1000 ರುಪಾಯಿ ನೋಟು ಮತ್ತೆ ಚಲಾವಣೆಗೆ? ಪಿ. ಚಿದಂಬರಂ ಹೇಳಿದ್ದಿಷ್ಟು
ಭಾರತೀಯ ರಿಸರ್ವ್ ಬ್ಯಾಂಕ್ 2000 ರುಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಆರ್‌ಬಿಐ ಶುಕ್ರವಾರ ಈ ಬಗ್ಗೆ ಪ್ರಕಟಣೆ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ₹2000 ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ಕ್ರಮದ ಬಗ್ಗೆ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಇದು ಅನಿರೀಕ್ಷಿತವೇನಲ್ಲ ಎಂದು ಹೇಳಿದ್ದಾರೆ. ನಾವು ನಿರೀಕ್ಷೆ ಮಾಡಿದಂತೆಯೇ ಕೇಂದ್ರ ಸರ್ಕಾರ/ಆರ್‌ಬಿಐ ನಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, "ನಿರೀಕ್ಷೆಯಂತೆ, ಸರ್ಕಾರ/ಆರ್‌ಬಿಐ 2000 ರೂ ನೋಟನ್ನು ಹಿಂಪಡೆದಿದೆ ಮತ್ತು ನೋಟುಗಳನ್ನು ಬದಲಾಯಿಸಲು ಸೆಪ್ಟೆಂಬರ್ 30 ರವರೆಗೆ ಸಮಯ ನೀಡಿದೆ. 2000 ರೂಪಾಯಿ ನೋಟು ಅಷ್ಟೇನೂ ಜನಪ್ರಿಯ ವಿನಿಮಯ ಮಾಧ್ಯಮವಲ್ಲ. ನಾವು ಇದನ್ನು ನವೆಂಬರ್ 2016 ರಲ್ಲಿ ಹೇಳಿದ್ದೇವೆ, ಈಗ ನಾವು ಹೇಳಿದ್ದು ಸರಿ ಎಂದು ಸಾಬೀತಾಗಿದೆ" ಎಂದು ಹೇಳಿದ್ದಾರೆ.
As expected, the government/RBI have withdrawn the Rs 2000 note and given time until September 30 to exchange the notes
— P. Chidambaram (@PChidambaram_IN) May 19, 2023
The Rs 2000 note is hardly a popular medium of exchange. We said this in November 2016 and we have been proved correct
The Rs 2000 note was a band-aid to…
1000 ರುಪಾಯಿ ನೋಟು ಮತ್ತೆ ಚಲಾವಣೆಗೆ?
"ಜನಪ್ರಿಯ ಮತ್ತು ವ್ಯಾಪಕವಾಗಿ ವಿನಿಮಯವಾಗುತ್ತಿದ್ದ 500 ಮತ್ತು 1000 ರೂಪಾಯಿ ನೋಟು ಅಮಾನ್ಯೀಕರಣದ ಮೂರ್ಖತನದ ನಿರ್ಧಾರವನ್ನು ಮುಚ್ಚಿಹಾಕಲು 2000 ರೂಪಾಯಿ ನೋಟು ಬ್ಯಾಂಡ್-ಆಯ್ಡ್ ಆಗಿತ್ತು. ನೋಟು ಅಮಾನ್ಯೀಕರಣದ ಕೆಲವು ವಾರಗಳ ನಂತರ, ಸರ್ಕಾರ/ಆರ್‌ಬಿಐ 500 ರೂ ಮುಖಬೆಲೆಯ ನೋಟನ್ನು ಪುನಃ ಪರಿಚಯಿಸುವಂತೆ ಒತ್ತಾಯಿಸಲಾಯಿತು" ಎಂದು ಹೇಳಿದ್ದಾರೆ.
ಸರ್ಕಾರ/ ಆರ್‌ಬಿಐ 1000 ರುಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಿದರೆ ಕೂಡ ನನಗೆ ಅಚ್ಚರಿಯಾಗುವುದಿಲ್ಲ. ನೋಟು ಅಮಾನ್ಯೀಕರಣ ಒಂದು ಪೂರ್ಣ ಸುತ್ತು ಹಾಕಿಕೊಂಡು ಬಂದಿದೆ! ಎಂದು ಟ್ವೀಟ್ ಮಾಡಿದ್ದಾರೆ.
ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ @narendramodi ಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು.
— Siddaramaiah (@siddaramaiah) May 19, 2023
1/2
ನೋಟು ಹಿಂಪಡೆದಿದ್ದಕ್ಕೆ ಸಿದ್ಧರಾಮಯ್ಯ ಟೀಕೆ
ನೋಟು ಹಿಂಪಡೆದಿರುವುದಕ್ಕೆ ಕರ್ನಾಟಕ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಟೀಕೆ ಮಾಡಿದ್ದಾರೆ. "ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ
ನರೇಂದ್ರ ಮೋದಿಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು." ಎಂದು ಒತ್ತಾಯಿಸಿದ್ದಾರೆ
"ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ." ಎಂದು ಟೀಕಿಸಿದ್ದಾರೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications