• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ; ಎಎಪಿ, ಟಿಎಂಸಿಗೆ ಟ್ವೀಟ್ ಬಾಣ ಬಿಟ್ಟ ಪಿ. ಚಿದಂಬರಂ

|
Google Oneindia Kannada News

ಪಣಜಿ, ಜನವರಿ 17; "ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಎಎಪಿ ಮತ್ತು ಟಿಎಂಸಿಗೆ ಟ್ವೀಟ್ ಬಾಣ ಬಿಟ್ಟಿದ್ದಾರೆ. ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದೆ.

ಗೋವಾ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರಾಗಿರುವ ಪಿ. ಚಿದಂಬರಂ ಸೋಮವಾರ ವಿಧಾನಸಭೆ ಚುನಾವಣೆ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ಗೋವಾದಲ್ಲಿ ಕಣಕ್ಕಿಳಿಯಲಿರುವ ಎಎಪಿ ಮತ್ತು ಟಿಎಂಸಿಗೆ ತಿರುಗೇಟು ನೀಡಿದರು.

ಗೋವಾ ಚುನಾವಣೆ; ಜನವರಿ 19ರಂದು ಬಿಜೆಪಿ ಅಭ್ಯರ್ಥಿಗಳು ಘೋಷಣೆ ಗೋವಾ ಚುನಾವಣೆ; ಜನವರಿ 19ರಂದು ಬಿಜೆಪಿ ಅಭ್ಯರ್ಥಿಗಳು ಘೋಷಣೆ

"ನನ್ನ ವಿಶ್ಲೇಷಣೆ ಪ್ರಕಾರ ಎಎಪಿ ಮತ್ತು ಟಿಎಂಸಿ ಬಿಜೆಪಿ ಯೇತರ ಪಕ್ಷಗಳ ಮತಗಳನ್ನು ವಿಭಜನೆ ಮಾಡಲಿವೆ. ಇದು ಅರವಿಂದ ಕೇಜ್ರಿವಾಲ್ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ" ಎಂದು ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಗೋವಾ; ಎಎಪಿಗೆ ಉತ್ಪಲ್ ಪರಿಕ್ಕರ್ ಆಹ್ವಾನಿಸಿದ ಕೇಜ್ರಿವಾಲ್ ಗೋವಾ; ಎಎಪಿಗೆ ಉತ್ಪಲ್ ಪರಿಕ್ಕರ್ ಆಹ್ವಾನಿಸಿದ ಕೇಜ್ರಿವಾಲ್

"10 ವರ್ಷಗಳ ದುರಾಡಳಿತ ಬಳಿಕ ಬದಲಾವಣೆ ಬೇಕಾದ ಜನರು ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ಅದೇ ಆಡಳಿತ ಬೇಕು ಎನ್ನುವವರು ಬಿಜೆಪಿಗೆ ಮತ ನೀಡಲಿದ್ದಾರೆ" ಎಂದು ಪಿ. ಚಿದಂಬರಂ ಹೇಳಿದ್ದಾರೆ.

ಗೋವಾ; ಶಿವಸೇನೆ & ಎನ್‌ಸಿಪಿ ಮೈತ್ರಿ, ದೂರ ಉಳಿದ ಕಾಂಗ್ರೆಸ್! ಗೋವಾ; ಶಿವಸೇನೆ & ಎನ್‌ಸಿಪಿ ಮೈತ್ರಿ, ದೂರ ಉಳಿದ ಕಾಂಗ್ರೆಸ್!

"ಗೋವಾದ ಜನರ ಮುಂದಿನ ಆಯ್ಕೆ ಸ್ಪಷ್ಟವಾಗಿದೆ. ನಿಮಗೆ ಹಿಂದಿನ ಅಭಿವೃದ್ಧಿ ಅಧ್ಯಾಯಗಳು ಬೇಕು ಎಂದರೆ ಕಾಂಗ್ರೆಸ್‌ಗೆ ಮತ ನೀಡಿ. ಬದಲಾವಣೆಗಾಗಿ ಕಾಂಗ್ರೆಸ್‌ಗೆ ಮತ ಕೊಡಿ" ಎಂದು ಪಿ. ಚಿದಂಬರಂ ಮನವಿ ಮಾಡಿದರು.

ಅರವಿಂದ್ ಕೇಜ್ರಿವಾಲ್ ಪ್ರಚಾರ; ಗೋವಾ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಟಿಎಂಸಿ ಮತ್ತು ಎಎಪಿ ಮೊದಲ ಬಾರಿಗೆ ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.

ಶನಿವಾರ ಮತ್ತು ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಹ ಪಕ್ಷ ಬಿಡುಗಡೆ ಮಾಡಿದೆ. ಭಾನುವಾರ ಗೋವಾ ಚುನಾವಣಗೆ 13 ಅಂಶಗಳ ಕಾರ್ಯಕ್ರಮಗಳನ್ನು ಸಹ ಕ್ರೇಜ್ರಿವಾಲ್ ಘೋಷಣೆ ಮಾಡಿದರು.

ಕಾಂಗ್ರೆಸ್ ಗೋವಾ ಚುನಾವಣೆ ಎದುರಿಸಲು ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು.

ಮೈತ್ರಿ ಇಂದ ಕಾಂಗ್ರೆಸ್ ದೂರ; ಗೋವಾ ವಿಧಾನಸಭೆ ಚುನಾವಣೆಗೆ ಎನ್‌ಸಿಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿವೆ. ಆದರೆ ಕಾಂಗ್ರೆಸ್ ಪಕ್ಷ ಈ ಮೈತ್ರಿಕೂಟಕ್ಕೆ ಸೇರಿಲ್ಲ. ಶೀವಸೇನೆ ಕಾಂಗ್ರೆಸ್‌ಗೆ ಮೈತ್ರಿಕೂಟದ ಸೀಟು ಹಂಚಿಕೆ ಸಭೆಗೆ ಬರುವಂತೆ ಆಹ್ವಾನ ನೀಡಿತ್ತು. ಆದರೆ ಕಾಂಗ್ರೆಸ್ ಸೀಟು ಹಂಚಿಕೆಗೆ ಒಪ್ಪದೇ ಮೈತ್ರಿಕೂಟದಿಂದ ದೂರವಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಜೊತೆ ಸೇರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಆದರೆ ಗೋವಾದಲ್ಲಿ ಎರಡೂ ಪಕ್ಷಗಳ ಜೊತೆ ಹೊಂದಾಣಿಕೆಗೆ ಒಪ್ಪಿಗೆ ನೀಡಿಲ್ಲ. ಅಲ್ಲದೇ ಟಿಎಂಸಿ ಕಾಂಗ್ರೆಸ್ ಜೊತೆ ಮೈತ್ರಿ ಬಯಸಿತ್ತು. ಆದರೆ ಪಕ್ಷ ನಿರಾಕರಿಸಿದೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಅಲ್ಲದೇ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಎಎಪಿ ಪಕ್ಷ ಎರಡನೇ ಅತಿದೊಡ್ಡ ಪಕ್ಷವಾಗಲಿದ್ದು, ಪ್ರತಿಪಕ್ಷ ಸ್ಥಾನ ಅಲಂಕರಿಸಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.

Recommended Video

   Virat Kohli ಕ್ಯಾಪ್ಟೆನ್ಸಿ ನಿರ್ಗಮನದ ಹಿಂದೆಯೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ICC | Oneindia Kannada

   ಶಿವಸೇನೆ ನಾಯಕ ಸಂಜಯ್ ರಾವತ್ ಮಾತನಾಡಿ, "ಗೋವಾದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿದರೆ ಶಾಸಕರ ಸಂಖ್ಯೆ ಒಂದಂಕಿ ದಾಟುವುದಿಲ್ಲ. ಕಾಂಗ್ರೆಸ್ 30 ಸ್ಥಾನದಲ್ಲಿ ಸ್ಪರ್ಧಿಸಲಿ ಉಳಿದ ಕ್ಷೇತ್ರವನ್ನು ಮೈತ್ರಿಕೂಟಕ್ಕೆ ಬಿಟ್ಟುಕೊಡಲಿ" ಎಂದು ಹೇಳಿದ್ದಾರೆ.

   English summary
   Senior Congress leader P. Chidambaram tweeted that the contest in Goa is between Congress and BJP. My assessment that the AAP and the TMC will only fracture the non-BJP vote.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X