Vastu Alert: ಹಳೆಯ ಬಾವಿ ಮೇಲೆ ಮನೆ ಕಟ್ಟಿದ್ರೆ ಏನಾಗುತ್ತದೆ? ಇಲ್ಲಿದೆ ವಾಸ್ತು ಸತ್ಯಗಳು
ಮನೆ ಕಟ್ಟುವ ಮೊದಲು ಭೂಮಿಯ ಸ್ಥಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ. ಆದರೆ ಕೆಲವೊಮ್ಮೆ ಹಳೆಯ ಬಾವಿ ಅಥವಾ ಹೊಂಡಗಳನ್ನು ಸರಿಯಾಗಿ ತುಂಬಿಸದೇ ಅದರ ಮೇಲೆಯೇ ಮನೆಗಳನ್ನು ನಿರ್ಮಿಸಿರುವ ಘಟನೆಗಳು ನಂತರ ಬೆಳಕಿಗೆ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೇಲೆ ಆಗುವ ಪರಿಣಾಮಗಳೇನು? ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಬಾವಿ ಇರುವ ಸ್ಥಳ ಮುಖ್ಯ
ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಅಥವಾ ಮನೆಯ ಅವರಣದಲ್ಲಿ ಬಾವಿ ಇರುವುದು ತಪ್ಪಲ್ಲ ಆದರೆ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಇದೆ ಎಂಬುದು ಅತ್ಯಂತ ಮುಖ್ಯವಾಗಿದೆ.
ಈಶಾನ್ಯ ದಿಕ್ಕಿನಲ್ಲಿ ಬಾವಿ ಇದ್ದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ಅದು ಮನೆಯ ಅಡಿಯಲ್ಲಿ ಇರದೆ ಪ್ರತ್ಯೇಕವಾಗಿ ಇದ್ದರೆ ಉತ್ತಮ ಫಲ ನೀಡುತ್ತದೆ ಎಂದು ತಜ್ಞರ ಅಭಿಪ್ರಾಯ.

ಇನ್ನೊಂದೆಡೆ ನೈಋತ್ಯ (ದಕ್ಷಿಣ-ಪಶ್ಚಿಮ) ಅಥವಾ ಆಗ್ನೇಯ (ದಕ್ಷಿಣ-ಪೂರ್ವ) ದಿಕ್ಕಿನಲ್ಲಿ ಬಾವಿ ಇದ್ದರೆ ಅದು ಅಶುಭ ಎಂದು ಮತ್ತು ಇದರಿಂದ ಕೆಟ್ಟ ಪರಿಣಾಮಗಳು ಉಂಟುಮಾಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ವಿಶೇಷವಾಗಿ ನೈಋತ್ಯದಲ್ಲಿ ಹಳೆಯ ಬಾವಿ ಇದ್ದು ಅದನ್ನು ತುಂಬಿಸಿ ಮನೆ ಕಟ್ಟಿಸಿದರೆ ಇದರಿಂದ ಆರ್ಥಿಕ ಸಮಸ್ಯೆಗಳು ಹಾಗೂ ಆರೋಗ್ಯದ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.
ಹಳೆಯ ಬಾವಿಯನ್ನು ಹೇಗೆ ತುಂಬಿಸಬೇಕು?
ಹಳೆಯ ಬಾವಿಗಳನ್ನು ಸರಿಯಾಗಿ ಮುಚ್ಚುವುದು ಅತ್ಯಂತ ಮುಖ್ಯವಾಗಿದೆ, ಕೇವಲ ಮಣ್ಣಿನಿಂದ ಮುಚ್ಚುವುದು ವಾಸ್ತು ಪ್ರಕಾರ ಸರಿಯಾದ ವಿಧಾನವಲ್ಲ.
ಸರಿಯಾದ ವಿಧಾನ
ಮೊದಲು ಬಾವಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ತೆಗೆಯಬೇಕು.
ಒಳಗಿರುವ ಕಸ ಮತ್ತು ಮಣ್ಣನ್ನು ತೆಗೆದು ಸ್ವಚ್ಚಗೊಳಿಸಬೇಕು.
ನಂತರ ಹಂತ ಹಂತವಾಗಿ ಕಲ್ಲು, ಮರಳು ಮತ್ತು ಮಣ್ಣಿನಿಂದ ತುಂಬಬೇಕು
ಕೊನೆಯಲ್ಲಿ ಶಾಂತಿ ಪೂಜೆ ಮತ್ತು ವಾಸ್ತು ಶಾಂತಿಯನ್ನು ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮನೆಯ ಕೆಳಗೆ ಬಾವಿ ಇದೆ ಎಂದು ಸಂದೇಹ ಬಂದರೆ
ನೀವು ವಾಸಿಸುತ್ತಿರುವ ಮನೆಯ ಕೆಳಗೆ ಬಾವಿ ಅಥವಾ ಹೊಂಡ ಇದೆ ಎಂದು ಅನುಮಾನ ಬಂದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ. ನೈಋತ್ಯ ಭಾಗದಲ್ಲಿ ಇದ್ದರೆ ಆ ಭಾಗದಲ್ಲಿ ಭಾರವಾದ ವಸ್ತುಗಳನ್ನು ಇಡುವುದು ಉತ್ತಮ. ತಾಮ್ರದ ತಂತಿ (Copper wire) ಹಾಗೂ ವಾಸ್ತು ಶಾಸ್ತ್ರದ ಪಿರಮಿಡ್‌ಗಳನ್ನು ನೆಲದಲ್ಲಿ ಹೂಳುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಮನೆ ಖರೀದಿಸುವ ಮೊದಲು ಗಮನಿಸಬೇಕಾದ ವಿಷಯಗಳು
ಭೂಮಿ ಅಥವಾ ಮನೆಯನ್ನು ಖರೀದಿಸುವ ಮೊದಲು ಕೆಳಗಿನ ವಿಚಾರಗಳನ್ನು ಪರಿಶೀಲಿಸುವುದು ಪ್ರಮುಖ ವಿಷಯವಾಗಿದೆ. ಹಿಂದೆ ಆ ಸ್ಥಳದಲ್ಲಿ ಬಾವಿ ಅಥವಾ ಹೊಂಡ ಇತ್ತ ಅಥವಾ ಇಲ್ಲವೆಂದು ಪರಿಶೀಲಿಸಬೇಕು.
ಬಾವಿ ಇದ್ದರೆ ಅದನ್ನು ಹೇಗೆ ಮುಚ್ಚಲಾಗಿದೆ?
ಸ್ಥಳೀಯರಿಂದ ಅಥವಾ ಹಳೆಯ ದಾಖಲೆಗಳಿಂದ ಮಾಹಿತಿ ಪಡೆಯುವುದು ಉತ್ತಮ.
ತಜ್ಙರ ಸಲಹೆ ಇದಕ್ಕೆ ಅಗತ್ಯ
ನೀವು ವಾಸಿಸುವ ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದರೆ ಉದಾಹರಣೆಗೆ
ಆರ್ಥಿಕ ಸಮಸ್ಯೆಗಳು
ಆರೋಗ್ಯದ ಮೇಲೆ ಆಗುವ ಪರಿಣಾಮ
ಅನಗತ್ಯ ಭಯ ಉಂಟಾಗುವುದು
ಮನೆಯ ಸಮೃದ್ದಿ ಕುಂಟಿತ ಆಗುತ್ತದೆ.
ಇಂತಹ ಸಂದರ್ಭಗಳಲ್ಲಿ ನಾವು ವಾಸ್ತು ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಭೂಮಿಯೊಳಗಿನ ದೋಷಗಳನ್ನು ಗುರುತಿಸಿ ಅದಕ್ಕೆ ಸರಿಯಾದ ಪರಿಹಾರಗಳನ್ನು ಪಡೆಯಬಹುದು.












Click it and Unblock the Notifications