ಮೈಸೂರು ಬಗ್ಗೆ ಒಲವಿದ್ದ ಎಸ್. ಜಾನಕಿ ಅವರ ಸ್ಮಾರಕ ಅಲ್ಲೇ ನಿರ್ಮಿಸಬೇಕು: ಬಸವರಾಜ ಬೊಮ್ಮಾಯಿ

​ಹಾವೇರಿ: ಖ್ಯಾತ ಬಹುಭಾಷಾ ಗಾಯಕಿ ಎಸ್. ಜಾನಕಿ (S Janaki) ಅವರು ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಭಾನುವಾರ ಹಾವೇರಿ ನಗರದಲ್ಲಿ ​ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸತತವಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಅವರು ಸಂಗೀತ ಸೇವೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಬರೋಬ್ಬರಿ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಅವರು, ಪ್ರತಿಯೊಂದು ಹಾಡಿನಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು ಹಾಡಿದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ" ಎಂದು ಅವರ ಸಾಧನೆ ಗುಣಗಾನ ಮಾಡಿದರು.

Memorial for Singer S Janaki

​ಧ್ವನಿಯ ಏರಿಳಿತ ಅವರ ವಿಶಿಷ್ಟ ಶಕ್ತಿ

"ಎಸ್. ಜಾನಕಿ ಅವರ ಧ್ವನಿಯ ಬದಲಾವಣೆ ಅಥವಾ ಮಾಡ್ಯುಲೇಶನ್ ಅತ್ಯಂತ ವಿಶಿಷ್ಟವಾಗಿತ್ತು. ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೂ ಎಲ್ಲ ತರಹದ ಹಾಡುಗಳನ್ನು ಹಾಡುವ ಅದ್ಭುತ ಶಕ್ತಿ ಅವರಿಗೆ ಒಲಿದಿತ್ತು. ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು. ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಪ್ರಾರ್ಥಿಸಿದರು.

​ಮೈಸೂರಲ್ಲಿ ಸುಸಜ್ಜಿತ ಸ್ಮಾರಕ ನಿರ್ಮಾಣ

ಗಾಯಕಿ ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದ ಅವರು, ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂದು ಬಯಸಿದ್ದರು. ಇದು ಅವರಿಗೆ ಕನ್ನಡಿಗರು ಮತ್ತು ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

​ಅವರ ನೆನಪನ್ನು ಜೀವಂತವಾಗಿರಿಸಲು ರಾಜ್ಯ ಸರ್ಕಾರ ಏನು ಮಾಡಬೇಕು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು. ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರು ಹಾಡಿದ ರೀತಿಗಳ ಬಗ್ಗೆ ಸಂಶೋಧನೆ ನಡೆಸಲು ಮತ್ತು ಸಂಗೀತ ಕಲಿಯುವ ಆಸಕ್ತಿಯುಳ್ಳ ಯುವ ಪ್ರತಿಭೆಗಳಿಗೆ ತರಬೇತಿ ಹಾಗೂ ಸ್ಫೂರ್ತಿ ನೀಡುವಂತಹ ವ್ಯವಸ್ಥೆಯನ್ನು ಆ ಸ್ಮಾರಕದಲ್ಲಿ ಕಲ್ಪಿಸಬೇಕು" ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

​ದಸರಾದಲ್ಲಿ ಕಂಬಳ ಸಮಿತಿ ತೀರ್ಮಾನ

ಇದೇ ವೇಳೆ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು"ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವುದು ಸಹಜ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಅವರು ಸ್ಪಷ್ಟಪಡಿಸಿದರು.

ಆಂಧ್ರ ಮೂಲದವರಾದರೂ ಎಸ್ ಜಾನಕಿ ಅವರು ಕನ್ನಡದಲ್ಲಿ ಅಪಾಯ ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಮೈಸೂರಿನ ಕುರಿತು ವಿಶೇಷ ಒಲವಿತ್ತು. ಮುಂದಿನ ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಂಡರೆ ಮೈಸೂರಲ್ಲಿ ಸುವ್ಯವಸ್ಥೆಇ ಸ್ಮಾರಕ ನಿರೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+