ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಇಷ್ಟಾ ಅನ್ನೋ ಚಿದಂಬರಂ ಪ್ರಶ್ನೆಗೆ ಟ್ವಿಟ್ಟಿಗರು ಕೊಟ್ರು ನೋಡಿ ಮಾರುತ್ತರ?

|
Google Oneindia Kannada News

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಲೆಗಳು ಗಗನಕ್ಕೇರಿವೆ ಎನ್ನುವುದನ್ನು ಪರೋಕ್ಷವಾಗಿ ಟ್ವಿಟ್ಟರ್ ನಲ್ಲಿ ಉಲ್ಲೇಖಿಸಿದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ಟ್ವಿಟ್ಟಿಗರು ಅಣಕವಾಡಿದ್ದಾರೆ.

ಕಾಫಿಡೇ ಯಲ್ಲಿನ ಬೆಲೆಯನ್ನು ನೋಡಿ ಅವಕ್ಕಾಗಿ, ಟೀ ಕುಡಿಯದೇ ವಾಪಸ್ ಬಂದೆ, ನಾನು ಮಾಡಿದ ಸರಿನೋ, ತಪ್ಪೋ ಎಂದು ಚಿದಂಬರಂ ಟ್ವೀಟ್ ಮಾಡಿದ್ದರು. ಇದಕ್ಕೆ ಭರ್ಜರಿ ಪ್ರತಿಕ್ರಿಯ ವ್ಯಕ್ತವಾಗಿದ್ದು, ಚಿದಂಬರಂ ಪುತ್ರ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದು, ತಿಹಾರ್ ಜೈಲ್ , ಅಲ್ಲಿ ಎಲ್ಲವೂ ಫ್ರೀ.. ಹೀಗೆ ಟ್ವಿಟ್ಟಿಗರು ಅವರಿಗೆ ನೆನಪಿಸಿದ್ದಾರೆ.

ಬಿಜೆಪಿಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ, ಚಿದಂಬರಂಬಿಜೆಪಿಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ, ಚಿದಂಬರಂ

ಚಿದಂಬರಂ ಉಲ್ಲೇಖಿಸಿರುವ ಕಾಫಿಡೇ ಎಲ್ಲರಿಗೂ ತಿಳಿದಿರುವಂತೆ ಮಾಜಿ ಸಿಎಂ, ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಒಡೆತನದ್ದು. ಇದರಲ್ಲಿ ಒಂದು ಪಾಲನ್ನು ಚಿದಂಬರಂ ಪುತ್ರ ಕಾರ್ತಿ ಕೂಡಾ ಹೊಂದಿದ್ದಾರೆಂದು ಟ್ವಿಟ್ಟಿಗರೊಬ್ಬರು ಮಾಜಿ ವಿತ್ತ ಸಚಿವರ ಕಾಲೆಳೆದಿದ್ದಾರೆ.

ಚಿದಂಬರಂ ಟ್ವೀಟಿಗೆ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತ್ ಕುಮಾರ್ ಹೆಗಡೆ ಕೂಡಾ ರಿಪ್ಲೈ ಮಾಡಿದ್ದು, ಸಿಸಿಡಿ (ಕೆಫೆ ಕಾಫೀ ಡೇ) ಬೆಲೆಗಳು ನಿಮ್ಮ ಗುಲಾಮ ರಾಜವಂಶದ ಆಳ್ವಿಕೆಯ ವೇಳೆ ಕಮ್ಮಿಯಾಗಿತ್ತೇ ಎಂದು ತಿರುಗೇಟು ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪಿ ಚಿದಂಬರಂ ತಮ್ಮ ಪುತ್ರನ ಬಂಧನದ ನಂತರ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಹುತೇಕ ಹಗರಣಗಳು ಆಭರಣ ಉದ್ಯಮದಲ್ಲೇ ಏಕೆ ನಡೆಯುತ್ತಿವೆ, ಪ್ರಮುಖ ಆರೋಪಿಗಳು ಗುಜರಾತಿನವರೇ ಏಕೆ ಆಗಿದ್ದಾರೆ?, ಈ ರೀತಿಯ ಹಗರಣ ಬೇರೆ ವಲಯದಲ್ಲಿ ಅಥವಾ ಬೇರೆ ರಾಜ್ಯದಲ್ಲಿ ಏಕೆ ಆಗುವುದಿಲ್ಲ? ಹೀಗೆಂದು ಪ್ರಶ್ನೆ ಮಾಡಿದ್ದರು. ಚಿದಂಬರಂ ಟ್ವೀಟ್ ಮತ್ತು ಅದಕ್ಕೆ ಬಂದಂತಹ ಕೆಲವೊಂದು ರಿಪ್ಲೈಗಳ ಝಲಕ್..

ಬಿಸಿನೀರು ಮತ್ತು ಟೀಬ್ಯಾಗ್ ನೀಡಿ, ರೂಪಾಯಿ 135 ಆಗುತ್ತೆ ಎಂದ್ರು

ಬಿಸಿನೀರು ಮತ್ತು ಟೀಬ್ಯಾಗ್ ನೀಡಿ, ರೂಪಾಯಿ 135 ಆಗುತ್ತೆ ಎಂದ್ರು

ಚೆನ್ನೈ ವಿಮಾನನಿಲ್ದಾಣದ ಕೆಫೆ ಕಾಫೀ ಡೇ ರೆಸ್ಟೋರೆಂಟಿನಲ್ಲಿ ಟೀ ಬಗ್ಗೆ ವಿಚಾರಿಸಿದೆ. ಬಿಸಿನೀರು ಮತ್ತು ಟೀಬ್ಯಾಗ್ ನೀಡಿ, ರೂಪಾಯಿ 135 ಆಗುತ್ತೆ ಎಂದರು. ಟೀ ಒಂದರ ಬೆಲೆ ಇಷ್ಟಾ ಎಂದು ಅವಕ್ಕಾಗಿ ಟೀ ಬೇಡ ಎಂದು ಬಂದೆ, ನಾನು ಮಾಡಿದ್ದು ಸರಿನಾ ಅಥವಾ ತಪ್ಪಾ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಟ್ವೀಟ್ ಮಾಡಿದ್ದರು. ಅದಕ್ಕೆ ಮೂರು ಸಾವಿರಕ್ಕೂ ಅಧಿಕ ಕಾಮೆಂಟುಗಳು ಬಂದಿವೆ.

ಚಿದಂಬರಂ ಪುತ್ರ ಕಾರ್ತಿ ಕೂಡಾ ಕಾಫೀ ಡೇಯ ಪಾಲುದಾರ ಎನ್ನುವ ಟ್ವೀಟ್

ಚಿದಂಬರಂ ಪುತ್ರ ಕಾರ್ತಿ ಕೂಡಾ ಕಾಫೀ ಡೇಯ ಪಾಲುದಾರ ಎನ್ನುವ ಟ್ವೀಟ್

ಚಿದಂಬರಂ ಅವರ ಟ್ವೀಟಿಗೆ ಬಂದಿರುವ ರಿಪ್ಲೈ ಒಂದು ಹೀಗಿದೆ.. ನಿಮಗೆ ತಿಹಾರ್ ಜೈಲಿನಲ್ಲಿ ಉಚಿತ ಕಾಫೀ, ಟೀ ಸಿಗುತ್ತೆ. ಟ್ರೈಲರ್ ಮುಗಿಯಿತು, ಅಸಲಿ ಸಿನಿಮಾ ಇನ್ನು ಶುರುವಾಗಲಿದೆ. ಚಿದಂಬರಂ ಸರ್..ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದೀರಿ... ಚಿದಂಬರಂ ಪುತ್ರ ಕಾರ್ತಿ ಕೂಡಾ ಕಾಫೀ ಡೇಯ ಪಾಲುದಾರ ಎನ್ನುವ ಟ್ವೀಟ್ ರಿಪ್ಲೈ.

ಜನಸಾಮಾನ್ಯರ ಕಿವಿಗೆ ಹೂ ಇಡುವ ಕೆಲಸವನ್ನು ಮಾಡಬೇಡಿ

ಜನಸಾಮಾನ್ಯರ ಕಿವಿಗೆ ಹೂ ಇಡುವ ಕೆಲಸವನ್ನು ಮಾಡಬೇಡಿ

ವಿಮಾನನಿಲ್ದಾಣದ ರೆಸ್ಟೋರೆಂಟುಗಳು ಪಾರ್ಲಿಮೆಂಟಿನಲ್ಲಿರುವ ಕ್ಯಾಂಟೀನ್ ಅಂದು ಕೊಂಡ್ರಾ? ಇದೇ ಹಿಂದೆ ಸಂಸತ್ತಿನಲ್ಲಿ, ಚೆನ್ನೈನಲ್ಲಿನ ಸಿನಿಮಾ ಹಾಲ್ ಗಳಲ್ಲಿ ನೀರಿನ ಬಾಟಲಿಗೆ ತೊಂಬತ್ತು ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನುವ ಪ್ರಶ್ನೆಗೆ MRP ಬೆಲೆಗಳು 90 ರೂಪಾಯಿ ಎಂದು ನಿಗದಿಯಾಗಿದ್ದರೆ, ಅದು ಓಕೆ ಎನ್ನುವ ಉತ್ತರವನ್ನು ನೀಡಿದ್ರಿ.. ಜನಸಾಮಾನ್ಯರ ಕಿವಿಗೆ ಹೂ ಇಡುವ ಕೆಲಸವನ್ನು ಮಾಡಬೇಡಿ..

ನೀವು ಗಾಭರಿಯಾದ್ರಿ ಎನ್ನುವುದು ಮಾತ್ರ ಹಾಸ್ಯಾಸ್ಪದ

ನೀವು ಗಾಭರಿಯಾದ್ರಿ ಎನ್ನುವುದು ಮಾತ್ರ ಹಾಸ್ಯಾಸ್ಪದ

ವಿಮಾನ ನಿಲ್ದಾಣದ ಬೆಲೆ ಹೆಚ್ಚು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ನೀವು ಗಾಭರಿಯಾದ್ರಿ ಎನ್ನುವುದು ಮಾತ್ರ ಹಾಸ್ಯಾಸ್ಪದ. ನಿಮ್ಮ ಸರಕಾರದ ಅವಧಿಯಲ್ಲಿ ಈ ರೀತಿಯ ಬೆಲೆ ಇದ್ದದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಹಿಂದೆ ಯಾವುದಕ್ಕೂ ದುಡ್ಡು ನೀಡಲಿಲ್ಲವೇ? ನಿಮ್ಮಂತಹ ಕೋಟ್ಯಾಧಿಪತಿಗಳನ್ನು ನೋಡಿ, ಬಹುಷ: ಅವರು (ಕಾಫೀಡೇ) ಈ ರೀತಿ ಬಿಲ್ ಮಾಡಿರಬೇಕು..

ಯಾವತ್ತಾದರೂ ದುಡ್ಡು ಕೊಟ್ಟಿದ್ದರೆ ತಾನೇ ಕಾಫೀ ಟೀ ಬೆಲೆ ಏನೆಂದು ನಿಮಗೆ ಗೊತ್ತಾಗೋದು

ಯಾವತ್ತಾದರೂ ದುಡ್ಡು ಕೊಟ್ಟಿದ್ದರೆ ತಾನೇ ಕಾಫೀ ಟೀ ಬೆಲೆ ಏನೆಂದು ನಿಮಗೆ ಗೊತ್ತಾಗೋದು

ನೀವು ಹೇಳಿದ್ದು ಸರಿ, ನೀವು ಯಾವತ್ತಾದರೂ ದುಡ್ಡು ಕೊಟ್ಟಿದ್ದರೆ ತಾನೇ ಕಾಫೀ ಟೀ ಬೆಲೆ ಏನೆಂದು ನಿಮಗೆ ಗೊತ್ತಾಗುವುದು. ದೇಶದ ತೆರಿಗೆದಾರರ ಹಣವನ್ನು ಲೂಟಿ ಮಾಡಿದ ನಿಮಗೆ, ಜನಸಾಮಾನ್ಯರ ಸಮಸ್ಯೆ ಏನು ಅರ್ಥವಾಗುತ್ತೆ? ಮಾಜಿ ಹಣಕಾಸು ಸಚಿವರಾಗಿ ನಿಮಗೆ ಟೀ ಬೆಲೆ ಏನೆಂದು ಗೊತ್ತಿಲ್ಲ, ಅದಕ್ಕೇ ನೋಡಿ... ಮೋದಿ ಹೇಳೋದು ಕಾಂಗ್ರೆಸ್ ಮುಕ್ತ್ ಭಾರತ್ ಎಂದು..

English summary
Former Indian Finance Minister, P Chidambaram tweet on tea price in Chennai Airport, twitterite reply. Chidambaram tweeted, " At Chennai Airport Coffee Day I asked for tea. Offered hot water and tea bag, price Rs 135. Horrified, I declined. Was I right or wrong?". Twitterite heavily criticized Chidambaram tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X