• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್, ಭಾರತ-ಇಸ್ರೇಲ್ ಬಾಂಧವ್ಯ ವಿಚಾರದಲ್ಲಿ ಮೋದಿಗೆ ಚಿದಂಬರಂ ಟಾಂ‌ಗ್‌

|
Google Oneindia Kannada News

ನವದೆಹಲಿ, ಜನವರಿ 30: ಪೆಗಾಸಸ್ ಸ್ಪೈವೇರ್ ವಿವಾದದ ಇತ್ತೀಚಿನ ಗದ್ದಲದ ನಡುವೆ, ಭಾರತ ಮತ್ತು ಇಸ್ರೇಲ್ ನಡುವಿನ 30 ವರ್ಷಗಳ ರಾಜತಾಂತ್ರಿಕ ಸಂಬಂಧದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂದೇಶದ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಕಿಡಿಕಾಡಿದ್ದಾರೆ. ಹಾಗೆಯೇ ಈ ವಿಚಾರದಲ್ಲಿ ಪ್ರಧಾನಿ ಕಾಲೆಳೆದಿದ್ದಾರೆ.

"ಇಸ್ರೇಲ್‌ನಲ್ಲಿ ಪೆಗಾಸಸ್ ಸ್ಪೈವೇರ್‌ನ ಯಾವುದೇ ಮುಂದುವರಿದ ಆವೃತ್ತಿ ಇದೆಯೇ ಎಂದು ಕೇಳಲು ಇದು ಉತ್ತಮ ಸಮಯ," ಎಂದು ಪಿ ಚಿದಂಬರಂ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯಲು ಹೊಸ ಗುರಿಯನ್ನು ಹೊಂದಲು ಬೇರೆ ಉತ್ತಮ ಸಮಯವಿಲ್ಲ ಎಂದು ಶನಿವಾರ ಪ್ರಧಾನಿ ಮೋದಿಯವರ ಹೇಳಿಕೆಗೆ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.

'ಮುಸ್ಲಿಮರ ಬಳಿಕ ಈಗ ಕ್ರೈಸ್ತರು ಹಿಂದುತ್ವ ಬ್ರಿಗೇಡ್‌ನ ಟಾರ್ಗೆಟ್‌''ಮುಸ್ಲಿಮರ ಬಳಿಕ ಈಗ ಕ್ರೈಸ್ತರು ಹಿಂದುತ್ವ ಬ್ರಿಗೇಡ್‌ನ ಟಾರ್ಗೆಟ್‌'

ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಸುಮಾರು 2 ಬಿಲಿಯನ್ ಡಾಲರ್‌ ಒಪ್ಪಂದದ "ಕೇಂದ್ರ" ಗಳಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದ ಒಂದು ದಿನದ ನಂತರ ಪಿ ಚಿದಂಬರಂ ಹೇಳಿಕೆ ನೀಡಿದ್ದಾರೆ.

 ಪ್ರಧಾನಿ ಮೋದಿ ಹೇಳಿದ್ದು ಏನು?

ಪ್ರಧಾನಿ ಮೋದಿ ಹೇಳಿದ್ದು ಏನು?

ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗೆ 30 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಶನಿವಾರ ಪ್ರಧಾನಿ ಮೋದಿ ವಿಶೇಷ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದರು. "ನಮ್ಮ ದೇಶಗಳ ನಡುವಿನ ಸಂಬಂಧದ ಇತಿಹಾಸವು ತುಂಬಾ ಹಳೆಯದು. ಭಾರತ ಮತ್ತು ಇಸ್ರೇಲ್ ಜನರ ನಡುವೆ ಶತಮಾನಗಳಿಂದ ಬಲವಾದ ಸಂಬಂಧವಿದೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 2017 ರಲ್ಲಿ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತವು ಇಸ್ರೇಲ್‌ನಿಂದ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿಯ ನಂತರ, ಕಾಂಗ್ರೆಸ್ ಪಕ್ಷವು ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಲಿದೆ. ಸರ್ಕಾರ ಸಂಸತ್ತಿಗೆ ವಂಚನೆ ಮಾಡಿದೆ, ಸುಪ್ರೀಂ ಕೋರ್ಟ್‌ಗೆ ವಂಚನೆ ಮಾಡಿದೆ, ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿದೆ ಮತ್ತು ದೇಶದ್ರೋಹ ಮಾಡಿದೆ ಎಂದು ನಿರಂತರವಾಗಿ ಕಾಂಗ್ರೆಸ್‌ ಆರೋಪ ಮಡುತ್ತಲೇ ಬಂದಿದೆ.

Recommended Video

  ಪೆಗಾಸಸ್ ವಿವಾದ: ಭಾರತ-ಇಸ್ರೇಲ್ ಬಾಂಧವ್ಯದ ಬಗ್ಗೆ ಮೋದಿಗೆ ಟಾಂಗ್ ಕೊಟ್ಟ ಚಿದಂಬರಂ | Oneindia Kannada
   ಬಜೆಟ್ ಅಧಿವೇಶನದಲ್ಲಿಯೂ ಪೆಗಾಸಸ್‌ ಕಿಡಿ?

  ಬಜೆಟ್ ಅಧಿವೇಶನದಲ್ಲಿಯೂ ಪೆಗಾಸಸ್‌ ಕಿಡಿ?

  ಮುಂದಿನ ವಾರ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಕಾಂಗ್ರೆಸ್‌ ಮುಂದಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ಉತ್ತರವನ್ನು ಪಡೆಯಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ. ಕಾಂಗ್ರೆಸ್ ತನ್ನ ಉದ್ದೇಶವನ್ನು ಈಗಾಗಲೇ ಸ್ಪಷ್ಟ ಮಾಡಿದೆ. 2022 ರ ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ಬಗ್ಗೆ ಪ್ರಸ್ತಾಪ ಮಾಡುವ ಬಗ್ಗೆ ಕಾಂಗ್ರೆಸ್‌ ಹೇಳಿದೆ. 2021 ರ ಸಂಪೂರ್ಣ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರವು ಅವಕಾಶ ಮಾಡಿಕೊಟ್ಟಿಲ್ಲ ಎಂಬುವುದು ಕಾಂಗ್ರೆಸ್‌ ವಾದವಾಗಿದೆ. ಪಗಾಸಸ್ ಸ್ಪೈವೇರ್ ಅನ್ನು ಬಳಸಿಕೊಂಡು ಪ್ರತಿಪಕ್ಷ ನಾಯಕರು, ಸಶಸ್ತ್ರ ಪಡೆಗಳು ಮತ್ತು ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಣೆ ಮಾಡುವ ಫೋನ್‌ಗಳನ್ನು "ಟ್ಯಾಪಿಂಗ್" ಮಾಡುವ ಮೂಲಕ ಸರ್ಕಾರವು ದೇಶದ್ರೋಹದ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

  ಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂ

   ನ್ಯೂಯಾರ್ಕ್ ಟೈಮ್ಸ್‌ ವರದಿ ಏನು ಹೇಳುತ್ತದೆ?

  ನ್ಯೂಯಾರ್ಕ್ ಟೈಮ್ಸ್‌ ವರದಿ ಏನು ಹೇಳುತ್ತದೆ?

  ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯು 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಸುಮಾರು 2 ಬಿಲಿಯನ್ ಡಾಲರ್‌ ಒಪ್ಪಂದದ "ಕೇಂದ್ರ" ಗಳಾಗಿವೆ ಎಂದು 'ದಿ ಬ್ಯಾಟಲ್ ಫಾರ್ ದಿ ವರ್ಲ್ಡ್ಸ್ ಮೋಸ್ಟ್ ಪವರ್ ಫುಲ್ ಸೈಬರ್ ವೆಪನ್' ಎಂಬ ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖ ಮಾಡಿದೆ. ವರದಿಯು ಜುಲೈ 2017 ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರ ಭೇಟಿಯನ್ನು ಉಲ್ಲೇಖಿಸಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂಬುವುದನ್ನು ನಾವಿಲ್ಲಿ ಸ್ಮರಿಸಬಹುದು.

   ಪೆಗಾಸಸ್ ಮತ್ತು ಕ್ಷಿಪಣಿ

  ಪೆಗಾಸಸ್ ಮತ್ತು ಕ್ಷಿಪಣಿ

  "ದಶಕಗಳ ಕಾಲ, ಭಾರತವು 'ಪ್ಯಾಲೆಸ್ಟೀನಿಯನ್ ಕಾರಣಕ್ಕೆ ಬದ್ಧತೆ' ಎಂದು ಕರೆಯುವ ನೀತಿಯನ್ನು ಉಳಿಸಿಕೊಂಡಿದೆ. ಇಸ್ರೇಲ್‌ನೊಂದಿಗಿನ ಸಂಬಂಧಗಳು ಸರಿಯಾಗಿರಲಿಲ್ಲ. ಆದರೆ ಪ್ರಧಾನಿ ಆದ ಬಳಿಕ ನರೇಂದ್ರ ಮೋದಿ ಇಸ್ರೇಲ್‌ ಭೇಟಿಯು ಗಮನಾರ್ಹವಾಗಿ ಸೌಹಾರ್ದತೆಯನ್ನು ಪ್ರತಿನಿಧಿಸಿದೆ. ಇಸ್ರೇಲಿ ಪ್ರಧಾನ ಮಂತ್ರಿ ನೆತನ್ಯಾಹು ಆಗ ಬೆಚ್ಚಗಿನ ಭಾವನೆಯನ್ನು ಹೊಂದಿದ್ದರು. ಅದಕ್ಕೆ ಕಾರಣವೂ ಇದೆ. ಅದಕ್ಕೆ ಕಾರಣ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಒಳಗೊಂಡ 2017 ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ಸಾಧನಗಳ ಸುಮಾರು 2 ಬಿಲಿಯನ್ ಡಾಲರ್‌ ಒಪ್ಪಂದವೇ ಆಗಿದೆ," ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

  English summary
  Chidambaram takes dig at PM Modi over Pegasus, India-Israel ties.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X