್ರಕಾರ, ಪಿಎಂಎಲ್ಎ ಅಡಿ 18,170.2 ಕೋಟಿ ಮೌಲ್ಯದ ಆಸ್ತಿ ಮತ್ತು ಷೇರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ 330 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಒಟ್ಟು ನಷ್ಟದ ಶೇ.40ರಷ್ಟು ನಷ್ಟವನ್ನು ಪ್ರತಿನಿಧಿಸುವ 9042 ಕೋಟಿ ರೂ.ಗಳ ಆಸ್ತಿಯನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹಸ್ತಾಂತರಿಸಲಾಗಿದೆ.

ಬ್ರಿಟನ್‌ನಲ್ಲಿಯೇ ಉಳಿಯಲು ವಿಜಯ್ ಮಲ್ಯ 'ಮತ್ತೊಂದು ಮಾರ್ಗ'ದ ತಂತ್ರಬ್ರಿಟನ್‌ನಲ್ಲಿಯೇ ಉಳಿಯಲು ವಿಜಯ್ ಮಲ್ಯ 'ಮತ್ತೊಂದು ಮಾರ್ಗ'ದ ತಂತ್ರ

ವಿದೇಶಗಳಲ್ಲಿ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹ

ವಿದೇಶಗಳಲ್ಲಿ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹ

ಕೇಂದ್ರ ತನಿಖಾ ತಂಡದ ಅಧಿಕಾರಿಗಳು ದಾಖಲಿಸಿಕೊಂಡಿರುವ ಎಫ್ಐಆರ್ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಹಿವಾಟಿನ ಜೊತೆಗೆ ವಿದೇಶಗಳಲ್ಲಿ ಆಸ್ತಿ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅಲ್ಲದೇ, ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ತಮ್ಮ ನಿಯಂತ್ರಣದಲ್ಲಿ ಇರುವ ನಕಲಿ ಕಂಪನಿಗಳನ್ನು ತೋರಿಸಿ ಸಾರ್ವಜನಿಕ ಬ್ಯಾಂಕ್​ಗಳಿಂದ ಸಾಲ ಪಡೆದಿರುವುದು ತನಿಖೆ ವೇಳೆ ಬಯಲಾಗಿದೆ.

ಮೂವರು ಉದ್ಯಮಿಗಳು ವಂಚಿಸಿದ ಶೇ.80.45ರಷ್ಟು ಸ್ವತ್ತು ವಶ

ಮೂವರು ಉದ್ಯಮಿಗಳು ವಂಚಿಸಿದ ಶೇ.80.45ರಷ್ಟು ಸ್ವತ್ತು ವಶ

ಭಾರತೀಯ ಬ್ಯಾಂಕ್​ಗಳಿಗೆ ನಕಲಿ ಕಂಪನಿಗಳ ದಾಖಲೆಯನ್ನು ತೋರಿಸಿ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ 22585.83 ಕೋಟಿ ರೂಪಾಯಿ ವಂಚಿಸಿದ್ದಾರೆ. ಈ ಪೈಕಿ ಇದುವರೆಗೂ ಶೇ.80.45ರಷ್ಟು ಅಂದರೆ 18,170.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಷೇರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಡಿ ವಶಕ್ಕೆ ಪಡೆದಿರುವ ಲಗತ್ತಿಸಿರುವ ಆಸ್ತಿಯಲ್ಲಿ 969 ಕೋಟಿ ರೂಪಾಯಿ ಮೌಲ್ಯದ ಆಸ್ತಿಯು ವಿದೇಶದಲ್ಲಿ ಇರುವುದು ಗೊತ್ತಾಗಿದೆ.

ಬ್ಯಾಂಕ್​ಗಳಿಗೆ ಮಕ್ಮಲ್ ಟೋಪಿ ಹಾಕಿ ಉದ್ಯಮಿಗಳು ಪರಾರಿ

ಬ್ಯಾಂಕ್​ಗಳಿಗೆ ಮಕ್ಮಲ್ ಟೋಪಿ ಹಾಕಿ ಉದ್ಯಮಿಗಳು ಪರಾರಿ

ಭಾರತೀಯ ಸಾರ್ವಜನಿಕ ಸ್ವಾಮ್ಯ ಹಾಗೂ ಖಾಸಗಿ ಬ್ಯಾಂಕ್​ಗಳಿಗೆ ಮಕ್ಮಲ್ ಟೋಪಿ ಹಾಕಿದ ಮೂವರು ಉದ್ಯಮಿಗಳು ವಿದೇಶಗಳಿಗೆ ಪರಾರಿ ಆಗಿದ್ದಾರೆ. ಭಾರತಕ್ಕೆ ಮದ್ಯದ ದೊರೆ ವಿಜಯ್ ಮಲ್ಯ, ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ.

ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟೇಟ್ ಕೋರ್ಟ್ ಆದೇಶಿಸಿದ್ದು, ಯುಕೆ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿದೆ. ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿ ಹಿನ್ನೆಲೆ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮವಾಗಲಿದೆ.

ಭಾರತಕ್ಕೆ ಮತ್ತೊಬ್ಬ ಉದ್ಯಮಿ ನೀರವ್ ಮೋದಿ ಹಸ್ತಾಂತರಕ್ಕೂ ಕೂಡ ಯುಕೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ. ಹಸ್ತಾಂತರಕ್ಕೆ ಭಾರತ ಮನವಿ ಸಲ್ಲಿಸಿರುವ ಬೆನ್ನಲ್ಲೇ ಕಳೆದ 2 ವರ್ಷ ಮೂರು ತಿಂಗಳಿನಿಂದ ನೀರವ್ ಮೋದಿ ಲಂಡನ್ ಜೈಲಿನಲ್ಲಿದ್ದಾರೆ.

English summary
The ED has Transferred Shares Attached Assets Worth Rs 8442 Crore Of Mallya, Choksi And Nirav Modi Transferred To PSU Banks. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X