3 ವರ್ಷದ ಹಿಂದೆ, ಮೋದಿ ಗೆಲುವನ್ನು ಪತ್ರಿಕೆಗಳು ಸಾರಿದ್ದು ಹೀಗೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 16: ಸರಿಯಾಗಿ ಮೂರು ವರ್ಷಗಳ ಕೆಳಗೆ ಇದೇ ದಿನ ಲೋಕಸಭೆ ಚುನಾವಣೆಯ ಫಲಿತಾಂಶ ಬಂದಿತ್ತು. ಇದರಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸುವುದರೊಂದಿಗೆ ಕೇಸರಿ ಪಕ್ಷ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು.

ಮರುದಿನ ದೇಶದ ಪ್ರಮುಖ ಪತ್ರಿಕೆಗಳು ನೀಡಿದ ತಲೆಬರಹಗಳು ಒಂದಕ್ಕಿಂತ ಒಂದು ವಿಶೇಷವಾಗಿದ್ದವು. ಅವುಗಳ ಒಂದಷ್ಟು ಸ್ಯಾಂಪಲ್ ಇಲ್ಲಿವೆ.[ನರೇಂದ್ರ ಮೋದಿ ಸರಕಾರಕ್ಕೆ ಮೂರು ವರ್ಷ: ಸಮೀಕ್ಷೆ ಏನು ಹೇಳುತ್ತೆ?]

2014ರ ಮೇ 16ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆದಿತ್ತು. ಇದರಲ್ಲಿ ಯುಪಿಎಯ ಹತ್ತು ವರ್ಷಗಳ ಆಡಳಿತದ ನಂತರ ಜನ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದರು. 2-3 ದಶಕಗಳ ನಂತರ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ಜನ ದಯಪಾಲಿಸಿದ್ದರು.

ಅದಾದ ಮರುದಿನ ತಮ್ಮ ಓದುಗರಿಗೆ ಮತ ಎಣಿಕೆಯಲ್ಲಿ ನಡೆದಿದ್ದೇನು ಎಂಬುದನ್ನು ಅರ್ಥಪಡಿಸಲು ಪತ್ರಿಕೆಗಳು ತೀವ್ರ ಪೈಪೋಟಿ ನಡೆಸಿದ್ದವು.

ಮೋದಿ (MODI)

ಮೋದಿ (MODI)

ಪ್ರತಿಷ್ಠಿತ ಇಂಡಿಯನ್ ಎಕ್ಸ್ ಪ್ರೆಸ್ ತನ್ನ ತಲೆ ಬರಹವನ್ನು ಕೇವಲ ಮೋದಿ ಎಂದಷ್ಟೇ ಇಟ್ಟಿತ್ತು. ಜನರಿಗೆ ಒಂದೇ ಶಬ್ದ ಹಲವು ಸಂದೇಶಗಳನ್ನು ತಲುಪಿಸುವಂತಿತ್ತು. ಆದರೆ ಇಂಗ್ಲೀಷ್ ಭಾಷೆಯಲ್ಲಿ ‘MODI' ಬರೆಯುವಾಗ ‘I' ಜಾಗದಲ್ಲಿ ಮತದಾನ ಮಾಡಿದ ಬೆರಳಿನ ಗುರುತನ್ನು ಬಳಸಿಕೊಂಡಿದ್ದು ವಿಶೇಷವಾಗಿತ್ತು. ಜನ ಮೋದಿಗೆ ಮತ ಹಾಕಿದ್ದಾರೆ ಎಂಬುದನ್ನು ಇದು ಹೇಳುತ್ತಿತ್ತು.

ಪ್ರಧಾನ ಮಂತ್ರಿ ಮೋದಿ

ಪ್ರಧಾನ ಮಂತ್ರಿ ಮೋದಿ

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಪ್ರಸಾರ ಹೊಂದಿರುವ 'ದಿ ಹಿಂದೂ' ಪತ್ರಿಕೆ 'ಪ್ರಧಾನ ಮಂತ್ರಿ ಮೋದಿ' ಎಂದಷ್ಟೇ ಹೆಡ್ಲೈನ್ ಇಟ್ಟಿತ್ತು. ತಾಂತ್ರಿಕವಾಗಿ ಈ ಪದ ಸರಿಯಲ್ಲ; ಕಾರಣ ಅವರಿನ್ನೂ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಆದರೆ ಫಲಿತಾಂಶ ಏನು ಎಂಬುದನ್ನು ಅದು ಜನರಿಗೆ ತಲುಪಿಸಿತ್ತು. ಸಾಮಾನ್ಯವಾಗಿ ಸಾಂಪ್ರದಾಯಿಕ ಹೆಡ್ಲೈನ್ ಗಳನ್ನು ನೀಡುತ್ತಾ ಬಂದ 'ದಿ ಹಿಂದೂ' ಪತ್ರಿಕೆ ಅವತ್ತಿನ ದಿನ ತನ್ನ ಸಂಪ್ರದಾಯ ಮುರಿದು ತಲೆ ಬರಹ ನೀಡಿತ್ತು.[ಚಿದು ಬಗ್ಗೆ ಸುಬ್ರಮಣ್ಯಂ ಸ್ವಾಮಿ, ಮೋದಿಗೆ ಬರೆದ ಪತ್ರದಲ್ಲೇನಿದೆ?]

ಹೂಂಕಾರ್ ಟ್ಯಾಲಿ

ಹೂಂಕಾರ್ ಟ್ಯಾಲಿ

ಉತ್ತರ ಭಾರತದ ಮತ್ತೊಂದು ಪ್ರಮುಖ ಪತ್ರಿಕೆ ಹಿಂದೂಸ್ಥಾನ್ ಟೈಮ್ಸ್ ಅವತ್ತು ಪೂರ್ತಿ ಟ್ಯಾಬ್ಲಾಯ್ಡ್ ಶೈಲಿಗೆ ಬದಲಾಗಿತ್ತು. ಮೋದಿ ಮುಖ ಪಕ್ಕದಲ್ಲಿ ಕೇಸರಿ ಬಣ್ಣದ ಮೇಲೆ ಹೂಂಕಾರ್ ಟ್ಯಾಲಿ ಎಂಬುದಾಗಿ ತಲೆ ಬರಹ ಕೊಟ್ಟಿತ್ತು ಪತ್ರಿಕೆ.

ಇನ್ನು ಒಳಪುಟದಲ್ಲಿ 'ಮೋದಿ ಭೂಕುಸಿತಕ್ಕೆ ಮಣ್ಣಾದ ಕಾಂಗ್ರೆಸ್' ಎಂಬ ಅರ್ಥದಲ್ಲಿ ತಲೆ ಬರಹ ನೀಡಲಾಗಿತ್ತು. ಕಾಂಗ್ರೆಸ್ ಪಾಲಿಗೆ ಫಲಿತಾಂಶ ಏನಾಗಿದೆ ಎಂಬುದನ್ನು ಈ ಹೆಡ್ಲೈನ್ ಹೇಳುತ್ತಿತ್ತು.

ಭಾರತವನ್ನು ಬಲದಾರಿಗೆ ಬದಲಾಯಿಸಿದ ನಮೋ

ಭಾರತವನ್ನು ಬಲದಾರಿಗೆ ಬದಲಾಯಿಸಿದ ನಮೋ

ಉಳಿದೆಲ್ಲಾ ಪತ್ರಿಕೆಗಳಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕೂಡಾ ಅತ್ಯುತ್ತಮ ಹೆಡ್ಲೈನ್ ನೀಡಿತ್ತು. ಬಿಜೆಪಿ ಬಲಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುವುದರಿಂದ ನರೇಂದ್ರ ಮೋದಿ ಗೆಲುವಿನೊಂದಿಗೆ ಭಾರತದ ರಾಜಕೀಯ ಬಲಪಂಥದತ್ತ ಹೊರಳಿದೆ ಎಂಬುದನ್ನು ಪತ್ರಿಕೆಯ ಹೆಡ್ಲೈನ್ ಸೂಚಿಸುತ್ತಿತ್ತು.[ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?]

ಇಂಡಿಯಾ ಮಾಡಿಫೈಡ್

ಇಂಡಿಯಾ ಮಾಡಿಫೈಡ್

ಮುಂಬೈನ ಖ್ಯಾತ ಪತ್ರಿಕೆ 'ಮಿಡ್-ಡೇ' ಇಂಡಿಯಾ ಮಾಡಿಫೈಡ್ ಎಂಬ ತಲೆ ಬರಹದೊಂದಿಗೆ ಮೋದಿ ಗೆಲುವಿನ ಸುದ್ದಿ ಪ್ರಕಟಿಸಿತ್ತು. ಮೋದಿ ಗೆಲುವಿನೊಂದಿಗೆ ಭಾರತದಲ್ಲೂ ಬದಲಾವಣೆ ಬರಲಿದೆ ಎಂಬುದನ್ನು ಹೆಡ್ಲೈನ್ ಸೂಚಿಸುತ್ತಿತ್ತು.

ಬಿಜೆಪಿ ಅಧಿಕಾರಕ್ಕೆ ಬೇಕಾದ ಬಹುಮತ ನೀಡಿದ ಸುನಮೋ

ಬಿಜೆಪಿ ಅಧಿಕಾರಕ್ಕೆ ಬೇಕಾದ ಬಹುಮತ ನೀಡಿದ ಸುನಮೋ

ಬಿಜೆಪಿಗೆ ಅಧಿಕಾರ ನಡೆಸಲು ಬೇಕಾದಷ್ಟು ಸ್ಥಾನಗಳನ್ನು ಮೋದಿ ಸುನಾಮಿ ಗೆದ್ದು ಕೊಟ್ಟಿದೆ ಎಂಬ ಅರ್ಥದಲ್ಲಿ 'ಟ್ರಿಬ್ಯೂನ್' ಹೆಡ್ಲೈನ್ ನೀಡಿತ್ತು. ಸುನಾಮಿ ಎಂಬ ಶಬ್ದವನ್ನೇ ಸ್ವಲ್ಪ ಬದಲಾಯಿಸಿ ಸು'ನಮೋ' ಎಂದು ಅರ್ಥವತ್ತಾದ ತಲೆ ಬರವನ್ನು ಅದು ನೀಡಿತ್ತು.

 ಬಿಜೆಪಿ ಬಿರುಗಾಳಿಗೆ ತರಗೆಲೆಯಾದ ಗಾಂಧಿ ಕುಟುಂಬ

ಬಿಜೆಪಿ ಬಿರುಗಾಳಿಗೆ ತರಗೆಲೆಯಾದ ಗಾಂಧಿ ಕುಟುಂಬ

'ಬಿಜೆಪಿ ಆಂಧಿ ಫ್ಲಾಟನ್ಸ್ ಕ್ಲಾನ್ ಗಾಂಧಿ' ಎಂಬ ತಲೆ ಬರಹವನ್ನು ದೇಶದ ನಂಬರ್ ವನ್ ಇಂಗ್ಲೀಷ್ ಪತ್ರಿಕೆ 'ದಿ ಟೈಮ್ಸ್ ಆಫ್ ಇಂಡಿಯಾ'ನೀಡಿತ್ತು. ಜತೆಗೆ ಭಾರತ ಮೋದಿತ್ವದಲ್ಲಿ ನಂಬಿಕೆ ಇರಿಸಿದೆ ಎನ್ನು ಅರ್ಥ ಬರುವ ಇನ್ನೊಂದು ಹೆಡ್ಲೈನನ್ನೂ ಇದರ ಜತೆಗೆ ನೀಡಿತ್ತು.

ಮೋದಿ ಸರ್ಕಾರ್

ಮೋದಿ ಸರ್ಕಾರ್

ಸ್ಟೇಟ್ಸ್ ಮನ್ ಪತ್ರಿಕೆ ಸರಳ ಹೆಡ್ಲೈನ್ ನೀಡಿತ್ತು. 'ಆಪ್ ಕಿ ಬಾರ್ ಮೋದಿ ಸರ್ಕಾರ್' ಎಂಬ ಬಿಜೆಪಿ ಘೋಷವಾಕ್ಯದ ಅರ್ಧ ಸಾಲು ಕತ್ತರಿಸಿ 'ಮೋದಿ ಸರ್ಕಾರ್' ಎಂಬುದಾಗಿ ತಲೆ ಬರಹ ನೀಡಿತ್ತು.

ಬಿಜೆಪಿ ಬಹುಮತಕ್ಕೆ ಮೋದಿ ಶಕ್ತಿ

ಬಿಜೆಪಿ ಬಹುಮತಕ್ಕೆ ಮೋದಿ ಶಕ್ತಿ

ಬಿಜೆಪಿಗೆ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳು ಬಂದಿವೆ. ಇದನ್ನು ಗೆದ್ದು ಕೊಟ್ಟಿದ್ದು ಮೋದಿ ಎಂಬುದುನ್ನು ಡೆಕ್ಕನ್ ಹೆರಾಲ್ಡ್ ನ ಸರಳ ಹೆಡ್ಲೈನ್ ಸಾರಿ ಹೇಳುತ್ತಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the third anniversary of the day election results which brought the BJP to power were declared, here is a look at how major newspapers covered the event. With the counting of votes for the 2014 general assembly elections done on May 16, the next day saw the newspapers play their part to convey to their readers, the impact of what had just taken place.
Please Wait while comments are loading...