ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಮೈತ್ರಿಯಲ್ಲಿ ಸಣ್ಣ ಜೊತೆದಾರರಾಗಲು 'ಕಾಂಗ್ರೆಸ್‌ ಸಿದ್ಧ' ಎಂದ ಚಿದಂಬರಂ

|
Google Oneindia Kannada News

ನವದೆಹಲಿ, ಮಾರ್ಚ್ 18: ಕಾಂಗ್ರೆಸ್ ಪಕ್ಷದ ಇತ್ತೀಚಿನ ಚುನಾವಣಾ ಸೋಲಿಗೆ ಗಾಂಧಿಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇದೇ ಸಂದರ್ಭದಲ್ಲಿ ಎಎಪಿ ಮೈತ್ರಿಯಲ್ಲಿ ಕಿರಿಯ ಪಾಲುದಾರರಾಗಲು ಕಾಂಗ್ರೆಸ್‌ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ "ಜಿ-23" ಅಥವಾ ಕಾಂಗ್ರೆಸ್‌ ಬಂಡುಕೋರರ ಸಭೆಯ ಒಂದು ದಿನದ ನಂತರ ಎನ್‌ಡಿಟಿ ಜೊತೆಯಲ್ಲಿ ಸಂದರ್ಶನದಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಪಕ್ಷವನ್ನು ಇಬ್ಭಾಗ ಮಾಡದಂತೆ ಮನವಿ ಮಾಡಿದ್ದಾರೆ. ಚುನಾವಣೆಯ ಬಳಿಕ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಯಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಅನೇಕ ಕಾಂಗ್ರೆಸ್ ನಾಯಕರಂತೆ ಚಿದಂಬರಂ ಕೂಡಾ ದೃಢಪಡಿಸಿದ್ದಾರೆ.

 ಸೋನಿಯಾ ಗಾಂಧಿ ತಲೆದಂಡಕ್ಕೆ ಒತ್ತಡ ತೀವ್ರ: ಶತಮಾನಗಳ ಇತಿಹಾಸದ ಕಾಂಗ್ರೆಸ್ ಇಬ್ಬಾಗದತ್ತ? ಸೋನಿಯಾ ಗಾಂಧಿ ತಲೆದಂಡಕ್ಕೆ ಒತ್ತಡ ತೀವ್ರ: ಶತಮಾನಗಳ ಇತಿಹಾಸದ ಕಾಂಗ್ರೆಸ್ ಇಬ್ಬಾಗದತ್ತ?

"ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರಾಜೀನಾಮೆ ನೀಡಿ ತಮ್ಮ ತಮ್ಮ ಸ್ಥಾನದಿಂದ ಕೆಳಕ್ಕೆ ಇಳಿಯಲು ಸಿದ್ಧರಾಗಿದ್ದರು. ಆದರೆ ಅದನ್ನು ಸಿಡಬ್ಲ್ಯೂಸಿ ಸ್ವೀಕರಿಸಲಿಲ್ಲ. ಹಾಗಾದರೆ, ಈಗ ನಮ್ಮ ಆಯ್ಕೆ ಏನು? ನಾವು ಹೊಸ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕಾಗಿದೆ.," ಎಂದು ತಿಳಿಸಿದರು. "ಆದರೆ ನಾವು ಅದಕ್ಕೂ ಮುನ್ನ ಆಗಸ್ಟ್ ನಡುವೆ ನಾವು ಏನು ಮಾಡುವುದು? ಅಲ್ಲಿಯವರೆಗೆ ನಾನು ಸೇರಿದಂತೆ ನಾವು ಶ್ರೀಮತಿ ಗಾಂಧಿಯವರು ಸ್ಥಾನವನ್ನು ಮುನ್ನಡೆಸುತ್ತಿದ್ದಾರೆ ಎಂದು ನಂಬಿದ್ದೇವೆ," ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದರು.

6-12 ತರಗತಿಗಳಿಗೆ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಿದ ಗುಜರಾತ್ ಸರ್ಕಾರ 6-12 ತರಗತಿಗಳಿಗೆ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಿದ ಗುಜರಾತ್ ಸರ್ಕಾರ

 ಗಾಂಧಿಗಳನ್ನು ಮಾತ್ರ ಹೊಣೆಗಾರರನ್ನಾಗಿಸುವುದು ಸರಿಯಲ್ಲ

ಗಾಂಧಿಗಳನ್ನು ಮಾತ್ರ ಹೊಣೆಗಾರರನ್ನಾಗಿಸುವುದು ಸರಿಯಲ್ಲ

ಇನ್ನು ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಪಟ್ಟಕ್ಕಾಗಿ ಚುನಾವಣೆಯನ್ನು ನಡೆಸಲು ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ ಎಂದು ಕೂಡಾ ಚಿದಂಬಂರ ತಿಳಿಸಿದ್ದಾರೆ. ಸೋನಿಯಾ ಗಾಂಧಿಯವರು ಚುನಾವಣೆಗೆ ಮುಂದಾಗುವಂತೆ ಸೂಚಿಸಿದ್ದರು ಆದರೆ ಹೆಚ್ಚಿನ ನಾಯಕರು ಒಪ್ಪಲಿಲ್ಲ ಎಂದು ಪಿ ಚಿದಂಬರಂ ಹೇಳಿದರು. ಕಪಿಲ್ ಸಿಬಲ್ ಅವರಂತಹ "G-23" ನಾಯಕರು ಚುನಾವಣೆಯಲ್ಲಿ ಭಾರೀ ಹಿನ್ನೆಡೆ ಸಾಧಿಸಿರುವ ಪಕ್ಷವನ್ನು ಪುನರುಜ್ಜೀವನಗೊಳಿಸಲು ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕೆಂದು ಬಹಿರಂಗವಾಗಿ ಕರೆ ನೀಡುತ್ತಿದ್ದಾರೆ. ಆದರೆ ಈ ನಡುವೆ ಇತ್ತೀಚಿನ ಸೋಲುಗಳಿಗೆ ಗಾಂಧಿಯವರು ಮಾತ್ರ ಹೊಣೆಗಾರರು ಎಂದು ಹೇಳುವುದು ಸರಿಯಲ್ಲ. ಅವರನ್ನು ಮಾತ್ರ ದೂಷಣೆ ಮಾಡುವುದು ತಪ್ಪು ಎಂದುಬ ಚಿದಂಬರಂ ಹೇಳಿದರು.

 ಎಲ್ಲರಿಗೂ ಜವಾಬ್ದಾರಿ ಇದೆ ಎಂದ ಚಿದಂಬರಂ

ಎಲ್ಲರಿಗೂ ಜವಾಬ್ದಾರಿ ಇದೆ ಎಂದ ಚಿದಂಬರಂ

"ನಾನು ಗೋವಾದ ಜವಾಬ್ದಾರಿಯನ್ನು ಒಪ್ಪಿಕೊಂಡಂತೆ ಗಾಂಧಿಗಳು ಜವಾಬ್ದಾರಿಯನ್ನು ಒಪ್ಪಿಕೊಂಡರು ಮತ್ತು ಇತರರು ಇತರ ರಾಜ್ಯಗಳ ಜವಾಬ್ದಾರಿಯನ್ನು ಸ್ವೀಕರಿಸಿದರು. ಯಾರೂ ಜವಾಬ್ದಾರಿಯಿಂದ ಓಡಿಹೋಗಿಲ್ಲ. ಆದರೆ ಜವಾಬ್ದಾರಿಯು ನಾಯಕತ್ವ ಸ್ಥಾನದಲ್ಲಿರುವ ಪ್ರತಿಯೊಬ್ಬರ ಮೇಲಿದೆ. ಅದು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಮಟ್ಟದಲ್ಲಿರಬಹುದು. ಎಐಸಿಸಿ ನಾಯಕತ್ವದ ಜವಾಬ್ದಾರಿ ಎಂದು ಹೇಳುವುದು ಸರಿಯಲ್ಲ," ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಹಿನ್ನೆಡೆಯನ್ನು ಸಾಧಿಸಿದೆ. ಸೋನಿಯಾ ಗಾಂಧಿಗೆ ಎರಡು ವರ್ಷಗಳ ಕಾಲ ಪತ್ರ ಬರೆದ 23 ನಾಯಕರ ಗುಂಪು ಈಗ ಈ ಸೋಲಿನ ಬಗ್ಗೆ ಧ್ವನಿ ಎತ್ತಿದೆ. ಸಿಡಬ್ಲ್ಯೂಸಿ ಯಾವುದೇ ತೀವ್ರವಾದ ಬದಲಾವಣೆಗಳಿಗೆ ಬದ್ಧವಾಗದೆ, ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ನಂಬಿಕೆಯನ್ನು ಇರಿಸುವ ಹೇಳಿಕೆಯನ್ನೇ ನೀಡಿದೆ.

 ಆಗಸ್ಟ್‌ನಲ್ಲಿ ಕಾಂಗ್ರೆಸ್‌ಗೆ ಹೊಸ ನಾಯಕತ್ವ

ಆಗಸ್ಟ್‌ನಲ್ಲಿ ಕಾಂಗ್ರೆಸ್‌ಗೆ ಹೊಸ ನಾಯಕತ್ವ

ಇನ್ನು ಪಕ್ಷವನ್ನು ಪುನರುಜ್ಜೀವನಗೊಳಿಸುವ ಕ್ರಮಗಳ ಬಗ್ಗೆ ಮಾತನಾಡಿದ ಪಿ ಚಿದಂಬರಂ, "ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಚುನಾವಣೆಯು ಆಗಸ್ಟ್‌ನಲ್ಲಿದೆ. ಮೂರು ತಿಂಗಳ ಕಾಲ ಹಂಗಾಮಿ ಅಧ್ಯಕ್ಷರನ್ನು (ಸೋನಿಯಾ ಗಾಂಧಿ) ಬದಲಿಸಲು ನಾವು ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ನೀವು ಸೂಚಿಸುತ್ತಿದ್ದೀರಾ," ಎಂದು ಪ್ರಶ್ನೆ ಮಾಡಿದರು. "ಆಗಸ್ಟ್‌ನಲ್ಲಿ ನಾವು ಪೂರ್ಣ ಸಮಯದ ನಾಯಕತ್ವವನ್ನು ಹೊಂದುತ್ತೇವೆ ಎಂದು ನನಗೆ ಖಾತ್ರಿಯಿದೆ. ಈಗ ಮತ್ತು ಆಗಸ್ಟ್ ನಡುವಿನ ಸಮಯದಲ್ಲಿ ನಾವು ಮಾಡಬೇಕಾಗಿರುವುದು ಸಂಘಟನೆಯಲ್ಲಿ ಅಗತ್ಯ ಮತ್ತು ಸಮಗ್ರ ಸುಧಾರಣೆಗಳನ್ನು ಮಾಡುವುದು. ಗಾಂಧಿಯವರು ಅದನ್ನು ಮಾಡುತ್ತಿದ್ದಾರೆಂದು ನಾನು ನಂಬುತ್ತೇನೆ," ಎಂದು ತಿಳಿಸಿದರು.

 ಬಿಜೆಪಿಯನ್ನು ಸೋಲಿಸಲು ಹೊಂದಾಣಿಕೆ ಅತ್ಯಗತ್ಯ

ಬಿಜೆಪಿಯನ್ನು ಸೋಲಿಸಲು ಹೊಂದಾಣಿಕೆ ಅತ್ಯಗತ್ಯ

2024 ರ ರಾಷ್ಟ್ರೀಯ ಚುನಾವಣೆಗೆ ತಮ್ಮ ಪಕ್ಷವು ಸಿದ್ಧವಾಗಿದ್ದರೂ, ಬಿಜೆಪಿಯನ್ನು ಸೋಲಿಸಲು ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಈ ಸಂದರ್ಭದಲ್ಲೇ ಚಿದಂಬರಂ ಹೇಳಿದರು. "ಪ್ರತಿಯೊಂದು ಪಕ್ಷವೂ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್‌ಗೂ ಅನ್ವಯಿಸುತ್ತದೆ. ಹೋರಾಟವು ರಾಜ್ಯವಾರು ಇರುತ್ತದೆ. ಬಂಗಾಳದಲ್ಲಿ ನಾವು ನಾಯಕತ್ವದಲ್ಲಿ ತೃಣಮೂಲದೊಂದಿಗೆ ಹೋರಾಡಬೇಕು. ಪಂಜಾಬ್‌ನಲ್ಲಿ ನಾವು ಎಎಪಿ ಜೊತೆ ಹೋರಾಡಬೇಕು. ನಾಯಕರಾಗಿ ನೀವು ರಾಜ್ಯವಾರು ಬಿಜೆಪಿ ವಿರುದ್ಧ ಹೋರಾಡಿದರೆ ಅದನ್ನು ಸೋಲಿಸಲು ಸಾಧ್ಯವಾಗುತ್ತದೆ," ಎಂದರು. ಇನ್ನು ಕಾಂಗ್ರೆಸ್‌ನ ದೌರ್ಬಲ್ಯಗಳನ್ನು ಕಾಂಗ್ರೆಸ್ ನಾಯಕರು ಉಲ್ಲೇಖ ಮಾಡಿದರು. ಹಲವು ರಾಜ್ಯಗಳಲ್ಲಿ ಪಕ್ಷವಿಲ್ಲ, ಬ್ಲಾಕ್ ಸಮಿತಿಗಳನ್ನು ವಿಸರ್ಜಿಸಿ ಪುನರ್ ರಚನೆ ಮಾಡಬೇಕು ಎಂದರು.

English summary
Congress Willing To Be Junior Partner In Alliance With AAP Says P Chidambaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X