• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಯ, ಮೋದಿ ಎಲ್ಲರೂ ಭಾರತಕ್ಕೆ ವಾಪಸ್ ಬರುತ್ತಿದ್ದಾರೆ: ನಿರ್ಮಲಾ

|
Google Oneindia Kannada News

ನವದೆಹಲಿ, ಮಾರ್ಚ್ 19: ದೇಶಭ್ರಷ್ಟ ಆರ್ಥಿಕ ಅಪರಾಧಿಗಳಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರು ಭಾರತಕ್ಕೆ ಮರಳಿ ಬರುತ್ತಿದ್ದು, ಇಲ್ಲಿನ ಕಾನೂನು ಎದುರಿಸಲಿದ್ದಾರೆ ಎಂದು ಹಣಕಾಸು ಸಚಿನೆ ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ.

'ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಇವರೆಲ್ಲರೂ ಈ ಮಣ್ಣಿನ ಕಾನೂನನ್ನು ಎದುರಿಸಲು ವಾಪಸ್ ಬರುತ್ತಿದ್ದಾರೆ. ಒಬ್ಬರ ನಂತರ ಒಬ್ಬರಂತೆ ಎಲ್ಲರೂ ಈ ದೇಶದ ಕಾನೂನನ್ನು ಎದುರಿಸಲು ದೇಶಕ್ಕೆ ಮರಳಿ ಬರುತ್ತಿದ್ದಾರೆ' ಎಂದು ರಾಜ್ಯಸಭೆಯಲ್ಲಿ ವಿಮೆ (ತಿದ್ದುಪಡಿ) ಮಸೂದೆ, 2021ಕ್ಕೆ ಸಂಬಂಧಿಸಿದ ಚರ್ಚೆ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಿಟನ್‌ನಲ್ಲಿಯೇ ಉಳಿಯಲು ವಿಜಯ್ ಮಲ್ಯ 'ಮತ್ತೊಂದು ಮಾರ್ಗ'ದ ತಂತ್ರಬ್ರಿಟನ್‌ನಲ್ಲಿಯೇ ಉಳಿಯಲು ವಿಜಯ್ ಮಲ್ಯ 'ಮತ್ತೊಂದು ಮಾರ್ಗ'ದ ತಂತ್ರ

ಲಂಡನ್‌ನಲ್ಲಿರುವ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಪ್ರಕರಣ ಲಂಡನ್‌ನ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಇನ್ನು ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬಡೋಸ್‌ನಲ್ಲಿದ್ದಾರೆ ಎಂದು ನಂಬಲಾಗಿದ್ದು, ಅಲ್ಲಿಂದ ಅವರನ್ನು ಗಡಿಪಾರು ಮಾಡಿಸುವ ಪ್ರಯತ್ನಗಳು ನಡೆಯುತ್ತಿವೆ.

ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಅಡ್ಡಿಯಿಲ್ಲ: ಲಂಡನ್ ಕೋರ್ಟ್ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಅಡ್ಡಿಯಿಲ್ಲ: ಲಂಡನ್ ಕೋರ್ಟ್

ಈಗ ಮುಚ್ಚಿಹೋಗಿರುವ ಕಿಂಗ್‌ ಫಿಶರ್ ಏರ್‌ಲೈನ್ಸ್ ವಿಮಾನ ಸಂಸ್ಥೆಗಾಗಿ 9,000 ಕೋಟಿ ರೂ ಸಾಲ ಪಡೆದಿದ್ದ ವಿಜಯ್ ಮಲ್ಯ, ಅವುಗಳನ್ನು ಬ್ಯಾಂಕ್‌ಗೆ ಮರುಪಾವತಿಸಿರಲಿಲ್ಲ. ಭಾರತದಿಂದ ಪಲಾಯನ ಮಾಡಿದ್ದ ಮಲ್ಯ, 2016ರ ಮಾರ್ಚ್‌ನಿಂದ ಬ್ರಿಟನ್‌ನಲ್ಲಿದ್ದಾರೆ.

English summary
Finance Minister Nirmala Sitharaman in Rajya Sabha said, Vijay Mallya, Nirav Modi, Mehul Choksi all are coming back to India to face the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X