ನರೇಂದ್ರ ಮೋದಿ ಸರಕಾರಕ್ಕೆ ಮೂರು ವರ್ಷ: ಸಮೀಕ್ಷೆ ಏನು ಹೇಳುತ್ತೆ?

Posted By:
Subscribe to Oneindia Kannada

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ. ಈ ಮೂರು ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ಸಾಧನೆಯ ಬಗ್ಗೆ ಖಾಸಗಿ ಆನ್ಲೈನ್ ಸಂಸ್ಥೆಯೊಂದು ಸರ್ವೇ ನಡೆಸಿದೆ.

ಸರ್ವೇಯಲ್ಲಿ ಭಾಗವಹಿಸಿದ್ದ ಸರಾಸರಿ ಐವರಲ್ಲಿ ಮೂವರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯೇ ಅತ್ಯುತ್ತಮ, ಆದರೂ ಮೋದಿ ಮಾಡಬೇಕಾಗಿರುವುದು ಇನ್ನೂ ಬೆಟ್ಟದಷ್ಟು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಲೋಕಲ್ ಸರ್ಕಲ್ಸ್ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಮೋದಿ ಸರಕಾರದ ಒಟ್ಟಾರೆ ಸಾಧನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಶೇ. 17 ಅತ್ಯುತ್ತಮ, ಶೇ. 44 ಉತ್ತಮ ಮತ್ತು ಶೇ. 39 ಕಳಪೆ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ.

ಇನ್ನೂರು ವಿವಿಧ ನಗರಗಳ ಸುಮಾರು ನಲವತ್ತು ಸಾವಿರಕ್ಕೂ ಅಧಿಕ ಮಂದಿ ಈ ಸರ್ವೇಯಲ್ಲಿ ಭಾಗವಹಿಸಿದ್ದರು. ಉದ್ಯೋಗ ಸೃಷ್ಟಿ, ಹಣದುಬ್ಬರ, ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡದಿದ್ದರೂ, ಮೋದಿ ಬಗ್ಗೆ ಸಾರ್ವಜನಿಕರಿಗಿರುವ ಒಳ್ಳೆ ಅಭಿಪ್ರಾಯಕ್ಕೆ ಅಷ್ಟೇನೂ ಧಕ್ಕೆಯಾಗಿಲ್ಲ ಎನ್ನುವುದು ಸರ್ವೇಯಲ್ಲಿನ ಗಮನಿಸಬೇಕಾದ ಅಂಶ.

ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ನೇರ ನಗದು ವರ್ಗಾವಣೆಗೆ ಶೇ. 47 ಮತ್ತು ಮೇಕ್ ಇನ್ ಇಂಡಿಯಾದ ಪರವಾಗಿ ಶೇ. 8ರಷ್ಟು ಅಭಿಪ್ರಾಯ ಸರ್ವೇಯಲ್ಲಿ ವ್ಯಕ್ತವಾಗಿದೆ. ಸಮೀಕ್ಷೆಯ ಕೆಲವೊಂದು ಹೈಲೆಟ್ಸ್:

ಭ್ರಷ್ಟಾಚಾರ ಮತ್ತು ಅಪನಗದೀಕರಣ

ಭ್ರಷ್ಟಾಚಾರ ಮತ್ತು ಅಪನಗದೀಕರಣ

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಕಡಿಮೆ ಆಗಿದೆಯೇ?
ಹೌದು - ಶೇ. 47
ಇಲ್ಲ - ಶೇ.43

ಭ್ರಷ್ಟಾಚಾರ ಕಡಿಮೆ ಆಗಿದ್ದಲ್ಲಿ ಅದು ಅಪನಗದೀಕರಣದಿಂದನೇ?

ಭ್ರಷ್ಟಾಚಾರ ಕಡಿಮೆ ಆಗಿದ್ದಲ್ಲಿ ಅದು ಅಪನಗದೀಕರಣದಿಂದನೇ?

ಹೌದು - ಶೇ.37
ಅಲ್ಲ - ಶೇ. 47

ಪಾಕ್ ಜೊತೆ ಸಂಬಂಧ

ಪಾಕ್ ಜೊತೆ ಸಂಬಂಧ

ಪಾಕಿಸ್ತಾನದ ಜೊತೆ ಸರಕಾರ ಸರಿಯಾಗಿ ನಡೆದುಕೊಳ್ಳುತ್ತಿದೆಯೇ?
ಹೌದು - ಶೇ. 64
ಇಲ್ಲ - ಶೇ.30

ಉಗ್ರ ಚಟುವಟಿಕೆ ಕಮ್ಮಿ ಆಗಿದೆಯೇ?

ಉಗ್ರ ಚಟುವಟಿಕೆ ಕಮ್ಮಿ ಆಗಿದೆಯೇ?

ಹೌದು - ಶೇ. 51
ಇಲ್ಲ - ಶೇ.42

ಬೆಲೆ ಏರಿಕೆ

ಬೆಲೆ ಏರಿಕೆ

ಬೆಲೆ ಏರಿಕೆ ಮತ್ತು ಜೀವನವೆಚ್ಚ ಕಮ್ಮಿಯಾಗಿದೆಯೇ?
ಹೌದು - ಶೇ. 28
ಇಲ್ಲ - ಶೇ.66

ಅಪನಗದೀಕರಣ

ಅಪನಗದೀಕರಣ

ಕಪ್ಪುಹಣ ಮಟ್ಟಹಾಕಲು ಅಪನಗದೀಕರಣ ಸರಿಯಾದ ಕ್ರಮವಾಗಿತ್ತೇ?
ಹೌದು - ಶೇ.51
ಅಲ್ಲ - ಶೇ. 37

ನಿರುದ್ಯೋಗದ ಸಮಸ್ಯೆ ಕಮ್ಮಿಯಾಗಿದೆಯೇ?

ನಿರುದ್ಯೋಗದ ಸಮಸ್ಯೆ ಕಮ್ಮಿಯಾಗಿದೆಯೇ?

ಹೌದು - ಶೇ. 21
ಇಲ್ಲ - ಶೇ.63

ಸಂಸದರು ನಿಮ್ಮನಿಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸುತ್ತಿದ್ದಾರಾ?

ಸಂಸದರು ನಿಮ್ಮನಿಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸುತ್ತಿದ್ದಾರಾ?

ಹೌದು - ಶೇ. 14
ಇಲ್ಲ - ಶೇ.69

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three out of five Indians are satisfied with PM Narendra Modi’s performance though a majority feels his government is sliding on checking prices, generating jobs and preventing crime, an online poll has found.
Please Wait while comments are loading...