ಬದಲಾದ ರಾಜಕೀಯದಾಟ: ರಾಹುಲ್ ಗಾಂಧಿ ಹುಟ್ಟುಹಬ್ಬಕ್ಕೆ ವಿಜಯ್, ಸ್ಟಾಲಿನ್‌ ವಿಭಿನ್ನ ವಿಶ್, ಮೋದಿಯಿಂದಲೂ ಶುಭ ಹಾರೈಕೆ

ಚೆನ್ನೈ: ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಮಾತಿಗೆ ತಮಿಳುನಾಡಿನ ಇತ್ತೀಚಿನ ರಾಜಕೀಯ ವಿದ್ಯಮಾನಗಳು ಅತ್ಯುತ್ತಮ ಸಾಕ್ಷಿಯಾಗಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ (ಜೂನ್ 19) ನಿಮಿತ್ತ ತಮಿಳುನಾಡಿನ ಪ್ರಮುಖ ನಾಯಕರು ಹಂಚಿಕೊಂಡಿರುವ ಶುಭಾಶಯ ಸಂದೇಶಗಳು, ಅಲ್ಲಿನ ಬದಲಾದ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದೆ.

ಕಳೆದ ವರ್ಷ ರಾಹುಲ್ ಗಾಂಧಿಯವರನ್ನು "ಆದರ್ಶದ ಸಹೋದರ" ಎಂದು ಕರೆದಿದ್ದ ಡಿಎಂಕೆ (DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಈ ಬಾರಿ ಕೇವಲ ಔಪಚಾರಿಕ ಶುಭ ಹಾರೈಸಿದ್ದರೆ, ಹಾಲಿ ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ರಾಹುಲ್ ಅವರನ್ನು "ನನ್ನ ಪ್ರೀತಿಯ ಸಹೋದರ" ಎಂದು ಸಂಬೋಧಿಸಿ ಗಮನ ಸೆಳೆದಿದ್ದಾರೆ.

Rahul Gandhi Birthday

2025 vs 2026: ಸ್ಟಾಲಿನ್ ಸಂದೇಶದಲ್ಲಾದ ಬದಲಾವಣೆಗಳೇನು?

ಕಳೆದ ಒಂದು ವರ್ಷದಲ್ಲಿ ತಮಿಳುನಾಡು ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಸಂಬಂಧ ಎಷ್ಟು ಹಳಸಿದೆ ಎಂಬುದಕ್ಕೆ ಸ್ಟಾಲಿನ್ ಅವರ ಟ್ವೀಟ್ ಸಾಕ್ಷಿಯಾಗಿದೆ. ಕಳೆದ ವರ್ಷ ಅಧಿಕಾರದಲ್ಲಿದ್ದಾಗ ಎಂಕೆ ಸ್ಟಾಲಿನ್‌ ಅವರು, "ನನ್ನ ಆದರ್ಶದ ಸಹೋದರ ರಾಹುಲ್ ಗಾಂಧಿಗೆ ಜನ್ಮದಿನದ ಶುಭಾಶಯಗಳು. ನಮ್ಮದು ರಕ್ತದ ಸಂಬಂಧವಲ್ಲ, ಬದಲಿಗೆ ಆಲೋಚನೆ, ದೂರದೃಷ್ಟಿ ಮತ್ತು ಉದ್ದೇಶಗಳ ಮೂಲಕ ಬೆಸೆದ ಸಂಬಂಧ. ಉಜ್ವಲ ಭಾರತದ ನಿರ್ಮಾಣದತ್ತ ನಮ್ಮ ನಡಿಗೆ ಮುಂದುವರಿಯಲಿದೆ, ಗೆಲುವು ನಮ್ಮದೇ" ಎಂದು ಭಾವುಕರಾಗಿ ಬರೆದುಕೊಂಡಿದ್ದರು. ಈಗ ಮಾಜಿ ಸಿಎಂ ಆಗಿರುವ ಸ್ಟಾಲಿನ್‌, "ಲೋಕಸಭೆಯ ಗೌರವಾನ್ವಿತ ವಿರೋಧ ಪಕ್ಷದ ನಾಯಕ ತಿರು ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ" ಎಂದು ಅತ್ಯಂತ ಔಪಚಾರಿಕವಾಗಿ, ಕೇವಲ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಹುಟ್ಟುಹಬ್ಬದ ಸಂದೇಶ ಪೋಸ್ಟ್ ಮಾಡಿದ್ದಾರೆ.

ಮೈತ್ರಿ ಮುರಿಯಲು ಕಾರಣವೇನು?

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಆಘಾತಕಾರಿ ಸೋಲನ್ನು ಅನುಭವಿಸಿತು. ಇದರ ಬೆನ್ನಲ್ಲೇ, ಮೇ 6ರಂದು ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆಗಿನ ದಶಕಗಳ ಮೈತ್ರಿಯನ್ನು ಅಧಿಕೃತವಾಗಿ ಕಡಿದುಕೊಂಡಿತು. ಅಷ್ಟೇ ಅಲ್ಲದೆ, ಡಿಎಂಕೆ ಮುಖವಾಣಿ 'ಮುರಸೊಲಿ' ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಲೇಖನ ಪ್ರಕಟಿಸಿತ್ತು. ಇದು ಉಭಯ ಪಕ್ಷಗಳ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಹುಲ್ ಕೈ ಹಿಡಿದ 'ದಳಪತಿ' ವಿಜಯ್

ಡಿಎಂಕೆ ಮೈತ್ರಿ ಕಳೆದುಕೊಂಡ ಬೆನ್ನಲ್ಲೇ ಕಾಂಗ್ರೆಸ್, ತಮಿಳುನಾಡಿನಲ್ಲಿ ಹೊಸದಾಗಿ ಉದಯಿಸಿ ಸದ್ದು ಮಾಡುತ್ತಿರುವ ನಟ ವಿಜಯ್ ಅವರ 'ಟಿವಿಕೆ' (TVK) ಪಕ್ಷದೊಂದಿಗೆ ಕೈಜೋಡಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟಿವಿಕೆ, ಬಹುಮತದ ಅಂಚಿನಲ್ಲಿ ಬಂದು ನಿಂತಿತ್ತು. ಈ ವೇಳೆ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ತಮಿಳುನಾಡಿನಲ್ಲಿ ಸರ್ಕಾರ ರಚಿಸಿ, ಮುಖ್ಯಮಂತ್ರಿಯಾಗಿದ್ದಾರೆ.

Real Estate: ಬಿಡದಿ 7481 ಎಕ್ರೆ ಭೂಸ್ವಾಧೀನಕ್ಕೆ ವಿರೋಧ; ರಾಹುಲ್ ಗಾಂಧಿಗೆ ಬಿಜೆಪಿ ವಿಜಯೇಂದ್ರ ಪತ್ರ
Real Estate: ಬಿಡದಿ 7481 ಎಕ್ರೆ ಭೂಸ್ವಾಧೀನಕ್ಕೆ ವಿರೋಧ; ರಾಹುಲ್ ಗಾಂಧಿಗೆ ಬಿಜೆಪಿ ವಿಜಯೇಂದ್ರ ಪತ್ರ

ಹೊಸ ಮಿತ್ರ ಪಕ್ಷದ ನಾಯಕನಿಗೆ ಶುಭ ಕೋರಿದ ಮುಖ್ಯಮಂತ್ರಿ ವಿಜಯ್ ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ. "ನನ್ನ ಪ್ರೀತಿಯ ಸಹೋದರ, ಲೋಕಸಭೆಯ ಗೌರವಾನ್ವಿತ ವಿರೋಧ ಪಕ್ಷದ ನಾಯಕ ತಿರು ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಮ್ಮ ದೇಶದ ಪ್ರಗತಿಗಾಗಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಮತ್ತು ಸಮಾಜದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ನಿಮಗೆ ಉತ್ತಮ ಆರೋಗ್ಯ, ಸುದೀರ್ಘ ಆಯಸ್ಸು ಮತ್ತು ಸಾರ್ವಜನಿಕ ಜೀವನದಲ್ಲಿ ಉನ್ನತ ಸೇವೆ ಸಲ್ಲಿಸುವ ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆ" ಎಂದು ಬರೆದಿದ್ದಾರೆ.

ಕೇವಲ ಒಂದು ವರ್ಷದ ಅವಧಿಯಲ್ಲಿ ತಮಿಳುನಾಡು ರಾಜಕೀಯದ ಚಿತ್ರಣ ಸಂಪೂರ್ಣ ಬದಲಾಗಿದೆ. ಸ್ಟಾಲಿನ್ ಕಳೆದುಕೊಂಡ 'ಸಹೋದರ'ನ ಸ್ಥಾನವನ್ನು ಮುಖ್ಯಮಂತ್ರಿ ವಿಜಯ್ ತುಂಬಿದ್ದಾರೆ. ರಾಹುಲ್ ಗಾಂಧಿಯವರಿಗೆ ಸಿಕ್ಕ ಈ ಹೊಸ ಸ್ವಾತಗ, ಮುಂಬರುವ ದಿನಗಳಲ್ಲಿ ತಮಿಳುನಾಡು ಹಾಗೂ ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್-ಟಿವಿಕೆ ಮೈತ್ರಿ ಮತ್ತಷ್ಟು ಗಟ್ಟಿಯಾಗುವ ಮುನ್ಸೂಚನೆ ನೀಡಿದೆ.

Rahul Gandhi Birthday

ಸುದೀರ್ಘ ಆಯುಷ್ಯ ಕರುಣಿಸಲಿ: ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ರಾಹುಲ್ ಗಾಂಧಿ ಅವರ 56ನೇ ಜನ್ಮದಿನದ ನಿಮಿತ್ತ ಶುಭಾಶಯಗಳನ್ನು ಕೋರಿದ್ದಾರೆ. ರಾಜಕೀಯವಾಗಿ ಎದುರಾಳಿಗಳಾಗಿದ್ದರೂ, ಜನ್ಮದಿನದ ಇಂತಹ ವಿಶೇಷ ಸಂದರ್ಭಗಳಲ್ಲಿ ಪರಸ್ಪರ ಶುಭ ಕೋರುವ ದೇಶದ ಉನ್ನತ ರಾಜಕೀಯ ಶಿಷ್ಟಾಚಾರ ಮತ್ತು ಪರಂಪರೆಯನ್ನು ಪ್ರಧಾನಿ ಮೋದಿ ಮುಂದುವರಿಸಿದ್ದಾರೆ. "ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ಸುದೀರ್ಘ ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ವಿಶ್‌ ಮಾಡಿದ್ದಾರೆ.

ದೇಶದ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವೆ ಸಂಸತ್ತಿನ ಒಳಗೂ ಮತ್ತು ಹೊರಗೂ ಸದಾ ತೀವ್ರ ರಾಜಕೀಯ ಸಿದ್ಧಾಂತಗಳ ಹೋರಾಟ ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರಧಾನಿಯವರು ಸೌಜನ್ಯಯುತವಾಗಿ ರಾಹುಲ್ ಗಾಂಧಿಯವರಿಗೆ 'ಜೀ' ಎಂದು ಗೌರವಪೂರ್ವಕವಾಗಿ ಸಂಬೋಧಿಸಿ ಶುಭ ಕೋರಿರುವುದು ರಾಜಕೀಯ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+