Clay Pot: ಮಣ್ಣಿನ ಮಡಕೆ ನೀರು ಕುಡಿಯುತ್ತೀರಾ? ಈ ಲಾಭಗಳನ್ನು ತಿಳಿದರೆ ಆಶ್ಚರ್ಯಪಡುವಿರಿ

ಬೇಸಿಗೆ ಕಾಲ ಆರಂಭವಾಗುತ್ತಿದಂತೆ ದೇಹದಲ್ಲಿ ನೀರಿನ ಅಂಶದ ಅಗತ್ಯತೆ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಬಿಸಿಲಿನಿಂದ ನಮ್ಮ ದೇಹವು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳವುದು ಬಹಳ ಮುಖ್ಯ. ಈ ಸಂದರ್ಭದಲ್ಲಿ ಜನರು ಹೆಚ್ಚಾಗಿ ಫ್ರಿಡ್ಜ್‌ ನೀರು ಅಥವಾ ಐಸ್ಡ್ ಪಾನೀಯಗಳನ್ನು ಕುಡಿಯುವುದಕ್ಕೆ ಆಯ್ಕೆ ಮಾಡಿಕೊಳ್ಳತ್ತಾರೆ. ಆದರೆ ತಜ್ಙರ ಪ್ರಕಾರ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅನೂಕೂಲಕರ.

ನೈಸರ್ಗಿಕ ತಂಪು ನೀರು

ಮಣ್ಣಿನ ಮಡಕೆಯ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ. ಪ್ರಿಡ್ಜ್ ನೀರಿನಂತೆ ಅತಿಯಾಗಿ ತಣ್ಣಗಿರದೆ, ದೇಹಕ್ಕೆ ಹಿತವಾದ ತಂಪು ನೀಡುತ್ತದೆ. ಇದರಿಂದ ಶೀತ, ಗಂಟಲು ನೋವು, ಮತ್ತು ಕಫದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕಡಿಮೆ.

Drink Water from Clay Pot

ನೀರಿನ ಗುಣಮಟ್ಟ ಸುಧಾರಣೆ

ಮಣ್ಣಿನ ಪಾತ್ರೆಯು ರಂಧ್ರಯುಕ್ತ ಸ್ವಭಾವವನ್ನು ಹೊಂದಿರುವುದರಿಂದ ಅದು ನೀರನ್ನು ನೀರನ್ನು ನ್ಯಾಚುರಲ್ ಆಗಿ ಕ್ಲೀನ್ ಮಾಡಲು ಸಹಾಯ ಮಾಡುತ್ತದೆ. ಇದು ನೀರಿನಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕುತ್ತದೆ. ಹಾಗೂ ನೀರಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೇಹದಲ್ಲಿನ ಶಕ್ತಿಯ ಸ್ಥಿರತೆ

ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹದಿಂದ ಎಲೆಕ್ಟ್ರೋಲೈಟ್‌ಗಳು ಕಡಿಮೆ ಅಗುತ್ತವೆ. ಮಣ್ಣಿನ ಮಡಕೆ ನೀರು ಕುಡಿಯುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ ಇದರಿಂದ ದಿನವಿಡೀ ಉತ್ಸಾಹದಿಂದ ಇರಬಹುದು.

ಜೀರ್ಣಕ್ರಿಯೆಗೆ ಸಹಕಾರಿ

ಮಣ್ಣಿನ ಮಡಕೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಗ್ಯಾಸ್ಟ್ರಿಕ್, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಮಣ್ಣಿನಲ್ಲಿ ಇರುವ ಖನಿಜಾಂಶಗಳು ನೀರಿಗೆ ಸೇರಿ ದೇಹಕ್ಕೆ ಹೆಚ್ಚು ಲಾಭ ನೀಡುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಕಾರಿ ಮತ್ತು ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅನೇಕ ಆರೋಗ್ಯ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಲು ಇದು ನೆರವಾಗುತ್ತದೆ.

ಚರ್ಮ ಮತ್ತು ಉಸಿರಾಟ

ದೇಹದ ಉಷ್ಣತೆಯಿಂದ ಬೇಸಿಗೆಯಲ್ಲಿ ಅತಿ ಹೆಚ್ಚು ಬೆವರು ಕಾರಣದಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ. ಮಣ್ಣಿನ ಮಡಕೆ ನೀರು ಕುಡಿಯುವುದರಿಂದ ದೇಹದ ತಾಪಮಾನ ಸ್ಥಿರತೆಯನ್ನು ಕಾಪಾಡಿಕೊಂಡು ಮತ್ತು ಚರ್ಮದ ಸಮಸ್ಯೆಗಳು ಕಡಿಮೆಯಾಗಬಹುದು. ಇದು ಗಂಟಲಿಗೆ ಹಿತ ನೀಡುವುದರಿಂದ ಉಸಿರಾಟದ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಫ್ರಿಡ್ಜ್ ನೀರಿನ ಬದಲಾಗಿ

ಇಂದಿನ ದಿನಗಳಲ್ಲಿ ಹೆಚ್ಚಿನವರು ಫ್ರಿಡ್ಜ್ ಅಥವಾ ವಾಟರ್ ಪ್ಯೂರಿಫೈಯರ್ ನೀರನ್ನು ಬಳಸುತ್ತಾರೆ. ಆದರೆ ಮಣ್ಣಿನ ಮಡಕೆ ನೀರು ನೈಸರ್ಗಿಕವಾಗಿ ತಂಪಾಗುವುದರಿಂದ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿದೆ ತಜ್ಞರ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+