ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 16 : ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಬಗ್ಗೆ ಎಲ್ಲೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇಂಥವರು ರಾಷ್ಟ್ರಪತಿಯಾದ್ರೆ ನಮ್ಮ ಕೈ ಮೇಲಾಗುತ್ತದೆ ಎಂದು ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಶ್ರೀಸಾಮಾನ್ಯರು ಇಂಥವರು ದೇಶದ ಅತ್ಯುನ್ನತ ಅಧಿಕಾರ ಗ್ರಹಣ ಮಾಡಿದರೆ ದೇಶಕ್ಕೆ ಒಳ್ಳೆಯದಾಗಬಹುದು ಎಂದು ವಿಚಾರ ವಿನಿಮಯ ನಡೆಸಿದ್ದಾರೆ.

ಸದ್ಯದ ಚಿತ್ರಣ ನೋಡಿದರೆ, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭರ್ಜರಿ ಜಯಗಳಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎಗೆ ತಮಗಿಷ್ಟಬಂದ ರಾಷ್ಟ್ರಪತಿಯನ್ನು ಆರಿಸಲು ಅಡೆತಡೆಗಳು ಅಷ್ಟೊಂದು ಗೋಚರಿಸುತ್ತಿಲ್ಲ. ರಾಷ್ಟ್ರಪತಿಯನ್ನು ಆಯ್ಕೆಮಾಡಲು ಅವರಿಗೆ ಸಂಖ್ಯೆಗಳನ್ನು ಕ್ರೋಢೀಕರಿಸುವುದೂ ಅಷ್ಟು ಕಷ್ಟವಲ್ಲ.[ನಂದನ್ ನಿಲೇಕಣಿ ಭಾರತದ ರಾಷ್ಟ್ರಪತಿ ಏಕಾಗಬಾರದು?]

ಆದರೆ, ಅವರಿಗೆ ಈಗಿರುವ ಸವಾಲು, ಯಾರನ್ನು ರಾಷ್ಟ್ರಪತಿಯನ್ನಾಗಿ ಆರಿಸುವುದು? ಇದು ಸವಾಲಿನದು ಏಕೆಂದರೆ, ಈಗಾಗಲೆ ಹಲವಾರು ಪ್ರಭಾವಿ ವ್ಯಕ್ತಿಗಳ ಹೆಸರುಗಳು ಚಲಾವಣೆಯಲ್ಲಿ ಬರಲು ಆರಂಭಿಸಿವೆ. ಇವರಲ್ಲಿ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಅವರ ಹೆಸರು ಎಲ್ಲರಿಗಿಂತ ಮುಂದಿದೆ. ಅವರು ಆಯ್ಕೆಯಾದರೆ ದೇಶದ ಗುಡ್ಡಗಾಡು ಜನಾಂಗಕ್ಕೆ ಸೇರಿದ ಮೊಟ್ಟಮೊದಲ ರಾಷ್ಟ್ರಪತಿಯಾಗಲಿದ್ದಾರೆ.

ಇವರ ಜೊತೆಗೆ ಎಲ್ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ, ಅಮಿತಾಬ್ ಬಚ್ಚನ್, ನಜ್ಮಾ ಹೆಫ್ತುಲ್ಲಾ, ಸುಷ್ಮಾ ಸ್ವರಾಜ್, ಮೋಹನ್ ಭಾಗವತ್ ಅವರ ಹೆಸರುಗಳು ಕೂಡ ರೌಂಡ್ ಹೊಡೆಯುತ್ತಿವೆ. ಆದರೆ, ಇವರನ್ನು ನರೇಂದ್ರ ಮೋದಿಯವರು ಯಾಕೆ ಪರಿಗಣಿಸಲಾರರು ಎಂಬುದಕ್ಕೆ ಇಲ್ಲಿ ವಿವರಣೆಗಳಿವೆ, ಓದಿರಿ.

ಮೋಹನ್ ಭಾಗವತ್

ಮೋಹನ್ ಭಾಗವತ್

ರಾಷ್ಟ್ರಪತಿ ಹುದ್ದೆ ಆರೆಸ್ಸೆಸ್ ಮುಖಂಡರಾಗಿರುವ ಮೋಹನ್ ಭಾಗವತ್ ಅವರಿಗೇ ಸಿಗಬೇಕು ಎಂದು ಸಾಕಷ್ಟು ಬೆಂಬಲಿಗರು ಶಿಫಾರಸು ಮಾಡುತ್ತಿದ್ದಾರೆ. ಈ ನಡುವೆ, ನಾನು ರಾಷ್ಟ್ರಪತಿ ಪದವಿಯ ಸ್ಪರ್ಧೆಯಲ್ಲಿ ಇಲ್ಲವೇ ಇಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾರೆ. ಇವರನ್ನು ಮೋದಿ ಕೂಡ ಪರಿಗಣಿಸಲಾರರು, ಏಕೆಂದರೆ ರಾಷ್ಟ್ರಪತಿ ಹುದ್ದೆಯಲ್ಲಿರುವವರು ತಮ್ಮ ಮಾತು ಕೇಳಬೇಕು ಎಂಬುದು ಮೋದಿಯವರ ಇರಾದೆ. ಅಲ್ಲದೆ, ಅನಗತ್ಯವಾದ ವಿವಾದ ಸೃಷ್ಟಿಸುವ ಅಗತ್ಯವೂ ಅವರಿಗಿಲ್ಲ.[ಸಂಭಾವ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದಷ್ಟು]

ನಜ್ಮಾ ಹೆಫ್ತುಲ್ಲಾ

ನಜ್ಮಾ ಹೆಫ್ತುಲ್ಲಾ

ರೈಸಿನಾ ಹಿಲ್ಸ್ ಪ್ರವೇಶಿಸಲು ನಜ್ಮಾ ಹೆಫ್ತುಲ್ಲಾ ಕೂಡ ತಯಾರಾಗಿದ್ದಾರೆ. ಮಣಿಪುರದ ರಾಜ್ಯಪಾಲೆಯಾಗಿರುವ ಅವರೇ ಕೆಲದಿನಗಳ ಹಿಂದೆ ನಾನು ರಾಷ್ಟ್ರಾಧ್ಯಕ್ಷಳಾಗಬಯಸುತ್ತೇನೆ ಎಂದು 2016ರಲ್ಲಿಯೇ ಅಮಿತ್ ಶಾ ಅವರ ಬಳಿ ಹೇಳಿದ್ದರು. ಅವರು ಬಿಜೆಪಿ ಸೇರಿದ್ದರೂ ಮೂಲತಃ ಕಾಂಗ್ರೆಸ್ಸಿನವರಾಗಿರುವುದರಿಂದ ಅವರನ್ನು ಪರಿಗಣಿಸುವುದು ದೂರದ ಮಾತು.[ಸುದ್ದಿಸ್ವಾರಸ್ಯ : ರಜನಿ ಭಾರತದ ಮುಂದಿನ ರಾಷ್ಟ್ರಪತಿ?]

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್

ಹಿಂದಿ ಚಿತ್ರರಂಗದ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರು ಸ್ಪರ್ಧೆಗಿಳಿದರೆ ಅವರ ವಿರುದ್ಧ ನಿಲ್ಲುವವರು ಕಡಿಮೆ. ಜುಲೈನಲ್ಲಿ ಪ್ರಣಬ್ ಅವರು ನಿವೃತ್ತರಾದನಂತರ ಅಮಿತಾಬ್ ಅವರೇ ರಾಷ್ಟ್ರಪತಿಯಾಗಲಿದ್ದಾರೆ ಎಂಬ ದಟ್ಟ ಗಾಳಿಸುದ್ದಿ ಕೂಡ ಹಬ್ಬಿತ್ತು. ಮೋದಿಯ ಖಡಕ್ ಬೆಂಬಲಿಗರಾಗಿರುವ ಅವರು ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ಕೂಡ. ಆದರೆ, ಅವರ ಹೆಸರು ಪನಾಮಾ ಪೇಪರ್ಸ್ ಹಗರಣದಲ್ಲಿ ಕೇಳಿಬಂದಿರುವುದರಿಂದ ಅವರು ಹೆಚ್ಚೂಕಡಿಮೆ ಸ್ಪರ್ಧೆಯಿಂದ ಹಿಂದುಳಿದಂತಾಗಿದೆ.

ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿಯವರು ಕಾಂಗ್ರೆಸ್ಸಿನವರಾದರೂ ಅವರೊಂದಿಗೆ ಮೋದಿಯವರಿಗೆ ಯಾವುದೇ ವೈಷಮ್ಯವೂ ಅಲ್ಲ, ತಕರಾರೂ ಇಲ್ಲ. ಅಚ್ಚರಿಯ ಸಂಗತಿಯೆಂದರೆ, ಮೋದಿ ಪ್ರಧಾನಿಯಾದ ನಂತರ ಅವರಿಬ್ಬರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ. ಅವರನ್ನೇನಾದರೂ ರಾಷ್ಟ್ರಪತಿಯನ್ನಾಗಿ ಮೋದಿ ಆಯ್ಕೆ ಮಾಡಿದರೆ, ಇದು ತಮಗೇ ಸಿಕ್ಕ ಜಯ ಎಂದು ಕಾಂಗ್ರೆಸ್ಸಿಗರು ಸಂಭ್ರಮಿಸಿದರೂ ಅಚ್ಚರಿಯಿಲ್ಲ. ಬಿಜೆಪಿ ಹುರಿಯಾಳುಗಳೇ ಸಾಕಷ್ಟಿರುವಾಗ ಮೋದಿ ಕಾಂಗ್ರೆಸ್ಸಿನವರನ್ನೇಕೆ ಆಯ್ಕೆ ಮಾಡುತ್ತಾರೆ?

ಎಲ್ಕೆ ಅಡ್ವಾಣಿ

ಎಲ್ಕೆ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿಯವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಗುರುದಕ್ಷಿಣೆ ಸಲ್ಲಿಸಲಿದ್ದಾರೆ ಎಂದು ಗಾಳಿಸುದ್ದಿ ಹಬ್ಬಿತ್ತು. ಆದರೆ, ಅವರಿಬ್ಬರ ನಡುವಣ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಬ್ಬರ ನಡುವಿನ ಬಾಂಧವ್ಯ ಅಷ್ಟು ಗಟ್ಟಿಯಾಗಿಲ್ಲದಿರುವುದು ಕಂಡುಬರುತ್ತದೆ. ಅಲ್ಲದೆ, ಬಾಬ್ರಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿಯವರು ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್ ಆಜ್ಞೆ ಮಾಡಿದ್ದರಿಂದ ಅವರನ್ನು ರಾಷ್ಟ್ರಪತಿ ಸ್ಪರ್ಧೆಗಿಳಿಸುವುದು ಸರಿಯೆ ಎಂಬ ಪ್ರಶ್ನೆ ಎದುರಾಗಿದೆ.

ಮುರಳಿ ಮನೋಹರ ಜೋಶಿ

ಮುರಳಿ ಮನೋಹರ ಜೋಶಿ

ಹಿರಿಯ ನಾಯಕರಾಗಿರುವ ಮುರಳಿ ಮನೋಹರ ಜೋಶಿಯವರು ಕೂಡ ಪ್ರಬಲ ಸ್ಪರ್ಧೆ. ಆದರೆ, 2014ಕ್ಕೂ ಮೊದಲು ಮೋದಿಯವರು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಅವರು ಖಡಾಖಂಡಿತವಾಗಿ ವಿರೋಧಿಸಿದ್ದರು. ಜೋಶಿಗೆ ಆರೆಸ್ಸೆಸ್ ಬೆಂಬಲ ಇದೆಯಾದರೂ ಗೋವಾದಲ್ಲಿ ಜೋಶಿ ಅಂದು ಹೇಳಿದ್ದನ್ನು ಮೋದಿ ಅಷ್ಟು ಬೇಗನೆ ಮರೆಯುವರೆ? ಇದಕ್ಕಿಂತ ಹೆಚ್ಚಾಗಿ, ಬಾಬ್ರಿ ಹಗರಣ ಕೂಡ ಜೋಶಿ ಕುತ್ತಿಗೆಗೆ ಸುತ್ತಿಕೊಂಡಿದೆ. ಹೀಗಾಗಿ ಮೋದಿ ಕೆಲಸ ಸುಲಭವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Who is the Next President of India? The race for the post of next President of India is hotting up. Both the ruling party and the opposition are desperate to ensure that their candidate occupies Rashtrapati Bhavan. But, Why Modi will never chose these leaders? Who are those leaders?
Please Wait while comments are loading...